ಕುವೆಂಪು ಕನ್ನಡ ನಾಡು- ನುಡಿ ಮರೆಯದ ಕವಿ, ನಮ್ಮಕನ್ನಡ ನುಡಿಗಾಗಿ ಅವರ ಸೇವೆ ಚಿರಸ್ಮರಣೀಯ, ಅವರ ಹಲವಾರು ಕೃತಿಗಳು ಭಾರತದ ಹಲವು ಭಾಷೆಗೆ ಭಾಷಾಂತರಗೊಂಡು ಕನ್ನಡವ ಪಸರಿಸಿವೆ ಎಂದರೆ ತಪ್ಪಿಲ್ಲ. – ರೇಶ್ಮಾ ಗುಳೇದಗುಡ್ಡಾಕರ್ ತಪ್ಪದೆ ಓದಿ…
ಕುಪ್ಪಳ್ಳಿ ಇಂದ ಜ್ಞಾನಪೀಠ ದ ವರೆಗೆಗಿನ ಅವರ ಪಯಣ ಅಷ್ಟು ಸುಲಭ ಇರಲಿಲ್ಲ. ಇನ್ನು ನಮ್ಮ ನಾಡಿನ ಪ್ರತಿ ಮಕ್ಕಳು, ವಿದ್ಯಾರ್ಥಿಗಳು ಅವರ ಯಾವುದಾರೂ ಒಂದು ಕವನ,ನಾಟಕ , ಬರಹ ಓದದೆ ತಮ್ಮ ಶಿಕ್ಷಣ ಪೊರೈಸಿ ಇರುವದಿಲ್ಲ. ಕುವೆಂಪು ಎಂಬ ದೈತ್ಯ ಪ್ರತಿಭೆ ಎಂದರೆ ಹಾಗೆ.
ಕುವೆಂಪು ಅವರ ಯಾವ ಬರಹಗಳಲ್ಲಿ ಎಂದೂ ಕಾಣ ಫ್ಯಾಟಂಸಿ ಲೋಕ ಬಣ್ಣಿಸಿಲ್ಲ. ಎನಿದ್ದರು ಇಲ್ಲಿ ವಿಚಾರ, ವೈಚಾರಿಕತೆ, ಮಾನವೀಯತೆಯ ಗೆ ಮಾತ್ರ ಇಲ್ಲಿ ತಾವು. ಅಂತೇಯೇ ಅವರು ಬರೆದಂತೆ ಬದುಕಿ ಬಾಳಿದ ಯುಗದ ಕವಿ ಜಗದ ಕವಿ . ಅವರ ಕವಿತ್ವಕ್ಕೆ ಲಭ್ಯವಾಗದ ವಿಚಾರ ಗಳು ಇಲ್ಲ ಎಂಬುವಂತೆ ಅವು ಜನಮಾನಸದಲ್ಲಿ ಅಚ್ಚು ಒತ್ತಿವೆ.
ಅವರ ಕುವೆಂಪು ಸಮಗ್ರ ಕಾವ್ಯ ಸಂಪುಟ -೨ ರಲ್ಲಿ ಕಾಣ ಸಣ್ಣ ಗುವ ಒಂದೂಂದು ಕವನಗಳು ತಿಳಿವಿನ ಹರಿವು ದಿವ್ಯ ಬೆಳಕು. ಈ ಆಗಾಧ ಕಾವ್ಯ ಸಂಪುಟದಲ್ಲಿ ಎಲ್ಲ ಪ್ರಕಾರದ ಕಾವ್ಯಗಳನ್ನು ನಾವು ಕಾಣಬಹುದು ,ಆದರೆ ಕೆಲ ಕವನಗಳನ್ನು ಮಾತ್ರ ಇಲ್ಲಿ ಪರಿಚಯಿಸಿರುವೆ.

ಕವನ – ಶಶಿಯ ದೋಣಿ
ಪ್ರಕೃತಿ ರಮ್ಯ ಮನೋಹರ ನೋಟವ ಕವಿ ಕುವೆಂಪು ಅವರ ಬಣ್ಣನೆಯಲ್ಲಿಯೇ ಓದಿ ಮನ ತಣಿಯ ಬೇಕು ಅನ್ನುವಷ್ಟು ಈ ಕವನದಲ್ಲಿ ಭಾವಗಳು ಪ್ರಕಟವಾಗಿವೆ. ಚಂದ್ರನೇ ಧರೆಯ ಅಂದವ ಸವಿಯಲು ದೋಣಿ ವಿಹಾರಕ್ಕೆ ಹೋರಟ ಎಂಬ ಅವರ ಕಲ್ಪನೆ ಅನನ್ಯ.
” ನೀಲಧಿಯಲಿ ಶಶಿಯ ದೋಣಿ
ಈಸುತಿತ್ತು;
ಮಂದಾನಿಲಂ ಮಂದಮಂದಂ
ಬೀಸುತಿತ್ತು;
ತೇನೆ ಹಕ್ಕಿಯೊಂದು ವಾಣಿ
ಕೇಳುತಿತ್ತು ;
ಮುಗಿಲಿನಿಂದ ಜೊನ್ನ ಜೇನು
ಬೀಳುತಿತ್ತು !
ಕುಳಿತು ಶಶಿಯು ದೋಣಿಯಲಿ
ಮುಗಿಲ್ದೆರೆಯ ಬಾನಿನಲ್ಲಿ
ಈಸಿ ಈಸಿ ,
ಬೆರೆತು ತಂಪುಗಾಳಿಯಲಿ
ಮಲೆಯ ಬನ ಬನಂಗಳಲಿ
ಬೀಸಿ ಬೀಸಿ,
ಮಲೆ = ಬೆಟ್ಟ ,ಜೊನ್ನ = ಬೆಳದಿಗಂಗಳು .
ಈಡೀ ಕವನದಲ್ಲಿ ಪ್ರಕೃತಿಯ ಒಡನಾಡಿಗಳಾದ ಗಾಳಿ,ಪಕ್ಷಿ, ಮುಗಿಲು ,ಚಂದ್ರರೇ ಪಾತ್ರವಾಗಿ ಹೊರಹೊಮ್ಮಿವೆ, ಪದಗಳು ಒಂದಕ್ಕೊಂದು ಪೊರಕವಾಗಿ ಜೋಡನೆಯಾಗಿ ಸುಂದರ ಕವಿತೆ ಮೂಡಿದೆ.
ಕವಿಯ ಕಲ್ಪನೆಯಲ್ಲಿ ಬೆಳದಿಗಳೊಂದು ಅದ್ಬುತ ರೂಪಕವಾಗಿದೆ ಬಾನಿನಲ್ಲಿತೇಲುವ ಚಂದಿರ ಈ ವನಸಿರಿಯ ನೋಡಲು ದೋಣಿಯಲ್ಲಿ ವಿಹರಿಸಿದಂತೆ ,ಬೀಸುವ ಗಾಳಿಯು ಮಂದ ಅನಿಲವಾಗಿ ತಂಪೆರೆದಂತೆ, ಹಕ್ಕಿಯ ಕಲರವ ವಾಣಿಯಾದಂತೆ ಆ ಬೆಳದಿಂಗಳು ಜೇನಾಗಿ ಆಕಾಶದಿಂದ ಸುರಿಯುತ್ತಿದೆ. ಅಬ್ಬ ಎಂತಹ ಶ್ರೇಷ್ಠ ಕಲ್ಪನೆ, ಕವಿಯ ಮನಕೆ ಸಾಟಿಯೇ ಇಲ್ಲ ಎಂಬಂತೆ “ಬೆಳದಿಂಗಳು “ಎಂಬ ವಿದ್ಯಮಾನ ಇಲ್ಲಿ ರಮ್ಯಮನೋಹರವಾಗಿ ಪ್ರಕಟವಾಗಿದೆ. ಈ ಕವನ ಓದುಗರಿಗೆ ನಿತ್ಯ ನೋಡುವ ಪರಿಸರದ ನೋಟ ಅಸಾಮಾನ್ಯವಾಗಿ ಕಾಣುವಂತೆ ಮಾಡುತ್ತದೆ .ಹಾಗೆಂದು ಈ ಕವನ ಮಲೆನಾಡ ಘಮಲನ್ನು ಮಾತ್ರ ಹರಡಿದೆ ಎಂದರೆ ಅದು ತಪ್ಪು ಓದುಗರ ಭಾವಕ್ಕೆ ಕವನಗಳು ಒಪ್ಪಿಗೆಯಾಗುತ್ತವೆ.

ಫೋಟೋ ಕೃಪೆ : karnataka.com
ಇದು ಕವಿತ್ವ ಪ್ರತಿಧ್ವನಿ , ಕುವೆಂಪು ಅವರ ಎಲ್ಲ ಬರಹಗಳು ಸಹ ಈ ಪ್ರತಿದ್ವನಿಯನ್ನು ಓದುರಲ್ಲಿ ಉಂಟುಮಾಡುತ್ತವೆ .ಎಂದರೆ ಖಂಡಿತಾ ತಪ್ಪಲ್ಲ. ಅವರ ಮತ್ತೊಂದು ಕವನ ” ದೇವರು ಋಜು ಮಾಡಿದನು ” ಎಂಬ ಕವನವನ್ನು ನಾವು ಇಲ್ಲಿ ಸ್ಮರಿಸಬಹುದು ಈ ಕಾವ್ಯಕ್ಕೆ ಅನುಗುಣವಾಗಿ. ಹಕ್ಕಿಗಳ ಸಮೂಹ ನೀಲಾಕಶದಲ್ಲಿ ಹಾರುವಾಗ ದೇವರ ಸಹಿಯಂತೆ ಕವಿಯ ಕಣ್ಣಿಗೆ ರಾಚಿದೆ .ಎಂಬುದನ್ನು ಮನೊಜ್ಞವಾಗಿ ಕುವೆಂಪು ಅವರ ಬಣ್ಣನೆಯಲ್ಲಿ ಕಾಣ ಬಹುದು . ಈ ಬಣ್ಣನೆಗಳು ಉಪೊಕಲ್ಪಿತವಲ್ಲ ನೈಜ ದರ್ಶನಗಳಾಗಿ ಓದುಗರ ಚಿತ್ತಪಟಲದಲ್ಲಿ ಉಳಿಯುತ್ತವೆ.
ಪೈರು ಕೊಯ್ದ ಹೊಲದ ದರ್ಶನ ದಿವ್ಯದರ್ಶನವಾದ ಬಗೆಯನ್ನು ಕವಿ ಈ ಕವನದಲ್ಲಿ ವರ್ಣಿಸಿದ್ದಾರೆ.
ಕವಿತೆ – ಕ್ಗೂ ಕ್ಗೂ ಕ್ಗೂ
ಕ್ಗೂ ಕ್ಗೂ ಕ್ಗೂ ಕ್ಗೂ
ಹೊರಸಿನಲಿ !
ಹೊಲದ ವಾಣಿ !! ಕ್ಗೂ ಕ್ಗೂ ಕ್ಗು
ಏನು ಅರ್ಥ ! ಏನೂ ದರ್ಶನ
ಬುದ್ಧಿ ಸ್ಪಷ್ಟ ವಲ್ಲ,ದಿಟ
ಸಿದ್ದಿ ದರ್ಶನ !…...
ಬಯಲು ನೆಲದ ಹಕ್ಕಿಯ ಕಲರವವೇ ಹೊಲದ ವಾಣಿಯಾಗಿ ಕವಿಗೆ ಕೇಳಿಸಿದೆ ಅದು ಸಿದ್ದ ದರ್ಶನ ವಾಗಿ ತೋರಿದೆ ಆ ಬಯಲ ಪರಿಸರದ ಪ್ರಕ್ರಿಯೆ ಗಳು ಕವಿ ಮನಕೆ ಪ್ರಕೃತಿ ಮತ್ತು ಅದರ ಸೌಂದರ್ಯದ ಅನುಸಂಧಾನವೇ ವಿಶ್ವವಾಣಿಯಾಗಿ ಕವಿಹೃದಯಕೆ ಝೇಂಕರಿಸಿದೆ.
ಕವನ – ರವೀಂದ್ರರ ಗೀತಾಂಜಲಿ
“ನನ್ನ ನಾಡಿಗಳಲ್ಲಿ ದಿನರಾತ್ರಿಯೂ ಪ್ರವಹಿಸುತ್ತಿರುವ
ಪ್ರಣವಾಹಿನಿಯೇ ಜಗಜ್ಜೀವನದಲ್ಲಿಯೂ ಅಂರ್ಗಾಮಿಯಾಗಿ ಹರಿದು ನರ್ತಿಸುತ್ತಿದೆ “. ಈ ಜೀವಗಂಗೆತ ಜಯತೀರ್ಥ ದಲ್ಲಿ ಮಿಂದು ನನ್ನ ಅಂಗಗಾಗಳಲ್ಲ ಪುನೀತವಾಗಿವೆ; ಯುಗ ಯುಗಾಂತರದ ಆ ಜೀವನಸ್ರೋತವೆ ಇಂದು ಈ ಕ್ಷಣದಲ್ಲಿ ನನ್ನ ಧಮನಿಯಲ್ಲಿಯೂ ಹೊಮ್ಮಿ ಚಿಮ್ಮುತ್ತಿಹದು ಎಂಬದೆ ನನಗೆ ಹಿಗ್ಗು ಹೆಮ್ಮೆ .
ರವೀಂದ್ರನಾಥ್ ಟ್ಯಾಗೋರ್ ಅವರ ಬಗ್ಗೆ ಇಡೀ ಜಗತ್ತೆ ಹೆಮ್ಮೆ ಪಡುತ್ತದೆ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಶಾಂತಿನಿಕೇತನ ಶಾಲೆ ಅದ್ಬುತ ಪ್ರಯೋಗ. ಅವರಿಗೆ ನೊಬೆಲ್ ದೊರಕಿದ ಸಂದರ್ಭದಲ್ಲಿ ಅನೇಕ ಕನ್ನಡದ ಮಹನೀಯರು ಅವರನ್ನು ಭೇಟಿ ಮಾಡಿದರು ಹಾಗೂ ಬೇಟಿಮಾಡುವ ಕನಸೂ ಅನೇಕ ಯುವಕರಿಗಿತ್ತು. ಅವರ ಬೆಂಗಾಳಿಯ ಬರಹಗಳು ಹಲವಾರು ಕನ್ನಡಕ್ಕೆ ಅನುವಾದಗೊಂಡು” ಕನ್ನಡದ ರವೀಂದ್ರ “. ಎನ್ನುವಷ್ಟು ಗಾಢವಾಗಿ ಬೆರತಿವೆ. ಅಂತಯೇ ಕನ್ನಡದ ಅನೇಕ ಕವಿವರ್ಯರು ರವೀಂದ್ರನಾಥ ಟಾಗೋರ್ ಅವರ ಪ್ರಭಾವಕ್ಕೆ ಒಳಾಗದರು ಇದಕ್ಕೆ ಕುವೆಂಪು ಸಹ ಹೊರತಲ್ಲ ಈ ಕವನ ಅವರ ಗೀತಾಂಜಲಿ ಕವನದ ಬಗ್ಗೆ ಹೇಳುತ್ತದೆ.
ಕವನ ಓದಲು ಸುಲಭವದರೂ ಕೆಲ ವಾಕ್ಯಗಳುದೇ ಎಂದು ತಕ್ಷಣಕ್ಕೆ ಅನಿಸಿದರು ಒಂದು ಪದವಾಗಲಿ, ವಾಕ್ಯವಾಗಲಿ ಪುನರಾವರ್ತನೆ ಅಗಿಲ್ಲ. ವಾಚ್ಯಾರ್ಥಗಳು ವಿಭಿನ್ನವಾಗಿ ಕವನವನ್ನು ಬಂಧಿಸಿವೆ. ಈ ಸಮಗ್ರ ಕೃತಿ ಹಲವಾರು ವೈವಿಧ್ಯಮಯ ಕವನಗಳಿಂಸ ಸಮೃದ್ಧ ವಾಗಿದೆ. ಭಾಷೆಯ ಪರಿಚಯ , ಭಾಷೆಯ ಸೊಗಸು ಇಂತಹ ಕೃತಿಗಳಿಂದ ಓದುಗರಿಗೆ ಲಭ್ಯವಾಗುತ್ತವೆ . ಕಾರಣ ನಾವು ಹಲವಾರು ಪದಗಳನ್ನು ಬಳಸದೇ ಅವು ಅಪರಿಚಿತ ಪದವಾಗಿವೆ ನಮ್ಮ ಭಾಷೆ !!!?. ಇಂತಹ ಅದ್ಬುತ ಕೃತಿಯ ಓದು ಜ್ಞಾನದ ಗಣಿಯಂತೆ ಓದುಗರಿಗೆ ಅಕ್ಷರದ ಅಮೃತ ಸುಧೆ ಸವಿದಂತೆ ಪುಳಕವಾಗುತ್ತದೆ.
ಕನ್ನಡದ ಮೇರು ಕವಿಯ ಕೃತಿ ಪರಿಚಯವನ್ನು ನನಗೆ ಸಾದ್ಯವಾದ ಮಟ್ಟಿಗೆ ಗ್ರಹಿಸಿರುವೆ ತಪ್ಪುಗಳು ಕಂಡಲ್ಲಿ ಕ್ಷಮೇ ಇರಲಿ…
- ರೇಶ್ಮಾ ಗುಳೇದಗುಡ್ಡಾಕರ್