ಪುಸ್ತಕ ಲೋಕ
ಯಮೂನಾ ಮೂರ್ತಿ ಯವರ ಹೊಸ ಪುಸ್ತಕ
ಪ್ರಕಾಶಕರು – ನ್ಯೂ ವೇವ್ ಬುಕ್ , ಬೆಂಗಳೂರು. ಪುಟಗಳು – ೧೫೬ , ಮುಖ ಬೆಲೆ- ೧೧೦
ಯಮುನಾಮೂರ್ತಿಯವರು ರಂಗಭೂಮಿ, ಹಿರಿತೆರೆ, ಕಿರುತೆರೆಯಲ್ಲಿ ಕಲಾವಿದರಾಗಿ ಪ್ರಸಿದ್ದರು. ಇಪ್ಪತ್ತೆಂಟು ವರ್ಷ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ನಾಟಕಗಳಲ್ಲಿ ತೊಡಗಿಸಿಕೊಂಡ ಅವರು ತಮ್ಮ ರಚನೆಯಲ್ಲಿ ಹಾಸ್ಯವನ್ನು ನೀಡುತ್ತ ಬಂದವರು.
ಪ್ರಸ್ತುತ ಪುಸ್ತಕದಲ್ಲಿ ವಿಡಂಬನೆಯ ಮೂಲಕ ದಿನ ನಿತ್ಯದ ಘಟನೆಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಹದಿನೈದು ಹಾಸ್ಯ ಲೇಪಿತ ಲಘು ಬರಹಗಳಿವೆ. ಇವುಗಳನ್ನು ಓದುತ್ತಿದ್ದಂತೆ ನಿಮ್ಮ ಮುಖದಲ್ಲಿ ನಗುವಿನ ಗೆರೆ ಮೂಡದಿದ್ದರೆ ಕೇಳಿ. ಲೇಖಕಿ ನಗೆಯ ಮೂಲಕ ಜೀವನವನ್ನು ನೋಡಿದ ರೀತಿ ಸಹಜವಾಗಿದೆ. ಈ ಪುಸ್ತಕವನ್ನು ಕುರಿತು ನಗೆ ಕೂಟದ ವೈವಿ. ಗುಂಡೂರಾವ್ ಹೀಗೆ ಬರೆಯುತ್ತಾರೆ.
ಶ್ರೀಮತಿ ಯಮುನಾ ಮೂರ್ತಿ ನಗುವ, ನಗಿಸುವ, ನಗಿಸಿ, ನಗುತ ಬಾಳುವ ವರವ ಪಡೆದು ಬಂದಿದ್ದಾರೆ. ಅವರಿಗೆ ಹಾಸ್ಯ ಪ್ರಜ್ಞೆ ಹಾಸಲುಂಟು, ಹೊದೆಯಲುಂಟು, ಒದೆಯಲುಂಟು, ಚುಚ್ಚಲುಂಟು, ಸಾಕ್ಷಿ ಬೇಕಾ? ಹಾಗಿದ್ದರೆ ಈ ಪುಸ್ತಕ ಓದಿ. ತಿಳಿ ಹಾಸ್ಯದ ಮೂಲಕ ತಿಳಿ ಬಾಳನ್ನ ಹೊತ್ತು ತಂದಿರುವ ಈ ಪುಸ್ತಕ ನಿಮ್ಮ ಮನೆಯಲ್ಲಿರಬೇಕಾದ ಎಲ್ಲಾಅರ್ಹತೆ ಹೊಂದಿದೆ.