ಕವಿಯತ್ರಿ ವಿಜಯಲಕ್ಷ್ಮಿ ನಾಗೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…
ಅಕ್ಷರಗಳ
ವೃದ್ಧಿಸುವ ಅಕ್ಷಯ
ಪದ ಪುಂಜಗಳ
ಮೆರೆಸುವ ಸಾಮ್ರಾಜ್ಯ.!!
ಕಲ್ಪನೆಯ
ಮುತ್ತುಗಳ ಹೊತ್ತ ಕಡಲು
ಮನದ ಭಾವಗಳ
ತುಂಬಿಕೊಂಡ ಮಡಿಲು.!!
ಸುಮ್ಮನೇ
ಕರೆದರೆ ಬಾರಳು ಇವಳು
ಸವಿಯಬೇಕು
ಮಧುರ ಭಾವದ
ಸವಿಜೇನಿನ ಹೊನಲು.!!
ಇವಳ
ಮೆಚ್ಚಿ ಓದುವವರಿಗೆ
ಮಲ್ಲಿಗೆಯ ಕಂಪಿನಂತೆ
ಬರೆವವರಿಗಿವಳು
ಸಂಪಿಗೆಯ ಘಮಲಿನಂತೆ.!!
ಹೆಚ್ಚೇನೂ
ಹೇಳಲು ಇಲ್ಲ ಪದಗಳು
ಮೆಚ್ಚಿ ಮನದಂಗಳದಿ
ಬಂದಿಳಿದಿವಳ ತೊರೆಯದಿರಲಿ
ಕಡೆಯವರೆಗೂ ನನ್ನೀ ಕರಗಳು.!!
- ವಿಜಯಲಕ್ಷ್ಮಿ ನಾಗೇಶ್