ಮೌನ ತಾಳಿತು ಕವಿತೆ : ರುದ್ರಾಗ್ನಿ ಶ್ರುತಿ ಮಧುಸೂದನ್

ಕವಿಯತ್ರಿ ರುದ್ರಾಗ್ನಿ ಶ್ರುತಿ ಮಧುಸೂದನ್ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಬಹುಶಃ ಹೀಗೆ
ನೆಮ್ಮದಿಯಾಗಿ
ಮಡಿಲ ಮೇಲೆ ಮಗುವಾಗಿ
ಮಲಗುವಾಸೆಯೊಂದಿತ್ತು…

ಉಸಿರು ಬೆರೆಸಿ
ಮೈ ಬಾಗಿಸಿ
ನೀರೆರದು ನಿಶ್ಚಿಂತೆಯಿಂದ
ಕೂತವಳ
ಕೈ ಬಳೆಗಳ ಸದ್ದು ಕೇಳುತ್ತಾ
ಬೆಳೆದ ಕೂಸುಗಳು,
ಅವ್ವ ಬೆಳೆಸಿದ ಅದೇ
ಹಸಿರು ಮರಗಳ ಸಾಲುಗಳೇ…!

ಆ ಸಾಲು ಮರದ
ಮಕ್ಕಳ ಮಮತೆಗೆ
ಮೌನಾಚರಣೆಯ ಪದವೂ
ಮೌನ ತಾಳಿ
ಈ ಕವಿತೆ ಮಡಿಲ ಪಾಲಿಗೆ
ಶೋಕಾಚರಣೆ….!

ಅವ್ವ…
ನೀ ಮಣ್ಣಾದರೂ ಹಸಿರೇ
ನೀ ಮರವಾಗಿ
ನೆರಳಾಗಿ
ನೆರವಾಗಿ
ಈ ಜೀವರಾಶಿಗಳಿಗೆ
ಸದಾ ಜೀವ ನೀಡುವ ಉಸಿರೇ…

ಇಂತಿ


  • ರುದ್ರಾಗ್ನಿ ಶ್ರುತಿ ಮಧುಸೂದನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading