ಸಂಸ್ಕಾರಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದಲ್ಲಿನ ‘ಸ್ಕಂದ ಕೃಪಾ’ ಮನೆಯಲ್ಲಿ ಪ್ರತಿವರ್ಷ ಉಚಿತ ‘ವಸಂತ ವೇದ ಪಾಠ ಶಿಬಿರ’ ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿ, ಈ ಶಿಬಿರದ ಕುರಿತು ಬಾಲು ದೇರಾಜೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ…
ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ವ್ಯಾಪ್ತಿಗೊಳಪಟ್ಟ ಚೂಂತಾರು ವೈದಿಕ ಮನೆಗಳಲ್ಲಿ ಒಂದಾದ ‘ಸ್ಕಂದ ಕೃಪಾ’ ಮನೆಯ ವೇ.ಮೂ. ಶ್ರೀ ಶಿವ ಪ್ರಸಾದ ಭಟ್ ಚೂಂತಾರು ಹಾಗೂ ಶ್ರೀಮತಿ ವಿದ್ಯಾಸರಸ್ವತಿ ದಂಪತಿಗಳಿಗೆ ಒಬ್ಬಮಗ ಶ್ರೀಸ್ಕಂದ ಮತ್ತು ಕುಮಾರಿಯವರಾದ ಸೀಮಂತಿನಿ – ಸುರಭಿ ಇಬ್ಬರು ಹೆಣ್ಷು ಮಕ್ಕಳು.
ಶ್ರೀ ಶಿವ ಪ್ರಸಾದ ಭಟ್ ಕೃಷಿಕರಾಗಿದ್ದು, ಜೊತೆಗೆ ಪೌರೋಹಿತ್ಯದಲ್ಲಿ ತೊಡಗಿದ್ದು, ಏಪ್ರಿಲ್12, 2009 ನೇ ಇಸವಿಯಿಂದ ತಮ್ಮತಂದೆ ದಿ.ಕೃಷ್ಣಭಟ್ ಪ್ರತಿಷ್ಠಾನ (ರಿ) ಚೂಂತಾರು ನಾಮಧ್ಯೇಯದಿಂದ ಮನೆ ಸ್ಕಂದ ಕೃಪಾದಲ್ಲಿ “ಉಚಿತ ವಸಂತ ವೇದ ಪಾಠ ” ಶಿಬಿರವನ್ನು ಪ್ರಾರಂಭಿಸಿದರು. ಈ ಶಿಬಿರಕ್ಕೆ ಮುಖ್ಯ ಕಾರಣಕರ್ತರಾಗಿ ಸ್ತ್ರೀ ಶಕ್ತಿಯಾಗಿ ಮುನ್ನಡೆಸುತ್ತಾ ಬಂದವರು ಶ್ರೀಮತಿ ವಿದ್ಯಾ ಸರಸ್ವತಿ ಚೂಂತಾರು.
ಈ ವೇದ ಪಾಠ ಶಿಬಿರವು ಪ್ರತೀ ವರ್ಷ ಮಕ್ಕಳ ದೊಡ್ಡ ರಜೆಯಲ್ಲಿ ಪ್ರಾರಂಭಗೊಂಡು ಒಂದು ತಿಂಗಳ ಕಾಲ ನಡೆಯುತ್ತಿದ್ದು, ಈ ಸಮಯಗಳಲ್ಲಿ ಸುಮಾರು 60 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿ, ಜೊತೆಗೆ ಸಂಧ್ಯಾವಂದನೆ, ಯೋಗ, ಕ್ರೀಡೆ ಮುಂತಾದ ಮಕ್ಕಳ ಮನೋವಿಕಾಸಕ್ಕನುಗುಣವಾದ ಪಾಠಗಳಿದ್ದು ಮುಂದಿನ ಸುಸಂಸ್ಕೃತ ಜೀವನಕ್ಕೆ ದಾರಿ ದೀಪವಾಗಿ, ಸಾಧಕರನ್ನು ಗೌರವಿಸಿ ಸನ್ಮಾನಿಸಿದೆ. ಇಲ್ಲಿ ಊಟ-ವಸತಿ ಎಲ್ಲವೂ ಉಚಿತವಾಗಿರುತ್ತದೆ.
ಕಳೆದ ವರ್ಷ ದಲ್ಲಿ ಶ್ರೀಮತಿ ವಿದ್ಯಾಸರಸ್ವತಿ ಯ ಅಗಲಿಕೆಯಿಂದ ಈ ವರ್ಷ ದ ಶಿಬಿರವನ್ನು ದ್ವಾರಕಾ ಪ್ರತಿಷ್ಠಾನ (ರಿ) ಕರ್ನಾಟಕ ರಾಜ್ಯ ಸಹಕಾರಿ ನೌಕರರ ಸಮುದಾಯ ಭವನ, ಪುತ್ತೂರು ದ.ಕ ಹಾಗೂ ದಿ.ಕೃಷ್ಣ ಭಟ್ ಪ್ರತಿಷ್ಠಾನ (ರಿ) ಚೂಂತಾರು ಇದರ ಸಹ ಯೋಗದಲ್ಲಿ ದಿನಾಂಕ ಏಪ್ರಿಲ್ 14, 2023 ರಂದು ನಂದ ಗೋಕುಲ ವೇದಿಕೆ, ಗೋಕುಲ ಬಡಾವಣೆ ಮುಕ್ರಂಪಾಡಿಯಲ್ಲಿ ಉದ್ಘಾಟನೆಗೊಂಡು, ಶ್ರೀ ರಾಮಕೃಷ್ಣ ಭಟ್ ಚೂಂತಾರು ಸೇರಿದಂತೆ ಇನ್ನಿತರ
ಸಂಪನ್ಮೂಲ ವ್ಯಕ್ತಿ ಗಳಿಂದ ಉತ್ತಮ ಶಿಕ್ಷಣ ನೀಡಿದ್ದು, ದಿನಾಂಕ ಮೇ14, 2023 ರಂದು ಉಚಿತ ವೇದ ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮವು ವೇ.ಮೂ.ಕಾಂಚನ ಮುರಳೀ ಕೃಷ್ಣ ಕೆ.ಜಿ. ಆಲಂತಾಯ ವೈದಿಕ ವಿದ್ವಾಂಸರಿಂದ ಉದ್ಘಾಟನೆಗೊಂಡು, ಶ್ರೀ ಹರಿಕೃಷ್ಣ ಭಟ್ ಅರ್ತ್ಯಡ್ಕ ರ ಅಧ್ಯಕ್ಷತೆಯಲ್ಲಿ, ಶ್ರೀ ಗಣರಾಜ ಕುಂಬ್ಳೆ, ಶ್ರೀ ಸತ್ಯಶಂಕರ ಭಟ್ ಚೂಂತಾರು ಹಾಗೂ ಶ್ರೀ ಪಸಾದ ಭಟ್ ಚೂಂತಾರು ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿದ್ದು, ಪುರೋಹಿತರಾದ ಶಂಭಟ್ ಚಾವಡಿ ಬಾಗಿಲು ದಂಪತಿಗಳು, ಹಾಗೂ ವೇದಪಾಠ ದಲ್ಲಿ ತೊಡಗಿಸಿಕೊಂಡ ಶ್ರೀ ನವೀನ ಕೃಷ್ಣ ಉಪ್ಪಿನಂಗಡಿ ಮತ್ತು ಹೇಮಂತ್ ರಾಜ್ ಪಾಂಡೆ ಮುಂತಾದವರಿಗೆ ಗೌರವ ಸನ್ಮಾನಗಳಿಂದ ಈ ವರ್ಷದ ಒಂದು ತಿಂಗಳ ಶಿಬಿರ ಮುಗಿದಿದ್ದು, ಉಚಿತ ವಸಂತ ವೇದ ಪಾಠ ಶಿಬಿರವು ಮುಂದಿನ ವಸಂತ ಕಾಲದ ನಿರೀಕ್ಷೆಯಲ್ಲಿ..
- ಬಾಲು ದೇರಾಜೆ, ಸುಳ್ಯ