ರವಿಯೂ ಕಾಣದ್ದನ್ನು ಕವಿ ಕಂಡು ಬೇರೊಂದು ಲೋಕಕೆ ಕೊಂಡೊಯ್ಯುವ ನಿನ್ನ ಪರಿಗೆ ಏನೆಂದು ಹೇಳಲಿ ….ಕವಿಯತ್ರಿ ಪಾರ್ವತಿ ಜಗದೀಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಓದಿ…
ಕವಿಯ ತೆಕ್ಕೆಗೆ ಸಿಕ್ಕ ಅಕ್ಕ ಪಕ್ಕದ ಪದಗಳು
ಮಲ್ಲಿಗೆಯ ಬಳ್ಳಿ ನೆಲವನಾವರಿಸಿದಂತೆ
ಎತ್ತೇತ್ತಲೊ ಬೆಳೆದು ಮನವನಾವರಿಸಿಕೊಂಡಿದೆ!!
ಸೂರ್ಯ ರಶ್ಮಿಯ ಬೆಚ್ಚನೆಯ ಬಿಸಿಗೆ
ಮೊಲ್ಲೆಯ ಮೊಗ್ಗು ಹಿಗ್ಗಿ ಅರಳಿ ನಿಂತಂತೆ
ಭಾವಜೀವಿಯ ಅಂತರಂಗದೊಳಹೊಕ್ಕ ಕಲ್ಪನೆಗಳು!!
ಅರಳಿ ಸೆಳೆದಿವೆ ಆ ಅವಿತಿರುವ ಪದಗಳು
ಮುಂಗಾರಿನ ಮಳೆ ಹನಿಯ ಸ್ಪರ್ಶಕ್ಕೆ ಮೊಳಕೆಯೊಡದ
ಹಚ್ಚ ಹಸಿರಾಗಿ ಕಂಗೋಳಿಸುವ ಭುವಿಯಂತೆ!!
ಕವಿಯoತರಂಗದ ಭಾವನೆಗಳು ಚಿಗುರೊಡೆದು
ಪದಗಳಿಗೆ ಮುತ್ತುಕ್ಕಿ ತವಕಿಸುವ ಸಾಲುಗಳು ಕಂಡರಿಯದ ಜಗವ ಕಾಣಲು ಮುತ್ತಿದಂತೆ!!
ಪುಟ್ಟ ಇರುವೆ ಸಾಲುಗಳು ಸಿಹಿಯಾದ ಸಕ್ಕರೆಯ
ಸೆಳೆತವೋ, ಆಕರ್ಷಣೆಯೋ ದಾಳಿ ಇಡುವಂತೆ
ಭಾವನೆಗಳ ಕವಿಯೊಡಲ ಕವನದೆಡೆಗೆ!!
ಪದಗಳ ಪೋಣಿಸಿ ರಂಗಾಗಿವೆ ಮನದಂಗಳವು
ಮನವ ಹೊಕ್ಕು ರಂಗೇರಿಸುತಿವೆ ರಂಗಾದ ಚುಕ್ಕಿಗಳು
ಹುಚ್ಚೆದ್ದು ಕುಣಿದಿದೆ ಓದುಗನಾಂತರಂಗವು!!
ತವಕದಲಿ ಮುನ್ನೂಗ್ಗಿವೆ ಭಾಷ್ಪಗಳು ಮನಕೆ ನಾಟಿರುವ ಭಾವನೆಗಳ ಸ್ಪರ್ಶಿಸಲು ಕವಿರಾಯನೇ
ಕೇಳು, ನೀವೆ0ಥ ಪುಣ್ಯವಂತರು ರವಿಯೂ ಕಾಣದ್ದನ್ನು ನೀ ಕಂಡು ಒಯ್ಯುವೇ ಬೇರೊಂದು
ಲೋಕಕೆ ನೀವೇ ಧನ್ಯ ಕವಿತೆಯ ಜನಕ ಕವಿವರ್ಯ!!
- ಪಾರ್ವತಿ ಜಗದೀಶ್