ಹಿಂದೀ ನೆಲದಲ್ಲಿ ಗಾಳಿಯ ವೇಗದ ಕನ್ನಡ ಹುಡುಗ

ಉತ್ತರ ಭಾರತದ ಸ್ಕೇಟಿಂಗ್‌ನಲ್ಲಿ ಮಹತ್ತರಸಾಧನೆ ಮಾಡಿರುವ

ಸಮೃದ್ಧ ದಿನೇಶ್

ಇಂದಿನ ಎಲ್ಲಾ ಕ್ರೀಡೆಗಳಲ್ಲಿ ಹಿಂದಿಯವರೇ ಯಾಕೆ ಮಿಂಚುತ್ತಾರೆ ಎಂಬುದು ಎಲ್ಲರ ಪ್ರಶ್ನೆ. ಕ್ರಿಕೆಟ್‌, ಈಜು, ಕಬಡ್ಡಿ, ಕುಸ್ತಿ, ಓಟ ಇತ್ಯಾದಿ ಆಟಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಆಡುವವರು ಹಿಂದಿಯವರೇ. ಅಪರೂಪಕ್ಕೆ ಎಂಬಂತೆ ಅಲ್ಲಲ್ಲಿ ಕೆಲವು ಆಟಗಳಲ್ಲಿ ಕನ್ನಡದ ಪ್ರತಿಭೆಗಳು ಮಿಂಚುವುದೂ ಉಂಟು. ಅದೂ ಹೊರನಾಡಿನಲ್ಲಿರುವ ಕನ್ನಡಿಗರು ಇಂಥ ಕ್ಷೇತ್ರದಲ್ಲಿ ಎದ್ದು ಕಾಣುವುದು ಅಪರೂಪ. ಅಂಥವರಲ್ಲಿ ಗಾಝಿಯಾಬಾದಿನ ಅಮೇಥಿ ಇಂಟರ್‌ ನ್ಯಾಶನಲ್‌ ಸ್ಕೂಲಿನಲ್ಲಿ ಈಗ ಐದನೇ ತರಗತಿಯಲ್ಲಿ ಓದುತ್ತಿರುವ ಕನ್ನಡದ ಹುಡುಗ ಸಮೃದ್ಧ ಸ್ಕೇಟಿಂಗ್‌ನಲ್ಲಿ ಎದ್ದು ಕಾಣುತ್ತಿದ್ದಾನೆ.

ದಿನೇಶ್‌ ಎಸ್‌. ಎಂ | ನಂದಿನಿ ಹೂಲಿ | ಸಮೃದ್ಧ

ಉದ್ಯೋಗ ನಿಮಿತ್ತ ಹೈದರಾಬಾದ್‌ ದೆಹಲಿ ಎಂದೆಲ್ಲ ವಾಸ ಬದಲಿಸುವ ಈ ಕುಟುಂಬ ಈಗ ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ವಾಸವಾಗಿದೆ. ಹಿಯೂರು ತಾಲೂಕು ಸಿದ್ಲಯ್ಯನಕೋಟೆಯ ದಿನೇಶ್‌ ಎಸ್‌. ಎಂ. ಮತ್ತು ನಂದಿನಿ ಹೂಲಿ ದಂಪತಿಗಳ ಪುತ್ರನಾದ ಸಮೃದ್ಧ ಹೈದರಾಬಾದಿನಲ್ಲಿದ್ದಾಗಲೇ ಸ್ಕೇಟಿಂಗ್‌ನತ್ತ ಒಲವು ತೋರಿದ್ದ. ಅವನ ಆಸಕ್ತಿಗೆ ನೀರೆರದ ದಂಪತಿಗಳು ಮಗನನ್ನು ಈ ಕ್ಷೇತ್ರದಲ್ಲಿ ಬೆಳೆಸಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ಇವನ ಪ್ರತಿಭೆ ಕಂಡ ಶಾಲೆಯ ಕೋಚ್‌ ಇವನ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದಾರೆ. ದೆಹಲಿ ಮಟ್ಟದ, ಮತ್ತು ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆಗಳಲ್ಲಿ ಕಳುಹಿಸಿ ಹೆಚ್ಚಿನ ತಯಾರಿ ಮಾಡಿದ್ದಾರೆ.

ಮೀರತ್‌, ಹರಿದ್ವಾರ್‌, ನೋಯಡಾ, ದೆಹಲಿ, ಗುರ್‌ಗಾಂವ ಮುಂತಾದ ಕಡೆ ನಡೆದ ಇಪ್ಪತ್ತಕ್ಕೂ ಹೆಚ್ಚಿನ ಸ್ಪರ್ಧೆಯಲ್ಲಿ ಮೆಡಲ್‌ ಇಲ್ಲದೆ ವಾಪಸ್ಸು ಬಂದದ್ದೇ ಇಲ್ಲ. ಸುಮಾರು ಹತ್ತರಿಂದ ಇಪ್ಪತ್ತು ಕಿ.ಮೀ. ದೂರದ ನಿರಂತರ ಸ್ಕೇಟಿಂಗ್‌ನಲ್ಲಿ ದಾಖಲೆ ಮಾಡಿದ್ದಾನೆ. ತುಂಗಳಲ್ಲಿ ಎರಡು ಬಾರಿ ವಾರಾಂತ್ಯದ ಸಾಧನೆಗಾಗಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದೆದುರಿನ ರಸ್ತೆಯಲ್ಲೂ ಸ್ಕೇಟಿಂಗ್‌ ಮಾಡುವ ಸಮೃದ್ಧ ತನ್ನ ಕೋಚ್‌ ಶ್ರೀ.. ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾನೆ. ಪ್ರತಿದಿನವೂ ಬೆಳಿಗ್ಗೆ ನೋಯಡಾಕ್ಕೆ ಹೋಗಿ ಸ್ಕೇಟಿಂಗ್‌ ಅಭ್ಯಾಸ ಮಾಡುವ ಸಮೃದ್ಧ ಹೆಚ್ಚಿನ ಸಾಧನೆ ಮಾಡುವ ಗುರಿ ಹೊಂದಿದ್ದಾನೆ. ಅದರಿಂದ ಸಮೃದ್ಧ ಹಿಂದೀ ಕ್ರೀಡಾಪ್ರೇಮಿಗಳ ಮೆಚ್ಚಿನ ಆಟಗಾರನಾಗಿ ಹೊರ ಹೊಮ್ಮಿದ್ದಾನೆ.

ಉತ್ತರ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಲು ಆಗುವುದಿಲ್ಲ. ಅಲ್ಲಿರುವುದು ಹಿಂದಿ ಮತ್ತು ಇಂಗ್ಲೀಷ್‌ ಮಾಧ್ಯಮ ಶಾಲೆಗಳು ಮಾತ್ರ. ಸಮೃದ್ಧ ಹಿಂದೀ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ಓದಿನಲ್ಲೂ ಮುಂದು ಇದ್ದಾನೆ. ಇದೀಗ ಪ್ರಾಥಮಿಕ ನಾಲ್ಕನೇ ತರಗತಿ ಮುಗಿಸಿ ಮುಂದಿನ ತರಗತಿಗೆ ಹೋಗಿದ್ದಾನೆ. ಇವನ ಎಲ್ಲಾ ಗೆಳೆಯರೂ ಹಿಂದಿಯವರೇ. ಕೋಚ್‌ಗಳೂ ಹಿಂದಿಯವರು. ಎಲ್ಲೂ ಕನ್ನಡದ ವಾಸನೆಯಿಲ್ಲ. ಇಂಥ ವಾತಾವರಣದಲ್ಲಿ ಪುತ್ರನಿಗೆ ಸ್ಕೇಟಿಂಗ್‌ನಲ್ಲಿ ಹೆಗ್ಗುರಿತು ಸ್ಥಾಪಿಸಲು ಅಪ್ಪ -ಅಮ್ಮರ ಪ್ರಯತ್ನವೂ ದೊಡ್ಡದಿದೆ. ಹಿಂದೀ ನಾಡಲ್ಲಿ ಕನ್ನಡದ ಹೆಜ್ಜೆ ಗುರುತು ಮೂಡಿಸುತ್ತಿರುವ ಈ ಹುಡುಗ ಕರ್ನಾಟಕ್ಕೆ ಬರುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಅದೂ ಅಲ್ಲಿಯ ಶಾಲೆ ಬೇಸಿಗೆ ರಜೆ ನೀಡಿದಾಗ. ಇಲ್ಲಿಂದ ಅಲ್ಲಿಗೆ ಹೋದರೆ ಮುಗಿಯಿತು. ಇವನ ಆಟ, ಓಟ, ನೋಟ ಎಲ್ಲವೂ ಹಿಂದೀಮಯ.

ಸಧ್ಯ ಅಲ್ಲಿ ಸ್ಕೇಟಿಂಗ್‌ ನಲ್ಲಿ ನಂಬರ್‌ ಒನ್‌ ಆಗಿರುವ ಸಮೃದ್ಧ ಮುಂದೆಯೂ ಅಲ್ಲಿ ಕೀರ್ತಿ ಪತಾಕೆ ಹಾರಿಸಲಿ ಎಂಬುದೇ ನಮ್ಮ ಆಶಯ. ತನ್ಮೂಲಕ ಸದಾ ಮಗನ ಯಶಸ್ಸಿನ ಬಗ್ಗೆ ಶ್ರಮ ಪಡುತ್ತಿರುವ ಇವನ ಅಪ್ಪ-ಅಮ್ಮರ ಕನಸೂ ನನಸಾಗಲಿ ಎಂದು ಆಕೃತಿ ಹಾರೈಸುತ್ತದೆ.

#ಕನನಡಗರ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW