ನನ್ನ ಮನದ ಮೊದಲ ಪ್ರೇಮದ ಪುಟ… ನಾ ಕಂಡುಕೊಂಡ ನನ್ನರಸಿ ನನಗಿಷ್ಟ…ಯುವ ಕವಿ ಪ್ರವೀಣ ಮ ಹೊಸಮನಿ ಅವರ ಲೇಖನಿಯಲ್ಲಿ ಅರಳಿದ ಒಂದು ಪ್ರೇಮ ಕವನ, ಮುಂದೆ ಓದಿ…
ಎನ್ನ ಹಚ್ಟೆಯಲ್ಲಿರದಿದ್ದರೂ ಎನ್ನ ಪ್ರೀತಿಯ ನಲ್ಲೆಯವಳು
ಜೀವನದ ಪ್ರತಿ ಹಂತದಲ್ಲೂ ಆಸೆ ಹೊತ್ತು ನಿಂತವಳು
ನನ್ನವ ನನ್ನೀನಿಯಾ ಎಂದು ಆಕಾಂಕ್ಷೆ ಹೊತ್ತವಳು
ಜಲ್ಲ್ ಎನ್ನುವ ಸದ್ದಲ್ಲೇ ಘಲ್ಲೆಂದು ನಿಂತವಳು
ಭಯದಲ್ಲಿ ಅಭಯವ ತುಂಬಿ ದಡ ಸೇರಿಸುವ
ಆಸಾರೆಯ ನಾವಿಕನಂತೆ ಇದ್ದವಳು
ಮಾತು ಬಿಟ್ಟ ನೆಪದಲ್ಲಿದ್ದರೂ ಇನಿಯನ
ಜಪದಲ್ಲೇ ಇರುವವಳು…
ಅರೆಸಿ ಅರಸಿ ಆದವಳು ನನ್ನವಳು
ಕರೆಸಿ ಕೂರಿಸಿ ತನ್ನ ಕರವ ಪಾರ್ಶ್ವಕ್ಕೆ
ಸೂಕಿಸಿದ ಎನ್ನ ಪ್ರೇಮದ ಪ್ರಣಯಿಯವಳು
ಮುನಿಸುವ ಮನಸ್ಸಾದರೂ ತನ್ನೆಲ್ಲಾ ಕನಸು
ತನ್ನ ಪ್ರಣಯನಿಗೆ ಮೀಸಲಿಟ್ಟವಳು
ತುತ್ತ ತಿನ್ನಿಸಿ ಪ್ರೀತಿಯ ದಂಡ ಭರಿಸಿದ ದುಂಡು ಇವಳು
ಅಂತೆ ಕಂತೆ ಇರದಿದ್ದರೂ ಕಟ್ಟಲಾಗದ ದೊಡ್ಡ
ಕಂತಿನ ಪ್ರೀತಿ ತುಂಬುತ್ತಾ ಇರುವವಳು ನನ್ನವಳು
ತನ್ನದೆಂದು ತಿಳಿ ನೀರಿನಂತೆ ಮನವಿಟ್ಟು ನಿಂತವಳು
ಮೃದು ಮನ್ನಸ್ಸಿಗೆ ತನ್ನಿನಿಯನ ನೆನೆದು
ಮುತೈದೆಯಾಗುವ ಆಸೆ ತುಂಬಿದ ಕುಸೂ ಯುವತಿಯವಳು
ಸೂರು ಸಂಪತ್ತಿಗೆ ಹಂಬಲವಿರದ ಮುಗ್ದ ಜೀವಿ ಅವಳು
ಭಾವನಾ ಲೋಕದ ತಿಳಿ ಕಣ್ಣೀರವಳು
ಇನಿಯಾ ನೀ ನೋಡಾ ನಿನ್ನ ಅಂಬರದ
ಪತ್ತಲ ತೊಟ್ಟ ಕನ್ಯೆಯೂ ಅವಳೆ
ಜೊತೆಯಾದವಳು, ನನ್ನರಸಿಯವಳು, ಹೀಗೆ ಇರುವವಳು
ಯಾರವಳು ಯಾರವಳು
ನನ್ನ ಮನದ ಮೊದಲ ಪ್ರೇಮದ ಪುಟ…
ನಾ ಕಂಡುಕೊಂಡ ನನ್ನರಸಿ ನನಗಿಷ್ಟ…
ನನ್ನ ಭಾವನೆ ಜೊತೆಗೆ ತನ್ನ ಮನಸ್ಸಿಟ್ಟವಳು
ನನ್ನ ಜೊತೆ ಪಯಣಿಸಿದ ನನ್ನ ಪ್ರಣಯದರಸಿಯವಳು
ಯಾರಿಗೂ ಬಿಟ್ಟು ಕೊಡದ ತನ್ನ ಸಸಿ ಅವಳು
ನಂದೇ ಎಂಬ ಪ್ರೀತಿಯ ಅಹಂ ಅವಳದು
ಎಲ್ಲಿಯೂ ಒಡೆಯದಂತೆ ಬದು ಕಟ್ಟಿದವಳು
ತನ್ನವನ್ನೆಂದು ಬಿಗಿಯಾಗಿ ನಂಬಿದವಳು
ಮಾತಿಗೊಮ್ಮೆ ಪ್ರೀತಿಯ ಸಿಟ್ಟಿನವಳು
ಸಿಟ್ಟಿನಲ್ಲಿದ್ದರೂ ಇವನೇ ನನ್ನಿನೀಯಾ ಎನ್ನುವವಳು
ಮನಸ್ತಾಪ ಬಂದಾಗ ನನ್ನವರಾರಿಲ್ಲಂದವಳು
ತನ್ನ ಇನಿಯನಗೆ ಮುಗ್ದೆ ಎನಿಸಿದವಳು
ಪ್ರೇಮದ ಕಣ್ಣೀರಲ್ಲಿ ಪ್ರೀತಿಯ ಭಾವ ತುಂಬಿದವಳು
ಸಖನಿಗೆ ಮುದ್ದಿಸುವ ಚಿಟ್ಟೆಯವಳು
ತನ್ನವನು ತನಗೆ ಹುಸಿಯಾಡದವನು
ಎಂದು ಬಿಗಿಯಾಗಿ ನಂಬಿದವಳು
ಆಪತ್ ಕಾಲದಲ್ಲಿ ಮುಸುಕಾಕಿದ್ದ ಮನಸ್ಸಿಗೆ
ಭರವಸೆ ತುಂಬಿದವಳು
ಯಾರವಳು,ಯಾರವಳು,ಯಾರವಳು
ಆಕೆ ನನ್ನಾಕೆ…
- ಪ್ರವೀಣ ಮ ಹೊಸಮನಿ – ಯುವಕವಿ, ಲೇಖಕರು.
