ಬಿ ಆರ್ ಚೋಪ್ರಾ ಅವರ ‘ಮಹಾಭಾರತ’ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ಇಂದು ನಿಧನರಾದರು. ಅವರ ಅಗಲಿಕೆಗೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ…
ಗೂಫಿ ಪೈಂಟಲ್ ಅವರಿಗೆ ೭೮ ವರ್ಷ ವಯಸ್ಸಾಗಿತ್ತು, ಅಧಿಕ ರಕ್ತದೊತ್ತಡ, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಎಂಟು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆಯು ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಫೋಟೋ ಕೃಪೆ : google
ಗೂಫಿ ಪೈಂಟಲ್ ಕಲಾವಿದರಾಗುವ ಮೊದಲು ಸೈನಿಕರಾಗಿದ್ದರು. ಭಾರತ ಚೀನಾ ದೇಶದ ಯುದ್ಧದ ಸಂದರ್ಭದಲ್ಲಿ ಅವರ ಮೊದಲ ಪೋಸ್ಟಿಂಗ್ ಆಗಿತ್ತು ಎಂದು ಮೂಲಗಳು ತಿಳಿಸುತ್ತವೆ. ಮಹಾಭಾರತವನ್ನು ಹೊರತು ಪಡಿಸಿ ದೇಸ್ ಪರದೇಸ್, ದಾವಾ, ದಿಲ್ ಗಿ ಹಿಂದಿ ಸಿನಿಮಾಗಳು ಮತ್ತು ಶು…ಕೋ ಹಿ ಹೈ, ದ್ವಾರಕಾದೀಶ್ ಭಾಗವಾನ್ ಶ್ರೀ ಕೃಷ್ಣ , ಸಿ ಐ ಡಿ, ನಮಃ ಶಿವಾಯಃ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸೆಳೆದಿದ್ದರು.
ಅಪಾರ ಬಂಧು, ಮಿತ್ರರು, ಅಭಿಮಾನಿಗಳಿಗಳನ್ನು ಅಗಲಿದ ಈ ಹಿರಿಯ ಕಲಾವಿದ ಗುಲ್ಫಿ ಪೈಂಟಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ….
- ಆಕೃತಿ ನ್ಯೂಸ್