ಕನ್ನಡದ ಜನಪ್ರಿಯ ಲೇಖಕರಾದ ಯತಿರಾಜ್ ವಿರಾಂಬುಧಿ ಅವರು ವೃತ್ತಿಯಲ್ಲಿ ಇಂಜಿನಿಯರ್. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆದಿರುವ ಇವರ ‘ಮಾಸದ ವಿಜಯ ‘ಎನ್ನುವ ವ್ಯಕ್ತಿತ್ವ ವಿಕಸನ ಕುರಿತ ಈ ಕೃತಿಯು ಸ್ಪಷ್ಟವಾದ ಆಲೋಚನಾ ದಾಟಿ ಹಾಗೂ ನವಿರಾದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ಮಾಸದ ವಿಜಯ.
ಲೇಖಕರು: ಯತಿರಾಜ್ ವಿರಾಂಬುಧಿ.
ಜಯ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ:೨೦೧೫.
ಪುಟಗಳು: ೧೯೨.
ಬೆಲೆ: ರೂ. ೧೨೦.
“ಮಾಸದ’ ಎಂದರೆ ತಿಂಗಳಿನ ಎಂದು ಒಂದರ್ಥ.’ಮಾಸದ’ ಎಂದರೆ ಎಂದೂ ಅಳಿಸದ ಎನ್ನುವುದೂ ಇನ್ನೊಂದರ್ಥ. ಇಲ್ಲಿ ಯಶಸ್ಸಿನ ವಿಜಯ ಎಂದೂ ಅಳಿಸದೇ ಇರಲಿ ಎನ್ನುತ್ತಾರೆ ಲೇಖಕರು. ಎಲ್ಲೂ ಅಧ್ಯಾಯಗಳಿಲ್ಲದೇ ಒಂದು ಸುಧೀರ್ಘ ಪ್ರಬಂಧದ ಮಾದರಿಯಲ್ಲಿರುವ ಈ ಪುಸ್ತಕವು ಓದುಗನಿಗೆ ಯಶಸ್ಸಿನ ಧನಾತ್ಮಕ ಚಿಂತನೆಯ ಆಯಾಮಗಳನ್ನು ಪರಿಚಯಿಸುತ್ತದೆ.

ನಾವು ಮಾಡುವ ಕೆಲಸವನ್ನು ಚೆನ್ನಾಗಿ ಮಾಡಿ ಮುಗಿಸಿದರೆ ಅದೇ ಯಶಸ್ಸು! ಆಸಕ್ತಿ ಮತ್ತು ಕ್ರಿಯಾಶೀಲತೆ ಅದರ ಕೀಲಿಕೈ. ಬಹಳ ಜನರು ಯಶಸ್ಸೆಂದರೆ ಶ್ರೀಮಂತಿಕೆ, ಕೀರ್ತಿ ಪ್ರಭಾವಶಾಲಿಯಾಗಿರುವುದು. ಎಂದುಕೊಂಡಿರುತ್ತಾರೆ.ಆದರೆ ಬುದ್ಧಿವಂತರ ದೃಷ್ಠಿಯಲ್ಲಿ ಯಶಸ್ಸು ಎಂದರೆ ತಾವು ಇಟ್ಟುಕೊಂಡ ಗುರಿಗಳ ಸಾಧನೆ. ಆ ತೃಪ್ತಿಯೇ ಅವರಿಗೆ ಸುಖ ತರುತ್ತದೆ. ಮಾಡಲೇ ಬೇಕೆಂಬ ಮನಸ್ಸಿದ್ದವರಿಗೆ ಯಾವುದೂ ಅಸಾಧ್ಯವಲ್ಲ.ಸಾಧನೆಗಾಗಿ ಸತತವಾಗಿ ಕೆಲಸ ಮಾಡಬೇಕಾಗುತ್ತದೆ. ಕ್ರಿಯಾಶೀಲತೆ ಹೆಚ್ಚಿದಷ್ಟೂ ಫಲಿತಾಂಶ ಚೆನ್ನಾಗಿರುತ್ತದೆ.
ಕೋಪ ಮತ್ತು ಕಹಿಭಾವನೆ ನಮ್ಮಲ್ಲಿ ಹುಟ್ಟದಂತೆ ಜಾಗೃತೆ ವಹಿಸಿ ಎದೆಗಾರಿಕೆಯಿಂದ ಮುನ್ನಡೆಯಬೇಕು. ನಮ್ಮಲ್ಲಿ ಧೈರ್ಯವಿಲ್ಲದಿದ್ದರೆ ನಮ್ಮ ಜಾಣತನವೂ ನಮಗೆ ಕೈ ಕೊಡುತ್ತದೆ. ಸೃಜನ ಶೀಲತೆ ಎನ್ನುವುದು ಒಂದು ಮೃದುವಾದ ಹೂವಿನಂತೆ. ಹೊಗಳಿಕೆಯಿಂದ ಅದು ಅರಳುತ್ತದೆ.ಯಾರಾದರೂ ಟೀಕಿಸಿದರೆ ಅದು ಮುರುಟಿ ಬಾಡುತ್ತದೆ. ಆದ್ದರಿಂದ ಟೀಕೆಯನ್ನು ಕೂಡ ನಾವು ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಬುದ್ಧಿವಂತರು ಮೂರ್ಖರಿಂದ ಕಲಿಯುವಷ್ಟು ಮೂರ್ಖರು ಬುದ್ಧಿವಂತರಿಂದ ಕಲಿಯಲಾರರು.
ನಾವು ತಪ್ಪು ಮಾಡಿದಾಗ ಅದರ ಬಗ್ಗೆ ಬಹಳ ಹೊತ್ತು ಆಲೋಚಿಸ ಬಾರದು.ತಪ್ಪುಗಳೆಂದರೆ ಜ್ಞಾನದ ಪಾಠಗಳು.ಅನುಭವ ಹಾಗೂ ಸಾಮರ್ಥ್ಯಗಳು ನಮ್ಮನ್ನು ಬೆಳೆಸುತ್ತವೆ.
ಬದುಕಿನ ಅತ್ಯಂತ ಮಹಾನ್ ಸಾಧನೆ ಎಂದರೆ ನಮ್ಮನ್ನು ನಾವು ಸತತವಾಗಿ ಬದಲಾಯಿಸಿ ಕೊಳ್ಳುತ್ತಲೇ ಇರುವುದು. ಇದರ ಕೊನೆ ಎಂದರೆ ನಮಗೆ ಹೇಗೆ ಜೀವಿಸಬೇಕೆಂಬ ಸತ್ಯದ ಸಾಕ್ಷಾತ್ಕಾರವಾಗುತ್ತದೆ.

ಸನ್ನಡತೆಯ ಬುನಾದಿಯ ಮೇಲೆ ನಮ್ಮ ಯಶಸ್ಸಿನ ಮನೆ ಎಬ್ಬಿಸಬೇಕು. ಆಗ ಇನ್ನೊಬ್ಬರಿಂದ ಮನ್ನಣೆ ಪಡೆಯುತ್ತೇವೆ.ಅಡಿಪಾಯವೇ ಸರಿ ಇರದಿದ್ದರೆ ಅದು ಬಿದ್ದು ಹೋಗುತ್ತದೆ.ನಾವು ಹೇಳುವುದನ್ನೇ ಮಾಡಿದರೆ,ಮಾಡುವುದನ್ನೇ ಹೇಳಿದರೆ ಅದಕ್ಕಿಂತ ದೊಡ್ಡ ವಿಷಯ ಮತ್ತೊಂದಿಲ್ಲ.
ಯಶಸ್ಸಿನ ಮತ್ತೊಂದು ಅಂಗ ಶಿಸ್ತು ಮತ್ತು ದೃಢ ನಿಶ್ಚಯ.ಘನತೆ ಗೌರವಗಳು ನಮಗೆ ಸಿಗಬೇಕಿದ್ದರೆ ನಮ್ಮಲ್ಲಿ ನಿಯತ್ತು ಇರಬೇಕು. ಒಬ್ಬ ವ್ಯಕ್ತಿಗೆ ಪ್ರತಿಭೆಯಿದ್ದು ಅದನ್ನವನು ಬಳಸದಿದ್ದರೆ ಅವನು ವಿಫಲನಾದ ನೆಂದೇ ಅರ್ಥ.ಅವಕಾಶವನ್ನು ಒಮ್ಮೆ ಕಳೆದುಕೊಂಡರೆ ಅದು ಮತ್ತೆ ಬಾರದು. ಅನೇಕ ಸಲ ನಮ್ಮ ಪ್ರತಿಭೆಗಿಂತ ನಮ್ಮ ಸಹನೆಯು ನಮಗೆ ನಾವು ಬಯಸಿದ ಫಲವನ್ನು ಕೊಡುವ ಸಾಧ್ಯತೆಗಳಿವೆ.ನಮ್ಮ ಜವಾಬ್ದಾರಿಯ ಭಾರವನ್ನು ಸರಿಯಾಗಿ ಹಾಗೂ ಸಕಾರಾತ್ಮಕವಾಗಿ ನಿಭಾಯಿಸಿದಾಗ ಅದೂ ಕೂಡ ಯಶಸ್ಸಿನ ಒಂದು ಭಾಗ.
ಮನುಷ್ಯನೆಂಬ ಯಂತ್ರ ಓಡುತ್ತಾ ಇರಲು ಅವನಿಗೆ ಬೇಕಾಗಿರುವುದು ಪ್ರೇರೇಪಣೆ. ಅದೊಂದು ಮನೋಧರ್ಮ.ಏನೋ ಒಂದು ದೂರದ ಆಸೆ ನಮ್ಮನ್ನು ಜೀವಂತವಾಗಿಡುತ್ತದೆ.ಅದೇ ಪ್ರಚೋದನೆ. ವಿಷಮ ಸ್ಥಿತಿಗಳು ಯಾರನ್ನೂ ಬಿಟ್ಟಿಲ್ಲ.ದುರಾಸೆ ಪಟ್ಟು ಸಂತೃಪ್ತಿ ಇಲ್ಲದ ಮನುಷ್ಯ ನಾಶವಾಗುತ್ತಾನೆ ಎಂಬುದಕ್ಕೆಮಹಾಭಾರತದ ದುರ್ಯೋಧನನೇ ಸಾಕ್ಷಿ. !ಚಿಂತೆ,ಭಯ ಆಶಾಭಂಗ ಇವೆಲ್ಲವೂ ನಮ್ಮ ಶತ್ರುಗಳು.
ಎಲ್ಲರಲ್ಲೂ ತಪ್ಪು ಕಂಡು ಹಿಡಿಯುತ್ತಾ ಕುಳಿತಿರದೇ ನಾವೇ ಸರಿದಾರಿಯತ್ತ ಸಾಗುತ್ತಿರಬೇಕು. ಆಗಲೇ ಮನದೊಳಗಣ ಶಾಂತಿ ನೆಮ್ಮದಿಯನ್ನು ಪಡೆಯುತ್ತೇವೆ. ಆದ್ದರಿಂದ ಸ್ವಪ್ರೇಮದಿಂದ ಇರುವುದು ಮತ್ತು ಇನ್ನೊಬ್ಬರಿಗೆ ಮಾದರಿಯಾಗಿ ಆತ್ಮವಿಶ್ವಾಸದಿಂದ ಬದುಕುವುದು ಎರಡೂ ಮುಖ್ಯ.
ಸಮಯವೇ ಬದುಕು. ಆದ್ದರಿಂದ ಸಮಯವೆಂಬ ತೋಟದಲ್ಲಿ ಉಪಯೋಗವಾಗುವಂಥ ಒಳ್ಳೊಳ್ಳೆಯ ಸಸ್ಯಗಳನ್ನೇ ಬೆಳೆಸೋಣ. ಎಲ್ಲರಿಗೂ ಸುಖ ಬೇಕು.ಆದರೆ ಅದೊಂದು ಗುರಿಯಲ್ಲ.ಅದು ಮನೋಸ್ಥಿತಿ. ನಮ್ಮ ಅಹಂ ಅನ್ನು ದೂರಮಾಡಿಕೊಂಡರೆ , ಕಾಯಾ ವಾಚಾ, ಮನಸಾ, ಸ್ವಚ್ಚವಾಗಿದ್ದು ಎಲ್ಲರೊಂದಿಗೆ ಜಾಣತನದಿಂದ ಹೊಂದಿಕೊಂಡು ಹೋಗುವ ಗುಣವಿದ್ದರೆ ನಾವು ನಮ್ಮ ಬದುಕಿನಲ್ಲಿ ಬಹುದೂರ ಸುಗಮ ರೀತಿಯಲ್ಲಿ ನಡೆಯ ಬಲ್ಲೆವು . ಎನ್ನುತ್ತಾರೆ ಲೇಖಕರು.
ಹೀಗೆ ಹಲವಾರು ಧನಾತ್ಮಕವಾದ ಚಿಂತನೆಗಳ ವಿಚಾರಗಳ ಈ ಪುಸ್ತಕದ ಓದು ನಿಜಕ್ಕೂ ಸಂತಸ ನೀಡುತ್ತದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
