ನಮ್ಮ ದೇಹದಲ್ಲಿ ನಾವು ಸೇವಿಸುವ ಆಹಾರದಿಂದಾಗಿ ಈ ಯೂರಿಕ್ ಆಸಿಡ್ ಉತ್ಪಾದನೆ ಆಗುತ್ತಿರುತ್ತದೆ. ಕರಗಿ ದೇಹದಿಂದ ಮೂತ್ರದ ಮೂಲಕ ಹೊರ ಹೋಗುತ್ತಿರುತ್ತದೆ. ಆದರೆ ಯಾವಾಗ ಇದು ಹೆಚ್ಚಾಗಿ ರಕ್ತದಲ್ಲಿ ಹರಳುಗಳು ಆಗಲು ( Crystals ) ಪ್ರಾರಂಭಿಸಿದಾಗ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. – ಮಂಜುನಾಥ್ ಪ್ರಸಾದ್, ತಪ್ಪದೆ ಮುಂದೆ ಓದಿ…
ಇತ್ತೀಚಿನ ದಿನಗಳಲ್ಲಿ ಪಾದಗಳಲ್ಲಿ ಹಾಗು ಕೆಲವೊಮ್ಮೆ ಇತರ ದೇಹದಲ್ಲಿ ಭಾಗಗಳಲ್ಲಿ ಉರಿಯೂತ ಮತ್ತು ನೋವು, ಭಾವು (Gouts – ಗೌತಿ, ಚಿತ್ರ ನೋಡಿ) ಎಲ್ಲಾ ವಯಸ್ಸಿನವರಲ್ಲೂ ಕಾಣಬಹುದು. ಇದಕ್ಕೆ ಕಾರಣ ಯೂರಿಕ್ ಆಮ್ಲ / ಯೂರಿಕ್ ಆ್ಯಸಿಡ್ ( Uric acid ).
ನಮ್ಮ ದೇಹದಲ್ಲಿ ನಾವು ಸೇವಿಸುವ ಆಹಾರದಿಂದಾಗಿ ಈ ಯೂರಿಕ್ ಆಸಿಡ್ ಉತ್ಪಾದನೆ ಆಗುತ್ತಿರುತ್ತದೆ. ಹಾಗೆಯೇ ಅದು ಕರಗಿ ದೇಹದಿಂದ ಮೂತ್ರದ ಮೂಲಕ ಹೊರ ಹೋಗುತ್ತಿರುತ್ತದೆ. ಆದರೆ ಯಾವಾಗ ಇದು ಹೆಚ್ಚಾಗಿ ರಕ್ತದಲ್ಲಿ ಹರಳುಗಳು ಆಗಲು ( Crystals ) ಪ್ರಾರಂಭಿಸಿದಾಗ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಇದರ ಹೆಚ್ಚಳದಿಂದಾಗಿ, ಇತರ ಅಂಗಗಳು ಪರಿಣಾಮ ಬೀರುತ್ತವೆ. ಯೂರಿಕ್ ಆಮ್ಲದ ಅಧಿಕದಿಂದಾಗಿ, ಕೀಲು ನೋವು, ದೇಹದಲ್ಲಿ ಉರಿಯೂತ, ಮೂತ್ರಪಿಂಡ ಕಾಯಿಲೆ ಮತ್ತು ಬೊಜ್ಜು ಮುಂತಾದ ಅನೇಕ ಸಮಸ್ಯೆಗಳು ತಲೆದೂರಬಹುದು. ಹಾಗೆಯೇ ಯೂರಿಕ್ ಆಸಿಡ್ ಹೆಚ್ಚಾದರೆ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಮಾರಕ ಕಾಯಿಲೆಗಳ ಅಪಾಯವೂ ಇದೆ.
ಸಾಮಾನ್ಯವಾಗಿ ದೇಹದಲ್ಲಿ ಯೂರಿಕ್ ಆ್ಯಸಿಡ್ ಗಂಡಸರಲ್ಲಿ 2.5 mg /dl ನಿಂದ 7.0 mg/dl ಮತ್ತು ಹೆಂಗಸರಿಗೆ 1.5 mg/dl ನಿಂದ 6.0 ವರೆಗೆ
ಇರಬೇಕು. ಇದಕ್ಕಿಂತ ಹೆಚ್ಚಾದರೆ ಅದನ್ನು ಯೂರಿಕ್ ಆಸಿಡ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಇರುವ ಪ್ಯೂರಿನ್ ಎಂಬ ಪ್ರೋಟೀನ್‌ನ ಸ್ಥಗಿತವಾಗುವುದು. ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಾಗದಂತೆ ನೋಡಿಕೊಳ್ಳಲು, ನೀವು ಪ್ಯೂರಿನ್ ಅಧಿಕವಾಗಿರುವ ವಸ್ತುಗಳ ಸೇವನೆಯನ್ನು ತಪ್ಪಿಸಬೇಕು. ಹಾಗಿದ್ರೆ ಯೂರಿಕ್ ಆ್ಯಸಿಡ್ ಹೆಚ್ಚಾಗಲು ಕಾರಣಗಳೇನು ನೋಡೋಣ.
– ಕೆಲವೊಮ್ಮೆ ಅನುವಂಶಿಕ ಕಾರಣಗಳಿಂದಾಗಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ .
– ಕೆಟ್ಟ ಆಹಾರ ಕ್ರಮವು ಯೂರಿಕ್ ಆಸಿಡ್ ಹೆಚ್ಚಳಕ್ಕೆ ಕಾರಣವಾಗಬಹುದು.
– ಕೆಂಪು ಮಾಂಸ, ಸಮುದ್ರ ಆಹಾರ, ದ್ವಿದಳ ಧಾನ್ಯಗಳು, ರಾಜಮಾ, ಪನೀರ್, ಬೇಕರಿ ಪದಾರ್ಥ, ಕೋಕ್, ಪ್ಯಾಕ್ ಮಾಡಿದ ಚಿಪ್ಸ್ ಮತ್ತು ಇತರ ತಿಂಡಿಗಳು, ಮಧ್ಯಪಾನ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ. ಈಗಾಗಲೇ ಈ ತೊಂದರೆ ಇರುವವರು ಪಾಲಕ್, ಎಲೆಕೋಸು, ಬ್ರಕೂಲಿ, ಮಶ್ರೂಮ್ ಸೇವನೆ ನಿಲ್ಲಿಸಬೇಕು.
– ಹೆಚ್ಚು ಹೊತ್ತು ಹಸಿವಿನಿಂದ ಮತ್ತು ಬಾಯಾರಿಕೆಯಿಂದ ಇರುವುದು ಯೂರಿಕ್ ಆಮ್ಲದ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.
-ಡಯಾಬಿಟಿಸ್ ರೋಗಿಗಳು ಸಹಾ ಯೂರಿಕ್ ಆಸಿಡ್ ಹೊಂದಬಹುದು.
-ಬೊಜ್ಜು ಅನೇಕ ರೋಗಗಳ ಮೂಲವಾಗಿದೆ. ಕೆಲವೊಮ್ಮೆ ಇದು ಯೂರಿಕ್ ಆಮ್ಲವನ್ನು ಹೆಚ್ಚಿಸಲು ಕಾರಣವಾಗಬಹುದು.
ಯೂರಿಕ್ ಆಮ್ಲ ಹೆಚ್ಚಾದಾಗ ಈ ಮನೆಮದ್ದುಗಳನ್ನು ಅನುಸರಿಸಿ:
ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ಸಾಧ್ಯವಾದಷ್ಟು ನೀರು ಕುಡಿಯುವುದು. ಕೇವಲ ನೀರು ಮಾತ್ರವೇ ಯೂರಿಕ್ ಆಮ್ಲವನ್ನು ಕರಗಿಸಬಲ್ಲದು. ಹಾಗಾಗಿ ಹೆಚ್ಚು ನೀರು ಕುಡಿಯಬೇಕು. ಇದರ ಮೂಲಕ ಯೂರಿಕ್ ಆಮ್ಲವು ದೇಹದಿಂದ ಮೂತ್ರದ ಮೂಲಕ ಹೊರಹೋಗುತ್ತದೆ. ಯಾವುದೇ ಕಾರಣಕ್ಕೂ ನಿರ್ಜಲೀಕರಣ ( dehydration ) ಆಗದಂತೆ ನೋಡಿಕೊಳ್ಳಬೇಕು.
ಒಂದು ಮಧ್ಯಮ ಗಾತ್ರದ ಸೌತೆಕಾಯಿ, ಹಿಡಿ ಕೊತ್ತಂಬರಿ ಸೊಪ್ಪು, ಒಂದು ಇಂಚು ಹಸಿ ಶುಂಠಿ ರುಬ್ಬಿ ಜ್ಯೂಸ್ ಮಾಡಿಕೊಂಡು ಅರ್ಧ ಹೂಳು ನಿಂಬೆರಸ ಹಾಕಿ ದಿನಕ್ಕೊಂಮ್ಮೆ ಕುಡಿಯುತ್ತಿದ್ದರೆ ತೊಂದರೆ ಬೇಗ ನಿವಾರಣೆ ಆಗುತ್ತದೆ. ಕೊತ್ತಂಬರಿ ಸೊಪ್ಪಿನ ಬದಲು ಅನಾನಸ್ ( Pineapple ) ಸಹ ಉಪಯೋಗಿಸಬಹುದು.
ಊತ ಮತ್ತು ನೋವು ಜಾಸ್ತಿಇದ್ದರೆ ಉಪ್ಪಿನ ಶಾಖ ಅಥವ ಮರಳಿನ ಶಾಖ ಕೊಟ್ಟರೆ ಸ್ವಲ್ಪ ಪರಿಹಾರ ಸಿಗುತ್ತದೆ. ರಾತ್ರಿ ಮಲಗುವ ಮೊದಲು ಬಿಸಿನೀರಿನಲ್ಲಿ ಕಲ್ಲುಪ್ಪು ಹಾಕಿ ಪಾದಗಳನ್ನು ಇಡುವುದರಿಂದ ಸಹ ನೋವು ಕಡಿಮೆಯಾಗುತ್ತದೆ ಒಳ್ಳೆ ನಿದ್ದೆ ಬರುತ್ತದೆ. ಉರಿ ಜಾಸ್ತಿಯಾದರೆ ಫ್ರಿಜ್ ನಲ್ಲಿ ಇಟ್ಟ ಆಲೂವಿರ ಹಚ್ಚಿ.
ಬಹಳ ಕಾಲದಿಂದ ತೊಂದರೆಯಿದ್ದು ಮೂಳೆಗಳು ಹೊರಬಂದು ಪಾದಗಳು ವಿಕಾರವಾಗಿದ್ದಲ್ಲಿ ನಿಮಗೆ ಮೆಡಿಕಲ್ ಶಾಪ್ ಮತ್ತು online ನಲ್ಲಿ ಪಾದಗಳಿಗೆ ಕಟ್ಟುವ ಪಟ್ಟಿ / pad ಸಿಗುತ್ತೆ. ಸತತವಾಗಿ ಹಲವು ತಿಂಗಳು ಹಾಕಿಕೊಂಡಲ್ಲಿ ಪಾದಗಳು ಮೊದಲಿನ ಆಕಾರಕ್ಕೆ ಬರುತ್ತದೆ ( ಚಿತ್ರ – 7 ನೋಡಿ ).
ಮುಖ್ಯವಾಗಿ ಜಂಕ್ ಆಹಾರ ತ್ಯಜಿಸಬೇಕು ಅಥವಾ ಕಮ್ಮಿ ಮಾಡಬೇಕು. ನೀರು ಜಾಸ್ತಿ ಕುಡಿಯಬೇಕು. ಹಾಗಾದಲ್ಲಿ ಮಾತ್ರ ಯೂರಿಕ್ ಆಸಿಡ್ ಮತ್ತು ಗೌತಿ ( Gout ) ತೊಂದರೆಯಿಂದ ಪಾರಾಗಬಹುದು.
- ಮಂಜುನಾಥ್ ಪ್ರಸಾದ್