ವೃದ್ಧಾಶ್ರಮದಲ್ಲಿ ಅಸು ನೀಗಿದ ಹಾಸ್ಯ ಕಲಾವಿದ ಅಕ್ಕಿ ಚನ್ನಬಸಪ್ಪ

ಅಕ್ಕಿ ಚನ್ನಬಸಪ್ಪ ಎಂದಾಗ ನಮ್ಮ ನೆನಪಿಗೆ ಬರುವುದು ಅವರ ಹಾಸ್ಯ ನಟನೆ. ನಾಕುತಂತಿ, ಸಿಲ್ಲಿ-ಲಲ್ಲಿ ಧಾರಾವಾಹಿಗಳು ಮತ್ತು ಜಿಪುಣ ನನ್ನ ಗಂಡ, ಮುಸ್ಸಂಜೆ, ಕನಸೇನೆಂಬ ಕುದರೆಯನ್ನೇರಿ ಸೇರಿದಂತೆ ೧೦೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಕ್ಕಿಯವರು ಬೆಳ್ಳಿತೆರೆಯನ್ನು ಪ್ರವೇಶಿಸಿದಾಗ ಅವರಿಗೆ ೬೦ ವರ್ಷ. ಇವರು ಬೆಳ್ಳಿತೆರೆ ಮೇಲೆ ಹಾಸ್ಯ ಕಲಾವಿದರಾಗಿ ತಡವಾಗಿಯೇ ಕಾಣಿಸಿಕೊಂಡರೂ ಸಹ ಪ್ರೇಕ್ಷಕರ ಮನ ಗೆಲ್ಲುವಲ್ಲಿ ತಡ ಮಾಡಲಿಲ್ಲ. ಆದರೆ ಇವರು ಬಣ್ಣ ಹಚ್ಚಿದ್ದು ಮಾತ್ರ ಬಾಲ ಕಲಾವಿದರಾಗಿ. ಗುಬ್ಬಿವೀರಣ್ಣ, ಮಾ. ಹಿರಣ್ಣಯ್ಯ ಕಂಪನಿಗಳು ಸೇರಿದಂತೆ ರಾಜ್ಯದ ಪ್ರಮುಖ ವೃತ್ತಿ ನಾಟಕ ಕಂಪೆನಿಗಳಲ್ಲಿ ಸಾಕಷ್ಟು ದುಡಿದವರು. ಮತ್ತು ಇವರ ಕಂಚಿನ ಕಂಠದಿಂದಾಗಿ ನಾಟಕದಲ್ಲಿ, ಸಿನಿಮಾಗಳಲ್ಲಿ ಸಾಕಷ್ಟು ಆಕರ್ಷಿತವಾದವರು. ಸಿನಿಮಾಗಳಲ್ಲಿ ಪೋಷಕ ನಟನಾಗಿ ಮಿಂಚಿದವರು.

ನಟ ಜ್ಯೂನಿಯರ್ ರಾಜಕುಮಾರ ಅವರು ನಡೆಸುತ್ತಿದ್ದ ಕುಂಬಳಗೋಡು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು ಮತ್ತು ಅವರ ಜೀವನದ ಕೊನೆಯು ಇದೇ ಆಶ್ರಮದಲ್ಲಿಯೇ ಆಯಿತು.

ವೃದ್ದಾಶ್ರಮ ಎಂದಾಗ ಎಲ್ಲರ ಮನಸ್ಸಿಗೂ ನೋವಾಗುವುದು ಸಹಜ. ಮಕ್ಕಳಿಂದ ತಿರಸ್ಕುತರಾದವರು ಆಶ್ರಯ ಪಡೆಯುವ ಸ್ಥಳ ಈ ವೃದ್ಧಾಶ್ರಮಗಳು ಎನ್ನುವ ನಂಬಿಕೆ ಎಲ್ಲರದು. ಆದರೆ ಅಕ್ಕಿಯವರು ವೃದ್ಧಾಶ್ರಮದಲ್ಲಿ ಕಳೆಯಲು ಕಾರಣ ಒಂದು ಬಡತನ, ಇನ್ನೊಂದು ಅವರನ್ನು ನೋಡಿಕೊಳ್ಳಲು ಯಾರು ವಾರುಸುದಾರರು ಇಲ್ಲದ್ದು.

ವೃತ್ತಿ ನಾಟಕದ ಕಂಪೆನಿಯಲ್ಲಿನ ನಟಿಯನ್ನೇ ಮದುವೆಯಾಗಿದ್ದರು. ಆದರೆ ಇವರ ಮದುವೆಯಾಗಿದ್ದು ತುಂಬಾ ತಡವಾಗಿ. ಇವರಿಗೆ ಹೆಂಡತಿ ಆಸರೆ, ಹೆಂಡತಿಗೆ ಇವರ ಆಸರೆ ಹೀಗೆ ಒಬ್ಬಾನೊಬ್ಬರು ಬಿಟ್ಟರೆ ಬೇರೆ ಕುಟುಂಬದ ಯಾರ ಸಂಪರ್ಕವೂ ಇವರಿಗೆ ಇರಲಿಲ್ಲ. ನಟನೆಯಿಂದಲೇ ಇವರ ಜೀವನದ ಬಂಡಿ ಸಾಗುತ್ತಿತ್ತು. ದುರದೃಷ್ಟ ಎಂಬಂತೆ ಹೆಂಡತಿಗೆ ಕ್ಯಾನ್ಸರ್ ಕಾಯಿಲೆ ಆವರಿಸಿತು. ಅಕ್ಕಿಯವರು ದುಡಿದ ಅಲ್ಪ- ಸ್ವಲ್ಪ ಹಣವೆಲ್ಲಾ ಹೆಂಡತಿಯ ಕಾಯಿಲೆಗೆ ಖರ್ಚಾಯಿತು. ಕೊನೆಗೆ ಐದು ವರ್ಷದ ಹಿಂದೆ ಚಿಕಿತ್ಸೆಯು ಫಲಕಾರಿಯಾಗದೆ ಇವರ ಪತ್ನಿ ಇವರಿಂದ ದೂರವಾದರು.

ಪತ್ನಿಯ ಅಗಲಿಕೆಯಿಂದ ನೊಂದಿದ್ದ ಇವರು ಒಂದು ವರ್ಷಗಳ ಕಾಲ ನಟನೆಯಿಂದ ದೂರ ಉಳಿದರು.ಇವರಿಗೆ ಸರ್ಕಾರದಿಂದ ಕೇವಲ ಸಾವಿರದ ಇನ್ನೂರು ರೂಪಾಯಿಯಸ್ಟೇ ಮಾಸಾಶನ ಸಿಗುತ್ತಿತ್ತು. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಯಿತು. ಪತ್ನಿ ಸಾವಿನಿಂದ ಚೇತರಿಸಿಕೊಂಡು ಮತ್ತೆ ಬಣ್ಣ ಹಚ್ಚಲು ಶುರುಮಾಡಿದರು. ತಿಂಗಳಲ್ಲಿ ಆರು ದಿನ, ತಪ್ಪಿದರೆ ಎಂಟು ದಿನವಸ್ಟೇ ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿತ್ತು.

ಇವರ ಕಷ್ಟ ಅರ್ಥ ಮಾಡಿಕೊಂಡ ಆಪ್ತರು ಇವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾದಾಗ ವೃದ್ಧಾಶ್ರಮದಲ್ಲಿ ಕೆಲವು ನಿರ್ಬಂಧಗಳಿದ್ದವು. ಆಶ್ರಮದಲ್ಲಿ ಮೊಬೈಲ್ ಬಳಸುವಂತಿರಲಿಲ್ಲ ಮತ್ತು ಆರು ಗಂಟೆಯೊಳಗೆ ವೃದ್ದಾ ಶ್ರಮದಲ್ಲಿ ಇರಬೇಕಾದ ನಿಯಮಗಳು ಇವರನ್ನುಕಟ್ಟಿ ಹಾಕಿದಂತಾಯಿತು. ಆದ ಕಾರಣ ಅಕ್ಕಿಯವರು ಆಶ್ರಮಕ್ಕೆ ಹೋಗಲು ಒಪ್ಪಲಿಲ್ಲ. ಇವರ ನಾಟಕ,ಶೂಟಿಂಗ್ ಮುಗಿಯುತ್ತಿದ್ದದ್ದೇ ತಡ ರಾತ್ರಿ, ಹೀಗಾಗಿ ಸ್ವಲ್ಪ ವರ್ಷ ವೃದ್ದಾಶ್ರಮದಿಂದ ದೂರವಿದ್ದರು. ಆದರೆ ಇವರ ವಯಸ್ಸು ಇವರ ಮನಸ್ಸಿನ ಮಾತು ಕೇಳಬೇಕಲ್ಲ. ಕೊನೆಗೂ ಅಕ್ಕಿಯವರು ಅನಾರೋಗ್ಯಕ್ಕೆ ತುತ್ತಾಗುವ ಒಂದು ವರ್ಷದ ಮೊದಲೇ ಜೂನಿಯರ್ ರಾಜಕುಮಾರ ನಡೆಸುತ್ತಿದ್ದ ವೃದ್ಧಾಶ್ರಮಕ್ಕೆ ಬಂದು ಸೇರಿದರು. ಮತ್ತು ಅಲ್ಲಿಯೇ ಅವರ ಕೊನೆಯಾಯಿತು

ಹೀಗೆ ತೆರೆಯ ಮೇಲೆ ಏಳು-ಬೀಳುವಿನ ಮಧ್ಯದಲ್ಲಿ ಏಳೆಂಟು ವರ್ಷ ಹಾಸ್ಯ ಕಲಾವಿದರಾಗಿ ನಮ್ಮನ್ನೆಲ್ಲಾ ರಂಜಿಸಿದ್ದ ಅಕ್ಕಿ ಚನ್ನಬಸಪ್ಪನವರು ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು ಎಲ್ಲರ ಮನಸ್ಸಿಗೂ ನೋವನುಂಟು ಮಾಡಿದ್ದು ನಿಜ.

ಅಕ್ಕಿಚನ್ನಬಸಪ್ಪ ಅವರಂತೆ ಸಾಕಷ್ಟು ಹಿರಿಯ ಕಲಾವಿದರು ಬಡತನದಲ್ಲಿದ್ದಾರೆ. ಅವರಿಗೆ ಸರ್ಕಾರದಿಂದ ಮಾಸಾಶನ ಅತಿ ಕಡಿಮೆಗೆ ಸಿಗುತ್ತಿದೆ. ಇತ್ತ ಕಡೆ ನಟನೆಯಲ್ಲಿಯೂ ಸರಿಯಾದ ಸಂಭಾವನೆ ಸಿಗುತ್ತಿಲ್ಲ. ಇದರಿಂದಾಗಿ ಹಲವಾರು ವರ್ಷಗಳ ಕಾಲ ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಿದ್ದ ಕಲಾವಿದರ ಆರ್ಥಿಕ ಸ್ಥಿತಿ ಚಿಂತನೀಯವಾಗಿದೆ. ಅಂತಹ ಕಲಾವಿದರ ಜೀವನಕ್ಕೆ ಸರ್ಕಾರ ನೆರವು ನೀಡಬೇಕು.

#ಕಲವದರ #ಸನಮ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW