ದಶಮೂಲಾರಿಷ್ಠ ತಯಾರಿಕೆಯಲ್ಲಿ ‘ಲೊಧ್ರಾ’ ಗಿಡದ ಮಹತ್ವವನ್ನು ನಾಟಿವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಓದಿ…
ಲೊಧ್ರಾ ನಮ್ಮಲ್ಲಿ ಬೆಳೆಯುವ ಔಷಧೀಯ ಗಿಡ ಅಲ್ಲ. ತುಂಬಾ ಔಷಧೀಯ ಗುಣ ಹೊಂದಿರುವ ಗಿಡ ಇದರ ಚಕ್ಕೆ ಹೆಚ್ಚು ಉಪಯುಕ್ತ. ದಶಮೂಲಾರಿಷ್ಠ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಲೊಧ್ರಾ ದೇಹದ ಯಾವುದೇ ಭಾಗವನ್ನು ಬಲಪಡಿಸುತ್ತದೆ.
ಫೋಟೋ ಕೃಪೆ : google
1) ಪಿತ್ತ ಗಾದೆಯಲ್ಲಿ ಕಷಾಯ ಮಾಡಿ ಕುಡಿಯುವುದರಿಂದ ಗುಣವಾಗುತ್ತದೆ.
2) ಚಕ್ಕೆಯನ್ನು ಬೇವಿನ ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
3) ಹದವರಿತು ಮಾಡಿದ ಔಷಧಿ ಕುಷ್ಟರೋಗ ದಂತಹ ಘನವಾದ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ.
4) ಮೂಳೆಮುರಿತದಲ್ಲಿ ಪಟ್ಟು ಹಾಕಲು ಮತ್ತು ಹೊಟ್ಟೆಗೆ ತೆಗೆದುಕೊಳ್ಳಲು ಉಪಯೋಗಿಸುತ್ತಾರೆ.
5) ಕಾಳು ಮೆಣಸು ಏಲಕ್ಕಿ ಜೊತೆಯಲ್ಲಿ ಚಕ್ಕೆಯನ್ನು ಸೇರಿಸಿ ಮಾಡುವ ಕಷಾಯ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
6) ಶುಂಠಿಯೊಂದಿಗೆ ಸೇರಿಸಿ ತಯಾರಿಸಿದ ಕಷಾಯ ಕಫ ಕೆಮ್ಮು ನಿವಾರಕ.
7) ಅತಿಯಾದ ಮುತ್ತು ಕಡಿಮೆ ಮಾಡಿ ಗರ್ಭಾಶಯ ಸಹಜ ಸ್ಥಿತಿಗೆ ತರಲು ಇದು ಒಳ್ಳೆಯ ಔಷಧೀಯ ಸಸ್ಯ.
8) ಬೆಣ್ಣೆಯೊಂದಿಗೆ ಸೇವಿಸಿದರೆ ಬಿಳಿ ಮುಟ್ಟು ಗುಣವಾಗುತ್ತದೆ.
9) ಹೆರಿಗೆಯ ನಂತರದ ಗರ್ಭಾಶಯ ವು ಸಹಜ ಸ್ಥಿತಿಗೆ ಬರಲು ನಾನು ತಯಾರಿಸುವ ಲೇಹ್ಯದಲ್ಲಿ ಇದು ಒಳಗೊಂಡಿದೆ ಹೆಣ್ಣು ಮಕ್ಕಳ ಸಮಸ್ಯೆಗಂತೂ ತುಂಬಾ ಉಪಯುಕ್ತವಾದ ಲೇಹ್ಯ ಇದಾಗಿದೆ.
10) ಹೆಚ್ಚಾಗಿ ಸೇವಿಸಿದರೆ ದೇಹದ ರಕ್ತ ಹೆಪ್ಪುಗಟ್ಟಿ ರಕ್ತ ಸಂಚಾರ ಕ್ಕೆ ತೊಂದರೆ ಆಗುತ್ತದೆ.
- ಸುಮನಾ ಮಳಲಗದ್ದೆ – ನಾಟಿವೈದ್ಯೆ