“ಅಂಚೆಯ ಅಣ್ಣ ಬಂದಿಹನಣ್ಣ
ಅಂಚೆಯ ಹಂಚಲು ಮನೆಮನೆಗೆ।
ಸಾವಿರ ಸುದ್ದಿಯ ಬೀರುತ ಬರುವನು
ತುಂಬಿದ ಚೀಲವು ಹೆಗಲೊಳಗೆ।।”
ತುಂಬಿದ ಚೀಲವು ಹೆಗಲೊಳಗೆ।।”
ಈ ನಾಲ್ಕು ಸಾಲುಗಳಲ್ಲೇ ತುಂಬಿಹುದು ಎರಡು ದಶಕಗಳ ಹಿಂದಿನ ಅಂಚೆಯ ಮಧುರ ಭಾವನೆ. ಗ್ರೀಟಿಂಗ್ ಕಾಡ್ಸ೯, ಗೆಳೆಯ ಗೆಳತಿಯರ ಪತ್ರಗಳು, ‘ಅಂತರ್ದೆಸೆ’ಯಲ್ಲಿ ಅವರವರ ಕೈ ಬರಹದಲ್ಲಿ ಮೂಡಿದ ಪ್ರೀತಿಯ ಸಂದೇಶಗಳು, ಪ್ರೇಮ ಪತ್ರಗಳು, ಉಡುಗೊರೆಗಳು. ಹೀಗೆ ಎಲ್ಲವೂ ಅಂಚೆ ಅಣ್ಣನ ಚೀಲದ ಮೂಲಕವೇ ಬರುತ್ತಿದ್ದವು.
ಅದಕ್ಕಾಗಿ ಕುತೂಹಲದಿಂದ ಕಾಯುತ್ತಾ ಕುಳಿತ ಆ ದಿನಗಳು…
ಸುಂದರ, ಸುಮಧುರ, ವಿಸ್ಮಯ, ಆನಂದ, ದಿನಚರಿ ಎಲ್ಲವೂ ಆಗಿದ್ದವು…
ಅಂಚೆ ಚೀಟಿಗಳ ಸಂಗ್ರಹದಿಂದ ಬೆಳೆಸಿಕೊಂಡ ಹವ್ಯಾಸವೂ ಕೂಡ ಒಂದು
ಪ್ರತಿ ದಿನ ಅಂಚೆಯು ಅಂಚೆಅಣ್ಣನಿಂದ ಜನರನ್ನು ಹತ್ತಿರವಾಗಿಸುತ್ತಿತ್ತು…
ಅಂಚೆ ಅಣ್ಢನೆಂದರೆ ಊರಿಗೆ ಹಿಗ್ಗು, ಗೌರವ…
ಈಗ ನೆನೆದರೆ ಅನಿಸುವುದು ಅಂಚೆ ಸೇವೆಯು ಎಷ್ಟು ಅದ್ಭುತವಾಗಿತ್ತು ಎಂದು
ಯಾಂತ್ರಿಕ ಯುಗದಲ್ಲಿ ಪತ್ರಗಳನ್ನು ಬರೆಯುವ, ಓದುವ ಭಾವನೆಗಳೇ ಇಲ್ಲವಾಗಿಸಿದೆ ಎಂದರೆ ತಪ್ಪಾಗಲಾರದು
ಆಧುನಿಕ ಜಗತ್ತಿನಲ್ಲಿ ಎಷ್ಟೇ ಬದಲಾವಣೆಯಾದರೂ
ಅಂಚೆಗಿರುವ ಗೌರವ ಅದರ ನೆನಪುಗಳು ಅಪರಿಮಿತ…
- ವಾಣಿ ಜೋಶಿ