ಗಾಂಧೀಜಿ ಹೀಗಿದ್ದರು.

ಒಮ್ಮೆ ಗಾಂಧೀಜಿ ವಾರ್ಧಾ ಆಶ್ರಮಕ್ಕೆ ಹೋಗಿದ್ದರು. ಅಲ್ಲಿ ಭೂದಾನ ಚಳುವಳಿಯಲ್ಲಿ ಸಕ್ರಿಯರಾಗಿದ್ದ ವಿನೋಬಾ ಭಾವೆಯವರನ್ನು ಭೇಟಿಯಾಗಿ ಮಾತಾಡಿಸಿದರು. ಅಲ್ಲಿಯ ಆಶ್ರಮವಾಸಿಗಳಿಗೆ ಭಗವದ್ಗೀತೆಯನ್ನು ಬೋಧಸುತ್ತಿದ್ದೀರಾ ಎಂದು ಕೇಳಿದರು. ವಿನೋಬಾಜಿ ಇಲ್ಲ ಎಂಬಂತೆ ತಲೆಯಾಡಿಸಿದರು.

‘ಯಾಕೆ? ಭಗವದ್ಗೀತೆ ಬೋಧಿಸಿದರೆ ತಪ್ಪೇನು?’ – ಎಂದು ಕೇಳಿದರು ಗಾಂಧೀಜಿ.

‘ತಪ್ಪೇನೂ ಇಲ್ಲ. ಈ ಬಗ್ಗೆ ಯೋಚಿಸಿರಲಿಲ್ಲ.’, – ಎಂದ ವಿನೋಬಾಜಿ ಇನ್ನು ಮುಂದೆ ಆಶ್ರಮವಾಸಿಗಳು ಭಗವದ್ಗೀತೆಯನ್ನೂ ಕಲಿಯುತ್ತಾರೆ ಎಂದರು. ಮತ್ತು ಅಲ್ಲಿ ಸೇರಿದ್ದ ಎಲ್ಲರೆದುರಿಗೆ ಭಗವದ್ಗೀತೆಯ ಒಂದು ಶ್ಲೋಕವನ್ನು ಉಚ್ಛರಿಸಿದರು. ಅದು ಹೀಗಿತ್ತು.

ದುಖೇಷ್ಟು ಉದ್ವಿಗ್ನ ಮನಃ ಸುಖೇಷು ವಿಗತ್ಪರಃ ವೀತಿರಾಗ ಭಯಂ ಕ್ರೂರಃ ಸ್ಥಿತ ಧೀರ್ಮುನಿರುಚ್ಛತೇ

ದುಃಖಗಳು ಜೀವನದಲ್ಲಿ ಬಂದಾಗ ಉದ್ವೇಗಗೊಳ್ಳದವನು, ಮತ್ತು ಸುಖ ಬಂದಾಗ ಸಮಚಿತ್ತದಲ್ಲಿ ಇರುವವನು ಆಸಕ್ತಿ, ಭಯ, ಕ್ರೋಧಗಳಿಂದ ಮುಕ್ತನಾದವನು ಸ್ಥಿತ ಪ್ರಜ್ಞ ಎಂದು ಹೇಳಲ್ಪಡುತ್ತಾನೆ. ಇಷ್ಟನ್ನು ಭಾವೆಯವರು ಹೇಳಿ ಮುಗಿಸುತ್ತಿದ್ದಂತೆಯೇ ಗಾಂಧೀಜಿಯವರು ಯೋಚನಾ ಮಗ್ನರಾದರು. ಅಂದಿನ ಸಭೆ ಬರಖಾಸ್ತಾಯಿತು.

‘ಮನುಷ್ಯನಾದವನಿಗೆ ಕಷ್ಟಗಳು ತಪ್ಪಿದ್ದಲ್ಲ. ಬಂದೇ ಬರುತ್ತವೆ. ಅವು ಬಂದಾಗ ನಾವು ಯಾತಕ್ಕೆ ಉದ್ವೇಗಗೊಳ್ಳಬೇಕು? ಧೈರ್ಯವಂತ ಮಾತ್ರ ಬಂದ ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತಾನೆ. ಕಷ್ಟಗಳು ಬಂದವಲ್ಲಾ ಎಂದು ದುಃಖಿಸುವುದು ಹೇಡಿಯ ಲಕ್ಷಣ.’

(miseries will come in our life, accepting or not accepting is our choice) ಸುಖ ಬಂದಾಗ ಇನ್ನೂ ಹೆಚ್ಚಿನ ಸುಖ ಬೇಕೆನ್ನುವುದು ಮನುಷ್ಯನ ಸ್ವಭಾವ. ಈ ಆಸೆಯೇ ಅವನ ದುಃಖಕ್ಕೆ ಮೂಲವಾಗುತ್ತದೆ. ಸಮಚಿತ್ತದಿಂದ ಎಲ್ಲವನ್ನೂ ಸ್ವೀಕಾರ ಮಾಡುವವನೇ ನಿರ್ಮೋಹಿ.

ಗಾಂಧೀಜಿ ಕೇಳುತ್ತ ಹೋದರು. ವಿನೋಭಾ ಇಂಥ ಅನೇಕ ವಿವರಣೆ ಕೊಡುತ್ತ ಗೀತೆಯ ಸಾರವನ್ನು ಹೇಳತೊಡಗಿದಾಗ ಅಲ್ಲಿದ್ದವರೆಲ್ಲ ತಲೆದೂಗಿದರು. ಎಲ್ಲವನ್ನೂ ಕೇಳಿದ ಗಾಂಧೀಜಿ ಮೌನವಾಗಿ ವಿನೋಬಾಜಿಯನ್ನು ನೋಡಿ ನಂತರ ಎದ್ದು ಹೋದರು. ಅದು ವಿನೋಬಾಜಿಗೆ ಅಚ್ಚರಿ ತಂದಿತು.

ಮರುದಿನ ಮತ್ತೆ ಭಗವದ್ಗೀತೆಯ ಪ್ರವಚನಕ್ಕೆ ಎಲ್ಲ ಸೇರಿದರು. ವಿನೋಬಾಜಿ ಎಲ್ಲ ಸಿದ್ಧತೆಗಳೊಂದಿಗೆ ಪ್ರವಚನ ಮಾಡಲು ಬಂದು ಕೂತರು. ಆದರೆ ಅಲ್ಲಿ ಗಾಂಧೀಜಿಯವರ ಸುಳಿವೇ ಕಾಣಲಿಲ್ಲ. ಎಲ್ಲರಿಗೂ ಅಚ್ಚರಿ. ಆಶ್ರಮದಲ್ಲಿ ಭಗವದ್ಗೀತೆ ಪ್ರವಚನ ಆರಂಭಿಸಲು ಹೇಳಿದವರೇ ಗಾಂಧೀಜಿ. ಈಗ ಅವರೇ ಇಲ್ಲ. ಆದರೂ ವಿನೋಬಾಜಿಯವರು ಎಂದಿನ ಉತ್ಸಾಹದಲ್ಲಿ ಪ್ರವಚನ ಹೇಳಿ ಮುಗಿಸಿದರು.

ಮರು ದಿನ ಬಂದ ಗಾಂಧೀಜಿಯನ್ನು ವಿನೋಬಾಜಿ ಮೆಲ್ಲಗೆ ಕೇಳಿದರು.

‘ಅದೇನು? ನೀವೇ ಗೀತೆಯ ಬಗ್ಗೆ ಪ್ರವಚನ ಮಾಡಲು ಹೇಳಿದಿರಿ. ನೋಡಿದರೆ ನೀವೇ ಗೈರು ಆದಿರಿ. ಯಾಕೆ. ನನ್ನ ಪ್ರವಚನ ಅಷ್ಟು ಕೆಟ್ಟದ್ದಾಗಿತ್ತೆ?’

ಎಂದು ಪ್ರಶ್ನಿಸಿದರು. ಅದಕ್ಕೆ ನಸು ನಕ್ಕ ಗಾಂಧೀಜಿ ಕೊಟ್ಟ ಉತ್ತರ ಹೀಗಿತ್ತು.

‘ ಇಲ್ಲ ವಿನೋಬಾಜಿ. ನಿನ್ನೆ ನೀವು ಮಾಡಿದ ಪ್ರವಚನ ಅತ್ಯದ್ಭುತವಾಗಿತ್ತು. ನಿನ್ನೆ ನೀವು ಆ ಶ್ಲೋಕದ ಬಗ್ಗೆ ಕೊಟ್ಟ ವಿವರಣೆ ನನ್ನನ್ನು ಯೋಚನೆಗೀಡು ಮಾಡಿತು. ಅದು ಕೇಳಿ ಬಿಡುವುದಲ್ಲ. ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆಂದು ನಿನ್ನೆ ಇಡೀ ದಿನ ಯೋಚಿಸಿದೆ. ನಾವು ಪ್ರವಚನಗಳನ್ನು ಕೇಳುವುದು ಎಷ್ಟು ಮುಖ್ಯವೋ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಮುಖ್ಯ. ಅದಕ್ಕೊಂದು ಒಳ್ಳೆಯ ಉದಾಹರಣೆ ಅಂದರೆ ನೀವೇ. ನೀವು ನುಡಿದಂತೆ ನಡೆಯುತ್ತೀರಿ. ನೀವೇ ನಮಗೆ ಮಾದರಿ ಎಂಬುದು ಅರಿವಿಗೆ ಬಂತು. ಇನ್ನು ಮುಂದಿನ ಪ್ರವಚನ ಸುರು ಮಾಡಿ. ಪೂರ್ತಿ ಕೇಳುತ್ತೇನೆ ‘

ಅಂದರು. ಅಲ್ಲಿದ್ದವರೆಲ್ಲ ಬಾಪೂಜಿಯ ಮಾತು ಕೇಳಿ ಖುಶಿ ಪಟ್ಟರು. ಮತ್ತು ವಿನೋಬಾಜಿಯ ಮುಂದಿನ ಪ್ರವಚನ ಕೇಳಲು ಆಸಕ್ತಿಯಿಂದ ಕುಳಿತರು.

#ಚತನ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW