ನಾರಿನಿಂದ ಸಿದ್ದವಾದ ಸೀರೆಗಳು – ಅರುಣ್ ಪ್ರಸಾದ್

ಬಾಳೆ, ಬಿದಿರು, ಕತ್ತಾಳೆ, ಅನಾನಸ್ , ಸೆಣಬಿನ ನಾರಿನ ಸೀರೆಗಳು ಮಾರುಕಟ್ಟೆಯಲ್ಲಿದೆ. ಈಗ ಮಹಿಳೆಯರು ಹೆಚ್ಚಾಗಿ ನಾರಿನ ಸೀರೆಗೆ ಆಕರ್ಷಿತರಾಗುತ್ತಿದ್ದಾರೆ. ಇದರ ಕುರಿತು ಅರುಣ್ ಪ್ರಸಾದ್ ಅವರ ಒಂದು ಲೇಖನ ತಪ್ಪದೆ ಓದಿ…

ಹತ್ತಿ ಮತ್ತು ರೇಷ್ಮೆ ವಸ್ತ್ರಗಳ ಜಾಗದಲ್ಲಿ ಜವಳಿ ಉದ್ಯಮವನ್ನು ಸ೦ಪೂರ್ಣವಾಗಿ ಅಕ್ರಮಿಸಿರುವ ಕೃತಕವಾದ ಪೆಟ್ರೋಲಿಯಂ ಪ್ರಾಡಕ್ಟ್ ಗಳಾದ ಪಾಲಿಯೆಸ್ಟರ್ ಬಟ್ಟೆಗಳು ಬೆಲೆಯಲ್ಲಿ ಮತ್ತು ವಿನ್ಯಾಸದಲ್ಲಿ ಅದನ್ನು ಸರಿಗಟ್ಟಲು ಸಾಧ್ಯವಿಲ್ಲ.

ಆದರೆ ಬಳಸುವ ಜನರ ಚರ್ಮದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಮಾತು ಕೇಳಿಬರುತ್ತಿದೆ ಆದ್ದರಿಂದ ಪುನಃ ಹತ್ತಿ, ರೇಷ್ಮೆ ವಸ್ತ್ರಗಳ ಬೇಡಿಕೆ ಹೆಚ್ಚುತ್ತಿದೆ. ಇದರ ಜೊತೆಯಲ್ಲಿ ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದ ನೈಸರ್ಗಿಕ ನಾರಿನ ವಸ್ತ್ರಗಳಿಗೆ ಆದುನಿಕ ತಂತ್ರಜ್ಞಾನದ ಲೇಪನದ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಹವಾ ಸೃಷ್ಟಿ ಆಗಿದೆ.
ಈಜಿಪ್ಟ್ ನ ಮಮ್ಮಿಗಳಿಗೆ ಸುತ್ತಿದ ಬಟ್ಟೆಗಳು ನಾರಿನಿಂದ ಸಿದ್ಧಪಡಿಸಿದ ಲೆನಿನ್ ಬಟ್ಟೆಗಳು ಅಂದರೆ ಅರ್ಥವಾದೀತು ನಾರಿನ ಬಟ್ಟಿಗಳ ಬಳಕೆಯ ಇತಿಹಾಸ.

This slideshow requires JavaScript.

 

ನಾರಿನ ಬಟ್ಟೆಗಳು 0rganic ಮತ್ತು biodegradable ಆದ್ದರಿಂದ ಪರಿಸರ ಸ್ನೇಹಿ ಎಂಬ ಕಾರಣದಿಂದ ಆಧುನಿಕ ಜಗತ್ತಿನಲ್ಲಿ ಬೇಡಿಕೆ ಹೆಚ್ಚಾಗಿದೆ. ನಾರಿನ ಪ್ಯಾಬ್ರಿಕ್ ಹೆಚ್ಚು ಗಾಳಿಯಾಡುತ್ತದೆ, UV ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಚರ್ಮದ ಆರೋಗ್ಯ ಕಾಪಾಡುತ್ತದೆ.

ಒಂದು ಬಾಳೆ ಮರದ ದಿಂಡಿನಿಂದ 150 ಗ್ರಾಮ್ ಬಾಳೆ ನಾರಿನ ಪೈಬರ್ ಸಿಗುತ್ತದೆ, ಒಂದು ಸೀರೆಗೆ 500 ಗ್ರಾಂ ಪೈಬರ್ ಬೇಕು, ಒಂದು ಬಾಳೆ ನಾರಿನ ಸೀರೆಗೆ ಕನಿಷ್ಟ 1800 ರೂಪಾಯಿ ಇದೆ. ನಮ್ಮ ಜಿಲ್ಲೆಯಲ್ಲಿ ಬಾಳೆ ಮತ್ತು ಅನಾನಸ್ ಯಥೇಚ್ಚವಾಗಿ ರೈತರು ಬೆಳೆಯುತ್ತಿದ್ದಾರೆ ಆದ್ದರಿಂದ ಬಾಳೆ ಅನಾನಸ್ ಗಳಿಂದ ನಾರು ತೆಗೆದು ಮಾರಾಟ ಮಾಡುವ ಮೌಲ್ಯವರ್ಧನೆ ಸಾಧ್ಯವಿದೆ ಆಸಕ್ತರು ಮುಂದೆ ಬರಬೇಕು.

ಕಳೆದ ವಷ೯ ಕಾನಲೆ ಗುರುಪ್ರಸಾದ್ ಅವರ ಮನೆಯಲ್ಲಿ ಅನಾನಸ್ ನಿಂದ ನಾರು ತೆಗೆಯುತ್ತಿರುವ ಚಿತ್ರ ಲೇಖನ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಬಾಳೆ, ಬಿದಿರು, ಕತ್ತಾಳೆ, ಅನಾನಸ್ ಮತ್ತು ಸೆಣಬಿನ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇವತ್ತು ನನ್ನ ಮಗಳು ತಾಯಿಗೆ ಬಾಳೆ ನಾರಿನ ಸೀರೆ ಒಂದನ್ನು ಬೆಂಗಳೂರಿಂದ ಖರೀದಿಸಿ ತಂದಿದ್ದಾಳೆ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW