– ಜನಪದ ಕವಿ ದುಂಡಪ್ಪ ಕೋರಿ, ಅಮಟೂರು ಗ್ರಾಮ, ಬೈಲಹೊಂಗಲ ತಾಲೂಕು, ಬೆಲಗಾವಿ ಜಿಲ್ಲೆ.
ಆತ್ಮ ಸಾಕ್ಷಿ
ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ಕಟಕಟೆಯಲ್ಲಿ ನಿಂತ ಒಬ್ಬನನ್ನು ಕೇಳುತ್ತಾರೆ.
‘ ನೋಡು. ಸುಳ್ಳು ಹೇಳಿದ್ರೆ ನಿನ್ನ ಬಿಡೋದಿಲ್ಲ. ಸುಳ್ಳು ಹೇಳಿದ್ದಕ್ಕೆ ಒಂದು ಶಿಕ್ಷೆ. ಅಪರಾಧ ಮಾಡಿದ್ದಕ್ಕೆ ಒಂದು ಶಿಕ್ಷೆ. ಹೀಗೆ ಡಬಲ್ ಶಿಕ್ಷೆ ಆಗುತ್ತದೆ. ನಿಜಾ ಹೇಳು.’ ಅನ್ನುತ್ತಾರೆ. ಈಗ ಅಪರಾಧಿ ಯೋಚಿಸುತ್ತಾನೆ.
‘ ಎಲಾ ಇವ್ನ. ಖರೇ ಹೇಳಿದ್ರೆ ಅದೇ ಖರೇ ಗಟ್ಟಿಯಾಗಿ ಆಗಿ ಒಂದು ಶಿಕ್ಷೆ ಆಗುವುದಂತೂ ಖಂಡಿತ. ಇನ್ನು ಸುಳ್ಳು ಹೇಳಿದ್ರೆ ಡಬಲ್ ಶಿಕ್ಷೆ ಆಗುತ್ತದೆ. ಸುಳ್ಳು ಹೇಳಿದ್ರೂ ಶಿಕ್ಷೆ. ಖರೇ ಹೇಳಿದ್ರೂ ಶಿಕ್ಷೆ. ಎಲ್ಲಿದೆ ನ್ಯಾಯ? ಹಾಗಾದರೆ ಎಲ್ಲಿದೆ ರಕ್ಷೆ. ತುಡುಗು ಮಾಡದಿರುವುದೇ ಇದಕ್ಕೆ ದಾರಿ.
ಎಂದುಕೊಳ್ಳುತ್ತಾನೆ. ಆದರೆ ಕಳವು ಮಾಡಿಯಾಗಿದೆ. ಪೋಲೀಸರ ಕೈಗೆ ಸಿಕ್ಕು ಒದೆ ತಿಂದೂ ಆಗಿದೆ. ಇನ್ನು ಇದರಿಂದ ತಪ್ಪಿಸಿಕೊಳ್ಲಲು ಸಾಧ್ಯ ಇಲ್ಲ. ಸುಳ್ಳು ಹೇಳಿ ಕೋರ್ಟಿನಲ್ಲಿ ವಾದಿಸು ವುದರಿಂದ ಏನೂ ಲಾಭವಿಲ್ಲ. ಕಡಿಮೆ ಶಿಕ್ಷೆಯಾದರೂ ಪರವಾಗಿಲ್ಲ. ಖರೇನೇ ಹೇಳಬೇಕು. ಬೇರೆ ಉಪಾಯಗಳೇ ಇಲ್ಲ. ಮೊದಲು ತುಡುಗು ಮಾಡಿದ್ದೇ ಅಪರಾಧ. ಅಪರಾಧಕ್ಕೆ ಶಿಕ್ಷೆ ಇದ್ದೇ ಇರುತ್ತದೆ. ಅದು ಅನಿವಾರ್ಯ. ಈಗ ಸತ್ಯ ಹೇಳಿ ಶಿಕ್ಷೆ ಕಡಿಮೆ ಮಾಡಿಸಿಕೊಳ್ಳಬೇಕು. ಮುಂದೆ ಇಂಥ ತಪ್ಪು ಮಾಡಲೇ ಬಾರದು. ಎಂದು ಯೋಚಿಸುತ್ತಾನೆ.
ಒಬ್ಬ ಸಾಧಾರಣ ಕಳ್ಳನಿಗೇ ಇಂಥದೊಂದು ಆತ್ಮ ಸಾಕ್ಷಿ ಇರುವುದಾದರೆ. ಇವತ್ತು ನಾಡನ್ನೇ ಕೊಳ್ಳೆ ಹೊಡೆಯುತ್ತಿರುವ ಕಳ್ಳರಿಗೆ ಯಾಕಿಲ್ಲ ಎಂಬುದೇ ಒಂದು ಪ್ರಶ್ನೆ.
#ಸಹತಯ #ಪಸತಕ