ಭವ್ಯ ಭಾರತದ ಪ್ರಜೆಗಳಿಗೆ ಉತ್ತರ ಬೇಕಿದೆ“ಯುದ್ಧ ಮತ್ತು ಶಾಂತಿ ಒಂದೇ ನಾಣ್ಯದ ಎರಡು ಮುಖಗಳು ” ಎಂದು ಲಿಯೋ ಟಾಲ್ಸ್ಟಾಯ್ ಹೇಳುತ್ತಾರೆ ‘ಶಾಂತಿ ತಾನೂ ಬದುಕಿ ತನ್ನ ನಂಬಿದವರನ್ನು ಬದುಕಿಸುತ್ತದೆ. ಯುದ್ಧ ತಾನು ಸತ್ತು ತನ್ನ ನಂಬಿದವರನ್ನು ನಿರಂತರವಾಗಿ ಸಾಯುಸುತ್ತಲೇ ಇರುತ್ತದೆ.

ಸಾವು ಎಂಬುದು ಒಂದು ಪರಿಹಾರಕ್ಕೆ ಸಮವಾಗುವುದಲ್ಲ. ದುಃಖ ನಿರಂತರ, ಈ ಮಾತು ಯಾಕೆ ಎಂದರೆ ಜನವರಿ ೨೬ ಗಣತಂತ್ರದ ಬದಲಿಗೆ ರಾಷ್ಟ್ರದ ರಾಜಧಾನಿ ದೆಹಲಿ ರೈತರ ಗಣತಂತ್ರವಾಗಿ ಆರ್ಭಟಿಸಿತು..!!
ಕೆಂಪು ಕೋಟೆಯ ಮೇಲೆ ಧ್ವಜ ಹಾರಾಡಿದವು ಪ್ರತಿಭಟನೆಯ ನೆಪದಲ್ಲಿ.

ದೆಹಲಿಗೆ ಇದು ಹೊಸದಲ್ಲ. ಯಾಕೆಂದರೆ ದೆಹಲಿಯ ಇತಿಹಾಸವೇ ಅಂತಹದ್ದು ಹಲವು ರಾಜಮನೆತನಗಳಿಗೆ ರಾಜಧಾನಿಯಾಗಿ ಕಂಗೂಳಿಸಿದ ದೆಹಲಿ ಆಡಳಿತದ ಉತ್ತಂಗವನ್ನು ಕಂಡು ಯುದ್ಧದ ಭೀಕರತೆಯಲ್ಲೂ ಮಿಂದು ಉಳಿದಿದೆ. ರಜಪೂತರು, ಮೊಘಲರು, ಮರಾಠರ ಆಡಳಿತ ಕಂಡ ದೆಹಲಿಯ ಬೀದಿ ಬೀದಿಗಳಲ್ಲಿ ನೀರಿಗಿಂತ ರಕ್ತ ಹರಿದಿದೆ ಎಂದು ಮಿರ್ಜಾ ಗಲಿಬ್ ಹೇಳುತ್ತಾರೆ. ಇತಂಹ ದೆಹಲಿ ಮತ್ತು ಅಲ್ಲಿನ ಕೆಂಪು ಕೋಟೆ
ಸ್ಮಾರಕವಾಗಿ ಮುಂದಿನ ಪೀಳಿಗೆಗೆ ಉಳಿಯ ಬೇಕಾಗಿದ್ದು, ಅರಾಜಕತೆಗೆ ಮೂಕ ಸಾಕ್ಷಿಯಾಗಿದೆ ಪ್ರಜ್ಞಾವಂತ ಪ್ರಜೆಗಳ ಹೆಸರಲ್ಲಿ.

ಫೋಟೋ ಕೃಪೆ : Klook

ಅದರೆ ನಮ್ಮ ಮುಂದಿರುವ ಪ್ರಶ್ನೆ ಅಂದು ಅಲ್ಲಿ ನಿಜಕ್ಕೂ ಗಲಭೆ ನಡೆಸಿದವರು ರೈತರೆ? ಎಂಬುದು. ಚಳಿಯನ್ನು ಲೆಕ್ಕಿಸದೆ ಸತತ ಸಭೆಯಲ್ಲಿ ಭಾಗವಹಿಸಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಹಿರಿಯ ಜೀವಗಳನ್ನು ದೂರದ ದರ್ಶನ ಮತ್ತು ಪತ್ರಿಕೆಗಳಲ್ಲಿ ನೋಡಿದಾಗ ಮಾದರಿಯ ನಡೆ ಎನ್ನುವಂತಿತ್ತು.

ಆದರೆ ಹಿಂಸಾತ್ಮಕ ಮತ್ತು ಬೇಜವಾಬ್ದಾರಿಯುತ ನಡೆಗೆ ಪ್ರತಿಭಟನೆಯ ಬಣ್ಣ ಮೆತ್ತಿದ ಪಡೆ ಯಾವುದು ? ಅವರು ರೈತರೆ? ಪ್ರತಿಭಟನೆ ಎಂದರೆ ಸಾರ್ವಜನಿಕ ಆಸ್ತಿ, ಪ್ರಾಣ ,ಮಾನಗಳು ದ್ವಂಸವಾಗ ಬೇಕೇ ? ಅಲ್ಲಿ ಗಾಯಂಗೊಡ ಅಥವಾ ಮರಣ ಹೊಂದಿದ ರೈತರಾಗಲಿ, ಕರ್ತವ್ಯ ಮಾಡುತ್ತಿದ್ದ ಪೋಲಿಸರಾಗಲಿ, ಅವರ ಜೀವಗಳಿಗೆ ಬೆಲೆ ಇಲ್ಲವೆ?. ಹಿಂಸೆ, ಸಾವು ಯಾರಿಗೆ ಲಾಭ ನೀಡುತ್ತದೆ?. ಇದಕ್ಕೇಲ್ಲ ಉತ್ತರ ಬೇಕಾಗಿದೆ ಭವ್ಯ ಭಾರತದ ಪ್ರಜೆಗಳಿಗೆ .ಸುಸ್ಥಿರ ಅಭಿವೃದ್ಧಿ ಕೇವಲ ಯೋಜನೆ ಅಥವಾ ಕಾನೂನು ಮಾಡಿದರೆ ಅಗುವುದಿಲ್ಲ. ಅವುಗಳು ಎಷ್ಟುಮಟ್ಟಿಗೆ ಅನುಷ್ಠಾನ ಗೊಂಡಿವೆ. ಮತ್ತು ಎಷ್ಷು ತಿಳುವಳಿಕೆ ಹೊಂದಿ ಪಾಲಿಸುತ್ತಿದ್ದಾರೆ ಎಂಬಲ್ಲಿ ಅಭಿವೃದ್ಧಿಯ ಗತಿ ಅಳಯಬೇಕಾಗಿದೆ. ವಾಸ್ತವವಾಗಿ ಹಲವು ಯೋಜನೆಗಳು ಹಳ್ಳ ಹಿಡಿದು ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಹೀಗಿರುವಾಗ ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಅರಿಯ ಬೇಕಿದೆ.

ಈ ಗಲಭೆ ಇಷ್ಟು ದಿನ ಶಾಂತಿಯುತ ಪ್ರತಿಭಟನೆ ಮಾಡಿದ ರೈತರ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಬಾರದು. ಅವರ ಆಶಯ ಯಾರೂ ಕಿಡಿಗೆಡಿಗಳ ಕ್ಷುಲ್ಲಕ ನಡೆಗೆ ಬಲಿಯಾಗಬಾರದು.ಇದರ ಬಗ್ಗೆ ವಿಸ್ತೃತ ಚರ್ಚೆ ಯಾಗಿ ಶಾಂತಿಯತವಾಗಿ ರೈತರ ಆಶಯ ನೆರವೇರ ಬೇಕಾಗಿದೆ. ಅವರ ನಡೆಯನ್ನು ಇಷ್ಟು ದಿನವು ಗಣನೀಯವಾಗಿ ಕಂಡ ಸರ್ಕಾರ ತನ್ನ ಪ್ರತಿಷ್ಠೆ ಬಿಟ್ಟು ಪರಿಹಾರ ಸೂಚಿಸುವದು ನಿಜವಾದ ಪ್ರಜಾಪ್ರಭುತ್ವ ಸರ್ಕಾರದ ಕಾರ್ಯ ಹೊರತು ಬೇರೆ ಅಲ್ಲ.

ರೈತರ ಹೆಸರಲ್ಲಿ ಈ ಘಟನೆಗೆ ಕಾರಣವಾದವರಿಗೆ ಸೂಕ್ತ ಶಿಕ್ಷೆಯಾಗ ಬೇಕಿದೆ. ಏಕೆಂದರೆ ದೆಹಲಿ, ಕೆಂಪುಕೋಟೆ, ರೈತರು, ಸೇನೆ, ಪೋಲಿಸರು ಎಲ್ಲರು ಸರ್ವಜನಿಕ ವಾಗಿ, ಸಾರ್ವಜನಿಕರಿಗಾಗಿ ಅಗತ್ಯವಿದೆ. ದೇಶದ ನೆಲ, ಸಾರ್ವಜನಿಕ ಆಸ್ತಿ ಹಾಳುಗೆಡವುದು ಎಂದೂ ಪ್ರತಭಟನೆಯಾಗಲಾರದು. ಸಾವಿಗೆ ಸಮಾನವಾದ ಪರಿಹಾರ ಇಲ್ಲ. ನಾಶಕ್ಕೆ ಸಮಾನವಾದ ಅಭಿವೃದ್ಧಿಇಲ್ಲ. ವ್ಯಕ್ತಿಗಾಗಲಿ, ಸಮಯಕ್ಕಾಗಲಿ ಅದರದ್ದೆ ಆದ ಮೌಲ್ಯವಿದೆ ಇದನ್ನು ಎಲ್ಲರೂ ತಿಳಿಯಬೇಕಿದೆ.


  • ರೇಶ್ಮಾಗುಳೇದಗುಡ್ಡಾಕರ್
5 1 vote
Article Rating

Leave a Reply

1 Comment
Inline Feedbacks
View all comments
Shambhugouda. R. Ganteppagoudar

ಹೌದು ಯಾರೋ ಮಾಡಿದ ಕೃತ್ಯಕ್ಕೆ ಇಡೀ ರೈತ ವರ್ಗವನ್ನು ಹೀಯಾಳಿಸುವಂತಾಗಿದೆ. ಸತ್ಯಾ ಸತ್ಯತೆ ತಿಳಿಯ ಬೇಕಾಗಿದೆ. ಕೆಲವು ಮಾಧ್ಯಮಗಳಲ್ಲಿ ತೋರಿಸಿರುವ ಪ್ರಕಾರ ಕೆಲವು ವಾಹನಗಳಲ್ಲಿ ಹೆಚ್ಚಿನ ಪ್ರಮಾಣದ ದೇಶೀ ಮಧ್ಯ ಹಾಗೂ ಪರದೇಶಿ ಮಧ್ಯದ ಬಾಟಲುಗಳೂ ದೊರೆತಿವೆ. ರೈತರ ಪ್ರತಿಭಟನೆಯ ಉದ್ದೇಶದ ಪರದೆಯ ಹಿಂದೆ ಹೊಕ್ಕವರು ಬೆಳಕಿಗೆ ಬರ ಬೇಕಾಗಿದೆ
ಅದಕ್ಕಿಂತ ಹೆಚ್ಚಾಗಿ ಸರ್ಕಾರ ರೈತರು ಕೂಗಿಗೆ ಕವಿಯಾಗಿ ರೈತಪರ ದ್ವನಿಯಾಗಬೇಕಾಗಿದೆ.

Home
Search
All Articles
Buy
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW