‘ಮುಗ್ಧ ಜೀವಿಗಳು’ ಕವನ – ಅನಂತ ನಾಯಕ್



‘ಜಗದ ನಿಯಮ ಇದುವೆ ಏನು….ಕವಿ ಅನಂತ ನಾಯಕ್ ಅವರ ಲೇಖನಿಯಲ್ಲಿ ಮೂಡಿ ಬಂದ ಕವನ , ಮುಂದೆ ಓದಿ…

ಅಡವಿಯೊಳಗೆ ಗಿಳಿಯು ಒಂದು
ಗೊಡವೆ ಬೇಡ ಯಾರದೆಂದು
ನಿಬಿಡವಾದ ಹಸಿರಿನಲ್ಲಿ
ಮುದುಡಿಕೊಂಡಿತು ||೧||

ಬಿಡದ ಹಸಿವು ತಡೆಯಲೆಂದು
ಗಿಡದಲಿರುವ ಹಣ್ಣು ತಂದು
ಒಡನೆ ತನ್ನ ಕೊಕ್ಕಿನಿಂದ
ತಿನ್ನತೊಡಗಿತು‌ ||೨||

ಕಡೆಯ ಕೊಂಬೆಯಲ್ಲಿ ಕುಳಿತ
ಗಿಡುಗ ಹಾರಿ ಬಳಿಗೆ ಬಂದು
ಕೆಡಕು ಕಣ್ಣ ಹಸಿರು ಹಕ್ಕಿ
ಮೇಲೆ ಹಾಕಿತು ||೩||

ಖೊಡವಿಕೊಂಡು ತನ್ನ ರೆಕ್ಕೆ
ಉರುಬಿನಿಂದ ಹಾರಿ ಬಂದು
ನಿರಿಯ ಹಕ್ಕಿ ಕಾಯವನ್ನು
ಕುಕ್ಕತೊಡಗಿತು ||೪||

ಜಗದ ನಿಯಮ ಇದುವೆ ಏನು
ಮುಗ್ಧ ಮನದ ಜೀವಿಗಳನು
ಬರಿದು ಮಾಡಿ ಬದುಕ ಕಸಿದು
ಕೆಡಹಿ ಕೊಲುವುದು? ||೫||


  • ಅನಂತ ನಾಯಕ್ (ಹಿರಿಯ ಲೇಖಕರು, ಕತೆಗಾರರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW