ಬದನೇಕಾಯಿಯಲ್ಲಿ ನಾನಾ ಬಗೆಯ ಪದಾರ್ಥಗಳನ್ನು ಮಾಡಬಹುದು. ಬಾಯಿಗೆ ರುಚಿಸಲು ಬದನೇಕಾಯಿ ಪಪ್ಪುವನ್ನು ಆಂಧ್ರ ಶೈಲಿಯಲ್ಲಿ ಶುಭಾಷಿಣಿ ಅವರು ಹೇಳಿಕೊಟ್ಟಿದ್ದಾರೆ.ನೀವು ಮನೆಯಲ್ಲಿ ಮಾಡಿ ನೋಡಿ.
ಮಾಡಲು ಬೇಕಾಗಿರುವ ಸಾಮಗ್ರಿಗಳು
ಎಣ್ಣೆ ೪ – ೬ ಚಮಚ
ಜೀರಿಗೆ – ಅರ್ಧ ಚಮಚ
ಮೆಂತ್ಯ – ಅರ್ಧ ಚಮಚ
ಹಸಿ ಮೆಣಸಿನಕಾಯಿ – ೧೦ – ೧೨
ದಪ್ಪ ಈರುಳ್ಳಿ – ೧
ಬೆಳ್ಳುಳ್ಳಿ – ೧
ಟೊಮೆಟೊ – ೨
ಅರಿಶಿಣ ಸ್ವಲ್ಪ
ದನಿಯಾಪುಡಿ – ೧ಚಮಚ ಹುಣಸೆ ಹಣ್ಣು – ನಿಂಬೆಹಣ್ಣು ಗಾತ್ರ
ಕೊತ್ತಂಬರಿ ಸೊಪ್ಪು
ಉಪ್ಪು – ರುಚಿಗೆ
ಒಗ್ಗರಣೆಗೆ :
ಸಾಸಿವೆ – ಅರ್ಧ ಚಮಚ
ಈರುಳ್ಳಿ – ೧
ಮಾಡುವ ವಿಧಾನ :
ಬಾಣಲಿಗೆ ೪ ಚಮಚ ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಮೆಂತ್ಯೆ ಮತ್ತು ಜೀರಿಗೆ ಹಾಕಿ ನಂತರ ಸಣ್ಣಗೆ ಹೆಚ್ಚಿರುವ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ ಹಾಕಿ ಕಡಿಮೆ ಉರಿಯಲ್ಲಿ ಹತ್ತು ನಿಮಿಷ ಬೇಯಿಸಬೇಕು ನಂತರ ಇದಕ್ಕೆ ೧ ಲೋಟ ನೀರು, ಉಪ್ಪು, ಹುಣಸೆಹಣ್ಣಿನ ರಸ, ದನಿಯ, ಅರಿಶಿಣ ಹಾಕಿ ಎಣ್ಣೆ ಬಿಡುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಅದನ್ನು ಮೆತ್ತಗೆ ಮಸೆದುಕೊಂಡು ಅದಕ್ಕೆ ಮಾಡಿ ಸಾಸಿವೆ ಮತ್ತು ಈರುಳ್ಳಿಯೊಂದಿಗೆ ಒಗ್ಗರಣೆ ಹಾಕಿದರೆ ಬದನೆಕಾಯಿ ಪಪ್ಪು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಸವಿಯಲು ಸಿದ್ಧ.
ಕೈ ಚಳಕ : ಶುಭಾಷಿಣಿ
