ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವರಕವಿ ದ.ರಾ.ಬೇಂದ್ರೆಯವರನ್ನು ಹುಟ್ಟುಹಬ್ಬದಂದು ಸ್ಮರಿಸೋಣ, ಅವರ ಹುಟ್ಟುಹಬ್ಬದ ಅಂಗವಾಗಿ ಕವಿ ಸುರೇಶ ಕೋರಕೊಪ್ಪ ಅವರ ರಚಿತ ಸುಂದರ ಕವನ ಓದುಗರ ಮುಂದೆ ತಪ್ಪದೆ ಓದಿ…
ಯಾರೀಗೂ ಹೇಳೂನೂ ಬ್ಯಾಡಾ
ನಿಂಗೂ ನಂಗೂ ಅಂಟಿದ ನಂಟಿನ
ಕೊನಿ ತಿಳಸೂನೂ ಬ್ಯಾಡಾ. . . ?
ಬಾಳೇದ ಕೆಲಸ
ಬಾಳಿತ್ತೊ ಬರಿತೇನ ತಡಿ
ನೀನ.. ಹೇಳಿರಲಿಲ್ಲೇನೊ
ನಿನ್ನ ಹೊಟ್ಟೀಗ ನೀನ ದುಡಿ
ಅಂತ ಒಂದ ಕಡಿ ! ?
ಅಗಬ್ಯಾಡೊ ಅಜ್ಜಾ
ನನ್ನ ಮ್ಯಾಲ ಸಿಡಿಮಿಡಿ
ಸಣ್ಣ ಕೂಸ ಅಷ್ಟ ನಾ
ನಿನ್ನ ಪಾದದಡಿ
ನಾಕಕ್ಷರಾ ಬರ್ಯಾಕ ಕಲತದ್ದ
ಮದಲ ನಿನ್ನ ಪದಾ ನೋಡಿ !
ಎಲ್ಲಾರ ಎದ್ಯಾಗ
ಗುಡಗುಡಸ್ತಾವ ನಿನ್ನ ನುಡಿ
ದಿನಾ ನೆನಪ ಮನಸಿನ್ಯಾಗ
ಚೂಡಾದ್ಹಾಂಗ ಚಹಾದ ಜೋಡಿ
ಎದರ ಬದರ ಕುಂತ ಕೂಡಿ
ನಿಂತ ನೋಡಿ ಮಾತನಾಡಿ
ಇದ್ಹಾಂಗೈತಿ ನಿನ್ನ ಜೋಡಿ
ಏನ ಮಾಡಿ ಎಂತಾ ಮೋಡಿ ?
ನಾ ಒಬ್ಬ ಬುದ್ಧಿಗೇಡಿ
ಹಿಡಿ ನಿನ್ನ ಜ್ಞಾನದ ಕೊಡಿ
ಎಡಿವಿ ಬೀಳದ್ಹಾಂಗ ತಡಿ
ಕಡಿತನ ಎತ್ಕೊಂಡ ನಡಿ
- ಸುರೇಶ ಕೋರಕೊಪ್ಪ