“ಗುರು ದತ್ತಾತ್ರೇಯ” ಕವನ – ಸವಿತಾ ರಮೇಶ

ಚರಣ ಸ್ಪರ್ಶದಿಂದಲೇ ಪಾಪವೆಲ್ಲವು ನಾಶ…ದತ್ತ ದತ್ತ ನಿನ್ನ ನಾಮ ನಾಲಿಗೆಯಲ್ಲಿರಲಿ…ಕವಿ ಸವಿತಾ ರಮೇಶ ಅವರ ಲೇಖನಿಯಲ್ಲಿ ಅರಳಿದ ಗುರು ದತ್ತಾತ್ರೇಯ ಸ್ಮರಣೆಯನ್ನು ತಪ್ಪದೆ ಮುಂದೆ ಓದಿ…

ದತ್ತ ನಿನ್ನ ಮಹಿಮೆ ಅರಿಯದಾದೆ ಅಂದು
ಇತ್ತ ನಿನ್ನ ಕೃಪೆಯಾ ಬೀರು ಎಂದೆ ಇಂದು//

ಕಷ್ಟ ನಷ್ಟದಿ ನೊಂದು ಬೆಂದಿಹೆನು ನಾನು
ಇಷ್ಟ ಪಟ್ಟು ನಿನ್ನಯ ಭಕ್ತಳಾಗಿ ಸ್ವೀಕರಿಸು//

ಎಷ್ಟು ಜನ್ಮದ ಪುಣ್ಯ ನಿನ್ನ ಪಾದ ಸಿಕ್ಕಿದೆ
ಇಷ್ಟು ದಿನ ಕಣ್ಣಿದ್ದು ಕುರುಡಿ ನಾನಾಗಿದ್ದೆ //

ದಿವ್ಯ ಮಹಿಮ ನಿನ್ನ ಸೇವೆ ಮಾಡೋ ಭಾಗ್ಯ
ನಿತ್ಯ ಸಿಗಲಿ ನಿನ್ನ ಸನಿಹ ಇರುವ ಕ್ಷಣಗಳು//

ಚರಣ ಸ್ಪರ್ಶದಿಂದಲೇ ಪಾಪವೆಲ್ಲವು ನಾಶ
ಪರಮ ಶ್ರೇಷ್ಠ ದಿವ್ಯ ಮೂರ್ತಿಯ ನಿವಾಸ //

ದತ್ತ ದತ್ತ ನಿನ್ನ ನಾಮ ನಾಲಿಗೆಯಲ್ಲಿರಲಿ
ಎತ್ತ ನೋಡಿದರು ದತ್ತ ಎನಗೆ ಕಾಣುತಿರಲಿ//

ದತ್ತನಿದ್ದರೆ ಮತ್ತೆ ಭಯವೆಂಬುವುದು ದೂರ
ದತ್ತ ನಿನ್ನ ಸ್ಮರಣೆಯೊಂದೆ ಎನ್ನ ಉಸಿರಾಗಲಿ //


  • ಸವಿತಾ ರಮೇಶ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading