ತಿನ್ನುವ ಅನ್ನಕ್ಕೆ ಕಲ್ಲು ಹಾಕಿದಾಗ

ರೇಷನ್ ಅಕ್ಕಿಯನ್ನು ಮಾರಿ ತಿನ್ನುವುದಕ್ಕೂ, ಬಡವರ ಅನ್ನ ಕಿತ್ತು ತಿನ್ನುವುದಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆ ತಪ್ಪು ಕೆಲಸ ಮಾಡದಿರಿ – ವಿಕಾಸ್. ಫ್. ಮಡಿವಾಳರ, ತಪ್ಪದೆ ಮುಂದೆ ಓದಿ…

ನನ್ನ ಜೀವನದಲ್ಲಿ ನಡೆದ ಒಂದು ಘಟನೆ, ಅವತ್ತು ಸಂಜೆ ನನ್ನ ಆತ್ಮೀಯ ಮಿತ್ರನ್ನೊಬ್ಬ ನನ್ನನ್ನು ಯಾವುದೊ ಒಂದು ಅಂಗಡಿಗೆ ಕರೆದು ಕೊಂಡು ಹೋಗಿ ತನ್ನಲ್ಲಿದ್ದ ಅಕ್ಕಿಯನ್ನು ಕೊಟ್ಟು, ಬೇರೆ ಅಕ್ಕಿಯನ್ನು ಖರೀದಿಸಿದ . ಮೊದಮೊದಲು ನನಗೇನು ತಿಳಿಯದೆ ಕುತೂಹಲದಿಂದ ಆತನನ್ನು ಪ್ರಶ್ನಿಸಿದೆ? ಆಗ ಆತ “ಏನಿಲ್ಲ ಮಗ ಸೊಸೈಟಿಯಲ್ಲಿ ಸಿಗೋ ರೇಶನ ಅಕ್ಕಿನ ಇಲ್ಲಿ ಮಾರಿ ಜೀರಾ ಅಕ್ಕಿಯನ್ನು ಖರೀದಿ ಮಾಡಿದೆ… ಅಂತ ಉತ್ತರಿಸಿದ. ವಿಪರ್ಯಾಸವೆಂದರೆ ನನ್ನ ಸಹಮಿತ್ರನಂತೆ ಹಲವಾರು ಜನ ಇಂತ ಕೆಲಸವನ್ನು ಮಾಡುತ್ತಾರೆ. ಸೊಸೈಟಿ ಅಕ್ಕಿಯನ್ನು ಕಿರಾಣಿ ಅಂಗಡಿಗೆ ಮಾರುವುದು ಸರ್ವೆಸಾಮಾನ್ಯವಾಗಿದೆ. ಆದರೆ ನಾವು ಮಾಡುವ ಈ ಕೆಲಸದಿಂದ ನಮಗೆ ನಷ್ಟವಾಗುತ್ತಿದೆ ಎಂಬ ಅರಿವು ಮಾತ್ರ ನಮಗಿಲ್ಲ.

ಸೊಸೈಟಿಯಲ್ಲಿ ರೇಶನ್ ಬಂದಿದೆ ಎಂದರೆ ಎದ್ದು ಬಿದ್ದು ಓಡೋಗಿ ಖರೀದಿ ಮಾಡುತ್ತಿದ್ದ ಕಾಲ ನೋಡಿ ಬೆಳೆದವರು ನಾವು. ಅತ್ಯಂತ ಕಡಿಮೆ ಬೆಲೆಗೆ ನೀಡಿದ್ದ ರೇಶನಗಳೆ ಆ ಕಾಲದಲ್ಲಿ ನಮ್ಮ ಹಸಿದಿದ್ದ ಹೊಟ್ಟೆಯನ್ನು ತುಂಬಿಸಿದ್ದವು. ರೇಶನ ಜೊತೆಗಿನ ಸೀಮೆಎಣ್ಣೆಯೆ ಮನೆಯ ದೀಪವನ್ನು ಬೆಳೆಗಿದ್ದವು. ಆದರೆ ಈಗ ಕಾಲ ಬದಲಾಗಿದೆ.

(ಸಾಂದರ್ಭಿಕ ಚಿತ್ರ) ಫೋಟೋ ಕೃಪೆ : GOOGLE

ಸರಕಾರ ಬಡ ಬಗ್ಗರಿಗೆ ಒಳಿತಾಗಲಿ ಎಂದು ಅಕ್ಕಿ, ಗೋಧಿ, ಬೆಳೆ ಮುಂತಾದ ಸಾಮಗ್ರಿಗಳನ್ನು ಕಡಿಮೆ ಧರಕ್ಕೆ ಕೊಡುತ್ತಿದೆ. ಈ ಯೋಜನೆಯ ಆಕಾಂಕ್ಷೆ ಒಳ್ಳೆಯದೆ. ಇದರಿಂದ ಹಲವಾರು ಬಡಬಗ್ಗರ ಹಸಿವು ನೀಗಿವೆ, ಆದರೆ ಕೆಲ ಮೂರ್ಖರು ಇದನ್ನು ದುರುಪಯೋಗ ಪಡಿಸಿಕೊಳ್ಳತ್ತಿದ್ದಾರೆ. ಸೊಸೈಟಿಯಲ್ಲಿ ಸಿಗುವ ಅಕ್ಕಿಯನ್ನು ತೆಗೆದುಕೊಂಡು ಕಿರಾಣಿ ಅಂಗಡಿಗೆ ಮಾರಿ, ಗುಣಮಟ್ಟದ ಅಕ್ಕಿಯನ್ನು ಖರೀದಿಸುತ್ತಾರೆ. ಗುಣಮಟ್ಟದ ಅಕ್ಕಿಯನ್ನು ಖರೀದಿಸುವುದು ಒಳ್ಳೆಯದೆ, ಆದರೆ ಆ ಮೂರ್ಖರಿಗೆ ಗೊತ್ತಿಲ್ಲ, ಯಾವ ಅಕ್ಕಿಯನ್ನು ಅವರು ಸೊಸೈಟಿಯಿಂದ ತಂದು ಬೇರೆ ಅಂಗಡಿಗ ಮಾರಿರುತ್ತಾರೋ ಅದೇ ಅಕ್ಕಿಗೆ ಸ್ವಲ್ಪ ಅಲಂಕಾರ ಮಾಡಿ ಅದನ್ನು ಕಿರಾಣಿ ಅಂಗಡಿಯವರು ದೊಡ್ಡ ಬೆಲೆಗೆ ಮಾರುತ್ತಾರೆ. ಆ ಅಕ್ಕಿಯನ್ನು ನಾವು ಪಾಲಿಶ್ ಅಕ್ಕಿಯೆಂದು ಕರೆಯುತ್ತೇವೆ. ಹಲವು ಸಂಶೋಧನೆಗಳ ಪ್ರಕಾರ ಪಾಲಿಶ್ ಅಕ್ಕಿಯಲ್ಲಿ ಜಾಸ್ತಿ ಪೋಷಕಾಂಶಗಳಿರುವುದಿಲ್ಲ. ಅದನ್ನು ತಿಂದರು ತಿನ್ನದಿದ್ದರೂ ಒಂದೆ. ಒಮ್ಮೆ ಯೋಚಿಸಿ 10 ರೂಪಾಯಿಗೆ ಅಕ್ಕಿಯನ್ನು ಮಾರಿ 40 ರೂಪಾಯಿಗೆ ಅದೇ ಅಕ್ಕಿಯನ್ನು ಖರೀದಿಸಿದರೆ ಅದನ್ನು ಮೂರ್ಖತನವೆನ್ನುವುದಿಲ್ಲವೆ. ಇದರಿಂದ ಜೇಬಿಗೂ ನಷ್ಟ. ಪಾಲಿಶ ಅಕ್ಕಿಯನ್ನು ತಿಂದ ದೇಹಕ್ಕೂ ನಷ್ಟ.

ಇನ್ನೂ ಕೆಲವಡೆ ಕೆಲ ವಂಚಕರು, ಸೀದಾ ಸೊಸೈಟಿಗೆ ಹೋಗ ಬೇಕಿದ್ದ ಸಾಮಗ್ರಿಗಳನ್ನು ಕೆಲ ಭ್ರಷ್ಟಾಚಾರಿಗಳ ಸಹಾಯದಿಂದ ತಮ್ಮ ಮಿಲ್ ನಲ್ಲಿ ತಂದಿರಿಸಿ ಮಾರುತ್ತಿದ್ದಾರೆ. ಬಡವರಿಗೆ ಸಿಗಬೇಕಿದ್ದ ಸಾಮಗ್ರಿಗಳು ಭ್ರಷ್ಟಾಚಾರಿಗಳ, ವಂಚಕರ ಕೈ ಸೇರುತ್ತಿವೆ. ಇದರ ಬಗ್ಗೆ ಮಾಹಿತಿಯಿದ್ದರೂ, ಯಾರು ಏನು ಮಾಡಲು ಆಗುತ್ತಿಲ್ಲ .

ಫೋಟೋ ಕೃಪೆ : GOOGLE

ರೇಶನ್ ಅಕ್ಕಿಯನ್ನು ಮಾರಿ ಪಾಲಿಶ್ ಅಕ್ಕಿಯನ್ನು ಖರೀದಿಸುವವರಿಗೊಂದು ಕೋರಿಕೆ. ನೀವು ಯಾವ ಅಕ್ಕಿಯನ್ನಾದರು ತಿನ್ನಿ ನನಗೆ ಅಭ್ಯಂತರವಿಲ್ಲ. ಆದರೆ ನಿಮಗೆ ಸಿಕ್ಕ ರೇಶನ್ ಅಕ್ಕಿಯನ್ನು ಮಾರದೇ ಬಡಬಗ್ಗರಿಗಾದರು ಹಂಚಿ. ಅವರು ತಿನ್ನುವ ಅನ್ನಕ್ಕೆ ಕಲ್ಲು ಹಾಕದಿರಿ. ಹಸಿವಿನಿಂದ ಬಳಲುವ ಜೀವಿಗಳಿಗೆ ನೆರವಾಗಿ. ಆಗ ನಿಮ್ಮ ಬದುಕಿಗೂ ಒಂದು ಅರ್ಥವಿರುತ್ತದೆ. ನೀವುಗಳು ಅಕ್ಕಿಯನ್ನು ಮಾರಿ ತಿನ್ನುವುದಕ್ಕು. ಬಡವರ ಅಕ್ಕಿಯನ್ನು ಕಿತ್ತು ತಿನ್ನುವುದಕ್ಕೂ ಯಾವುದೆ ವ್ಯತ್ಯಾಸವಿಲ್ಲ. ನಿಮಗೆ ತಿನ್ನುವ ಮನಸ್ಸಿರದಿದ್ದರೆ ಬಡವರಿಗಾದರೂ ಹಂಚಿ.

ಇಂತಿ ನಿಮ್ಮ ಪ್ರೀತಿಯ


  • ವಿಕಾಸ್. ಫ್. ಮಡಿವಾಳರ

3 2 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW