‘ಅಕಾಲ’ ಕವನ – ಶಶಿಕುಮಾರ್.ಎಂ.ಎ

ಹಸಿರು ಕ್ರಾಂತಿಯ ನಗುವಲ್ಲಿ ಆ ಕಾಲ … ಬರದ ನಡುವೆ ಕೊರಗುವ ಈ ಕಾಲ… ಶಶಿಕುಮಾರ್.ಎಂ.ಎ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಕಾಲದ ಪರದೆಯ ಹಿಂದಿದೆ ಅಕಾಲ
ಕಾಣದ ಕೈಗಳ ಹಿಡಿತದಲ್ಲಿದೆ ಈ ಕಾಲ
ರಾಜರ ಆಳ್ವಿಕೆಯ ಶಿಸ್ತಿನ ಆ ಕಾಲ
ರಾಜಕೀಯದ ಮೋಜಿನ ಈ ಕಾಲ

ಮದುವಣಗಿತ್ತಿಯ ನಡತೆಯ ಆ ಕಾಲ
ಬಿಚ್ಚೋಲೆ ಗೌರಮ್ಮನ ಈ ಕಾಲ
ಮೈ ಮುಚ್ಚಿ ಬೆವತು ಬೆಳೆದ ಆ ಕಾಲ
ಅಂಗಾಂಗಗಳ ಪ್ರದರ್ಶನದ ಈ ಕಾಲ

ಹಸಿರು ಕ್ರಾಂತಿಯ ನಗುವಲ್ಲಿ ಆ ಕಾಲ
ಬರದ ನಡುವೆ ಕೊರಗುವ ಈ ಕಾಲ
ಕಾಯಿಲೆ ಕಾಣದ ಸುಯೋಗ ಆ ಕಾಲ
ಕಾಯಿಲೆಗೆ ಹೆದರಿ ಸಾಯುವ ಈ ಕಾಲ


  • ಶಶಿಕುಮಾರ್.ಎಂ.ಎ – ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading