ಸಾಧನೆ ಅಂದ್ರೆ ಯಾವುದು ?

ದೊಡ್ಡ ದೊಡ್ಡ ಸಾಧನೆ ಮಾಡಬೇಕು ಅಂತಿಲ್ಲ…ಸಾಧನೆ ಎಂದರೇನು? ವಾಣಿ ಮೈಸೂರು ಅವರು ಸಾಧನೆಯ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ….

ಸಾಧನೆ ಅಂದ್ರೆ ಸಾಮಾಜಿಕ ಜಾಲ ತಾಣಗಳಲ್ಲಿ, ಎಲ್ಲರ ಬಾಯಲ್ಲಿ ಮತ್ತು ಎಲ್ಲ ಕಡೆ ನಮ್ಮ ಹೆಸರು ಹರಿದಾಡುವುದು ಸಾಧನೆ ಎನ್ನುವ ಭಾವವೇ ಹೆಚ್ಚು. ಸಾಧನೆ ದೊಡ್ಡದೇ ಆಗ ಬೇಕೆಂದು ಏನು ಇಲ್ಲ, ನಾವು ಬದುಕುವ ರೀತಿ ಕಷ್ಟ ಪಟ್ಟು ರೂಪಿಸಿಕೊಳ್ಳುವ ಪುಟ್ಟ ಬದುಕು ನಮಗೆ ದೊಡ್ಡದೇ ಸಾಧನೆ. ನೋಡುವವರಿಗೆ ಅಲ್ಪ ಅನ್ನಿಸಿದರು, ಪ್ರಾಮಾಣಿಕತೆಯ ಸಾರ್ಥಕ ಬದುಕು ಕೂಡ ಸಾಧನೆಯ ಖುಷಿಗೆ ಕಾರಣ ಅಲ್ಲವೇ?

ಜೀವನದಲ್ಲಿ ಬರುವ ಕೆಲವು ಪಾತ್ರಗಳು ನಮಗೆ ಕಹಿ ಅನುಭವಕೊಟ್ಟರೆ, ಕೆಲವು ಪಾತ್ರಗಳು ಸಿಹಿ ಅನುಭವ ಕೊಟ್ಟು ನಾವು ಬದುಕುವ ದಾರಿಯ ಸಾಧನೆಗೆ ಕಾರಣವಾಗಬಹುದು. ನಮ್ಮದೇ ಸಣ್ಣ ಆಸೆಗಳ ಇಂಗಿತವ ಪೂರೈಸಿದ್ದು ಸಾಧನೆಯೇ? ನಾನೇನು ಸಾಧನೆ ಮಾಡಿಲ್ಲ ಹೀಗೆ ಸಾಗುತ್ತಿದೆ ಜೀವನ.

ಜೀವನದಲ್ಲಿ ಗುರಿ ಇಲ್ಲದೆ ಸಾಗುವ ಬದುಕೇ ಒಂದು ಬದುಕಾ ಅನ್ನುವ ಪ್ರಶ್ನೆ ಕಾಡುವುದು ಸಹಜವೇ. ನಿರಂತರ ಬದುಕಿಗಾಗಿ ಸೆಣೆಸಾಡುವ ಜೀವನವು ಕೂಡ ಸಾಧನೆಯೆ ಆದರೆ ನಮಗೆ ಅನ್ನಿಸದು ಸಾಧನೆ ಎಂದು. ಜೀವನ ಕೆಲವರಿಗೆ ತುಂಬಾ ಸುಲಭ ಮತ್ತು ಕೆಲವರಿಗೆ ಕಠಿಣ ಕಷ್ಟ ಪಟ್ಟು ದುಡಿದು ದಣಿದರೆ ಮಾತ್ರ ಅವರ ಜೀವನ ಸಾಗುವುದು. ಅಂತವರಿಗೆ ಸಾಧನೆ ಬೆಟ್ಟದಂತೆ. ಸಣ್ಣ ಪುಟ್ಟ ಸಾಧನೆಗಳು ನಮ್ಮ ಬದುಕಿನ ಭಾಗಗಳೇ ಆಗಿರುತ್ತದೆ. ಸಣ್ಣದೆ ಆಗಲಿ, ದೊಡ್ಡದೇ ಆಗಲಿ ಸಾಧನೆ ಸಾಧನೆಯೇ? ಸ್ವಾಭಿಮಾನದ ದಿಟ್ಟ ಹೆಜ್ಜೆಯು ಪ್ರಾಮಾಣಿಕತೆಯ ಸಾಧನೆಯ ಕಡೆಗೆ ದಾರಿ ತೋರಿಸುತ್ತದೆ.

ಯಾರ ಸಹಾಯ ಇಲ್ಲದೆ ನಮ್ಮ ಬದುಕಿನ ಬವಣೆಗಳನ್ನು ನಾವೇ ಸ್ವಂತ ಪೂರೈಸಿಕೊಂಡು ಬದುಕುವುದು ಇದೆಯಲ್ಲ ಅದು ಎಲ್ಲಕ್ಕಿಂತ ಸಾಧನೆಯ ಬದುಕೇ. ನಮನ್ನು ನಾವು ಗುರುತಿಸಿ, ಪ್ರೀತಿಸಿ ಮತ್ತು ಅಭಿಮಾನಿಸುವ ಸಾಧನೆ ನಮ್ಮನ್ನು ನಾವು ಅರ್ಥ ಮಾಡಿಕೊಂಡಾಗಲೇ ಸಾಧ್ಯ. ನಮ್ಮನ್ನು ನಾವು ಪ್ರೀತಿಸಿದಾಗ ನಮ್ಮ ಬದುಕು ಕೂಡ ಸಾಧನೆ ಅನ್ನಿಸುವುದರಲ್ಲಿ ಸುಳಲ್ಲ.

ನಮ್ಮ ಬದುಕಿನ ಬದಲಾವಣೆಗೆ ನಮ್ಮದೇ ಪರಿಶ್ರಮದ ಸಾಧನೆಯ ಬೆಳಕೇ ಎನ್ನುವ ಭಾವನೆ ಮನದಲ್ಲಿ ಬೆಳಗಿದರೆ ಬದುಕೇ ಸಾರ್ಥಕ ಅನ್ನಿಸುವುದರಲ್ಲಿ ಸಂದೇಹವಿಲ್ಲ.


  • ವಾಣಿ ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading