ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬಹುದಾ?… ಎನ್ನುವ ಪ್ರಶ್ನೆಗೆ ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹೇಳುವುದು ಹೀಗೆ ,ತಪ್ಪದೆ ಮುಂದೆ ಓದಿ.
ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬಾರದು. ಅತಿಯಾದ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲು, ಸಂಧಿವಾತ, ಎಲುಬಿನ ಕೀಲುಗಳ ಮಧ್ಯೆ ಪ್ರೊಟೀನ್ ಶೇಖರಣೆ, ಬುದ್ಧಿ ಮಾಂದ್ಯತೆ, ಅನಾವಶ್ಯಕ ಸಿಟ್ಟು, ಮಾನಸಿಕ ಒತ್ತಡ, ಕರುಳಿನ ಸಮಸ್ಯೆ ಬರುತ್ತದೆ.
ಹಿಂದಿನ ಕಾಲದಲ್ಲಿ ಗರ್ಭ ಧರಿಸಲು ಬಯಸುವವರು ಮತ್ತು ಗರ್ಭಿಣಿಯರು ಮೊಳಕೆ ಕಾಳು ತಿನ್ನಲು ಕೊಡುತ್ತಿರಲಿಲ್ಲ, ಅತಿಯಾದ ಪ್ರೊಟೀನ್ ನಿಂದ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳು ಜನಿಸಬಹುದು ಎನ್ನುವ ಕಾರಣವಿತ್ತು .

ನೆನೆಸಿ ಮೊಳಕೆ ಬಂದು ಸಿಹಿ ಬಂದರೆ ಇನ್ನೂ ಹೆಚ್ಚು ವಿಷ. ಸಿಪ್ಪೆ ಮತ್ತು ಮೊಳಕೆ ಎರಡೂ ವಿಷವಾಗಿ ಪರಿಣಮಿಸುತ್ತದೆ. ಕಾಳುಗಳನ್ನು ನೆನೆಸಿ ಸಿಪ್ಪೆ ಒಡೆದು ಮೊಳಕೆ ಬರುವ ಮೊದಲೇ ತಿನ್ನಿ. ಆಗ ಅದು ಸಸ್ಯಾಹಾರ. ಮೊಳಕೆ ಬಂದ ನಂತರ ಅದರಲ್ಲಿ ಜೀವವಿರುತ್ತದೆ. ಅದು ಮಾಂಸಾಹಾರ ಸೇವನೆ ಅನ್ನಿಸಿ ಕೊಳ್ಳುತ್ತದೆ.ಆದ ಕಾರಣ ದೇಹಕ್ಕೆ ಅತಿಯಾದ ಪ್ರೊಟೀನ್ ಹೋಗುವುದು ಕೂಡಾ ಜೀವಕ್ಕೆ ಅಪಾಯ.
- ಸುಮನಾ ಮಳಲಗದ್ದೆ