ಕತ್ತಲೆ ಬದುಕಿಗೆ ಬೆಳಕಾಗಲು ನೀವು ಬಯಸುತ್ತೀರಾ?…ಹಾಗಿದ್ದರೆ ನಾರಾಯಣ ನೇತ್ರಾಯಲಯ ಐಯ್ ಫೌಂಡೇಶನ್ ನಲ್ಲಿ ನಿಮ್ಮ ಹೆಸರನ್ನು ಆನ್ಲೈನ್ ಮೂಲಕ ನೊಂದಾಯಿಸಿಕೊಳ್ಳಿ. ಬನ್ನಿ ಮುಂದಾಗಿ…
ನೇತ್ರದಾನ ಒಬ್ಬರ ಮರಣದ ನಂತರ ನೇತ್ರದಾನ ಮಾಡುವ ಕ್ರಿಯೆಯಾಗಿದೆ. ಇದು ದಾನ ಕಾರ್ಯವಾಗಿದೆ, ಸಂಪೂರ್ಣವಾಗಿ ಸಮಾಜದ ಪ್ರಯೋಜನಕ್ಕಾಗಿ ಮತ್ತು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.
ಫೋಟೋ ಕೃಪೆ :google
ಈ ನೇತ್ರದಾನ ಹೆಚ್ಚು ಸಮಾಜದಲ್ಲಿ ಹೆಚ್ಚು ಸಂಚಲನವಾಗಿದ್ದು ಮತ್ತು ಪ್ರಚಲಿತವಾಗಿದ್ದು ಮೇರು ನಟ ಡಾ.ರಾಜ್ ಕುಮಾರ್ ಅವರ ನೇತ್ರದಾನದ ಮೂಲಕ ಎಂದರೆ ತಪ್ಪಲ್ಲ. ಸಾವಿರಾರು ಜನರು ಇದರಿಂದ ಪ್ರೇರಣೆ ಪಡೆದು ನೇತ್ರದಾನಕ್ಕೆ ಮುಂದಾದರು.
Narayana Nethralaya Eye Foundation
ಮೃತರು ಸಾಯುವ ಮೊದಲು ತನ್ನ ಕಣ್ಣುಗಳನ್ನು ದಾನ ಮಾಡಲು ನೋಂದಣಿ ಮಾಡಬಹುದು.
ಫೋಟೋ ಕೃಪೆ :google
ಮಧುಮೇಹ ಅಥವಾ ಅಧಿಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡದ ಕಾಯಿಲೆಗಳಂತಹ ವಯಸ್ಸು ಅಥವಾ ವ್ಯವಸ್ಥಿತ ಕಾಯಿಲೆಗಳು ನೇತ್ರದಾನಕ್ಕೆ ಅಡ್ಡಿಯಾಗುವುದಿಲ್ಲ. ವ್ಯಕ್ತಿಯ ಕಾರ್ನಿಯಾಗಳು ಈ ಹಿಂದೆ ಯಾವುದೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಹ ಪರಿಣಾಮ ಬೀರುವುದಿಲ್ಲ ಮತ್ತು ಆದ್ದರಿಂದ ಇತರರಿಗೆ ಕಸಿ ಮಾಡಬಹುದು.
ನಾರಾಯಣ ನೇತ್ರಾಲಯದಲ್ಲಿ ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರದ ಸ್ಥಾಪನೆ ಮಾಡಿದ್ದು, ಇಲ್ಲಿ ನೇತ್ರದಾನವನ್ನು ಮಾಡಬಹುದು. ಈಗ ಅದು ಅಂತರ್ಜಾಲದ ಮೂಲಕವೂ ನಮ್ಮ ಹೆಸರನ್ನು ನೋಂದಣಿ ಮಾಡಿಸಬಹುದಾಗಿದೆ. ಅಥವಾ 88840 18800 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಸರನ್ನು ನೊಂದಾಯಿಸಬಹುದು. ಒಮ್ಮೆ ಹೆಸರು ನೋಂದಣಿಯಾದ ಬಳಿಕ ಪ್ರಮಾಣ ಪತ್ರ ಸಹ ನೀಡಲಾಗುತ್ತದೆ.
ಈ ಅಭಿಲಾಷೆಯ ಉಳ್ಳವರು ಪ್ರಯತ್ನ ಮಾಡಿ ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ .
- ಆಕೃತಿ ನ್ಯೂಸ್