‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೭)

ಪವಾಡ ಅನ್ನುವಂತೆ ಹತ್ತು ಎಕರೆ ಜಮೀನಿಗೆ ನೀರು ಊಣಿಸುವಷ್ಟು ನೀರಿನ ಬುಗ್ಗೆ ಹರಿಯಿತು. ಬ್ಯಾಂಕಿನಲ್ಲಿ ಸಾಲ ಪಡೆದು, ಕಬ್ಬು, ಬಾಳೆ ಇತರೆ ತೋಟಗಾರಿಕೆ ಬೆಳೆಯನ್ನು ಬೆಳೆದನು. ಆದರೆ ಪಕ್ಕದ ಜಮೀನಿನವನು ಬೋರವೆಲ ನೀರನ್ನು ತನ್ನ ಜಮೀನಿಗೂ ಬಿಡುವಂತೆ ಕೇಳಿಕೊಂಡನು. ಈತ ನಿರಾಕರಿಸಿದ. ಅದು ಇಬ್ಬರ ನಡುವೆ ಮನಸ್ತಾಪ, ವೈಮನಸು ಹುಟ್ಟಿತು. ಮುಂದೇನಾಯಿತು. ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣದಲ್ಲಿ ‘ಎಕ್ಸಪಾರ್ಟೆ ಆದೇಶಕ್ಕೆ ಕೆವಿಯೇಟ್ ಮುಂಜಾಗ್ರತೆ’ ತಪ್ಪದೆ ಮುಂದೆ ಓದಿ…

ಪುಸ್ತಕ : ‘ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ’
ಬೆಲೆ : 200/
ಖರೀದಿಗಾಗಿ : 9448015613

ಅವನು ದಂಗು ಬಡೆದು ಬಿಟ್ಟಿದ್ದನು. ನನ್ನ ಅನುಪಸ್ಥಿತಿ ಯಲ್ಲಿ, ತನಗೆ ಗೊತ್ತಾಗದ ಹಾಗೆ, ತನ್ನ ಗಮನಕ್ಕೆ ಬಾರದೆ, ಎಕ್ಷಪಾರ್ಟೆ/ ಏಕತರ್ಫೆ ಆದೇಶ ಹೇಗಾಯಿತು ಎಂದು ಕಂಗಾಲು ಆಗಿದ್ದನು. ಎಷ್ಟರ ಮಟ್ಟಿಗೆ ಧೈರ್ಯ ಕಳೆದು ಕೊಂಡಿದ್ದನೆಂದರೆ, ಇದೆಂತ ನ್ಯಾಯ ವ್ಯವಸ್ಥೆ, ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲವೆ ? ಎಂದು ಇಡಿ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡು ಬಿಟ್ಟಿದ್ದ ನು. ಕೋಪ ಶಮನ ಆಗುವರೆಗೆ ಏನು ತಿಳಿ ಹೇಳಿದರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವನ ಅಭಿಪ್ರಾಯ ಏನೇ ಇದ್ದರೂ ಸುಮ್ಮನೆ ಕೇಳಿದೆ. ಅವನ ಜಾಗೆಯಲ್ಲಿ ನಾನು ಇದ್ದರೆ ಹೀಗೆ ಅಭಿಪ್ರಾಯ ಪಡುತ್ತಿದ್ದೆ, ಅದು ಸಹಜವೆ.

“ನಾನು ಇಂಜಿನಿಯರ್, ಪ್ರಗತಿಪರ ರೈತ. ತಂದೆ ಬಡತದಲ್ಲಿ ಐದು ಎಕರೆ ಒಣ ಬೇಸಾಯದ ಜಮೀನದಲ್ಲಿ ಕಷ್ಟ ಪಟ್ಟು ದುಡಿದು ನನ್ನನ್ನು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಸಿದ್ದಾನೆ. ಬೆಂಗಳೂರಲ್ಲಿ ಹಲವು ವರ್ಷ ಪ್ರೈವೇಟ್ ಕಂಪನಿಯಲ್ಲಿ ಸರ್ವಿಸ್ ಮಾಡಿದೆನು. ಆದರೆ ವಿದ್ಯೆಗೆ ತಕ್ಕಂತೆ ನೆಮ್ಮದಿ, ಸಂಬಳ ಸಂತೃಪ್ತಿ ದೊರೆಯಲಿಲ್ಲ. ನೌಕರಿ ಬಿಟ್ಟು ಹಳ್ಳಿಗೆ ಬಂದೆನು. ತಂದೆಗೆ ಸಿಡಿಲು ಬಡಿದ ಹಾಗಾಯಿತು. ಹಳ್ಳಿಯಲ್ಲಿ ಇದ್ದು, ಒಕ್ಕಲುತನ ಮಾಡುವುದಾಗಿ ತಿಳಿಸಿದೆನು. ತಾನು ಪಟ್ಟ ನೋವು, ಕಷ್ಟ, ಸಂಕಟ ಪಡ ಬಾರದೆಂದು ನನಗೆ ಇಂಜಿನಿಯರಿಂಗ ಓದಿಸಿದ್ದನು. ಆದರೆ ಮರಳಿ ಹಳ್ಳಿಗೆ ಬಂದು ಕೃಷಿ ಪ್ರಾರಂಭ ಮಾಡಿದ್ದರಿಂದ ಹತಾಷ ನಾದನು. ಇರುವ ಒಬ್ಬನೆ ಮಗನಿಗೆ ನೋವು ಆಗಬಾರದು ಎಂದು ನನ್ನನ್ನು ಕೃಷಿಯಲ್ಲಿ ತೊಡಗಿಸಿ ಕೊಂಡನು. ತಂದೆ ಪಾರಂಪರಿಕ ಕೃಷಿಗೆ ತೊಡಗಿಕೊಂಡಿರುವುದರಿಂದ ಪ್ರಗತಿ ಆಗಿಲ್ಲವೆಂದು ಮನಗಂಡೆನು. ಏನಾದರು ಹೊಸದನ್ನು ಕೃಷಿಯಲ್ಲಿ ಪ್ರಯೋಗಿಸಬೇಕು ಎಂದು ಕೃಷಿ ವಿಜ್ಞಾನಿಗಳ, ತಜ್ಞರ ಸಲಹೆ ಪಡೆದೆನು. ಆರ್ಥಿಕ ನೆರವಿಗಾಗಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದೆನು. ಹೊಸ ಕೃಷಿ ಪ್ರಯೋಗಕ್ಕೆ ಜಮೀನಿನ ಮಣ್ಣು ಯೋಗ್ಯವಿತ್ತು. ಆದರೆ ನೀರಿನ ಅವಶ್ಯಕತೆ ಇತ್ತು. ಸುತ್ತ ಮುತ್ತಲಿನ ರೈತರು ಪಾರಂಪರಿಕ ಅಂತರ್ಜಲ ಹೇಳುವ ಬಾಬಾಗಳು, ಸ್ವಾಮಿಗಳಿಂದ ಜಾಗ ಗುರುತಿಸಿ ಬಾವಿ ತೋಡಿ, ಬೋರವೆಲ್ಲ ಕೊರೆಯಿಸಿ ವಿಫಲ ಆಗಿದ್ದರು. ಅಂತರ್ಜಲ ತಜ್ಞರನ್ನು ಸಂಪರ್ಕಿಸಿ ವೈಜ್ಞಾನಿಕವಾಗಿ ಜಾಗೆಯನ್ನು ಗುರುತಿಸಿದೆನು. ಮನೆ ದೇವರನ್ನು ಸ್ಮರಿಸಿ ಬೋರವೆಲ್ಲ ಕೊರೆಯಿಸಿದೆನು. ಪವಾಡ ಅನ್ನುವಂತೆ ಹತ್ತು ಎಕರೆ ಜಮೀನಿಗೆ ನೀರು ಊಣಿಸುವಷ್ಟು ನೀರಿನ ಬುಗ್ಗೆ ಹರಿಯಿತು. ಬ್ಯಾಂಕಿನಲ್ಲಿ ಸಾಲ ಪ ಡೆದೆನು. ಕಬ್ಬು, ಬಾಳೆ ಇತರೆ ತೋಟಗಾರಿಕೆ ಬೆಳೆ ಬೆಳೆದೆನು.

ಸುತ್ತ ಬರಡು ಭೂಮಿ, ನಡುವೆ ಹಚ್ಚಹ ಸುರಿನಿಂದ ಜಮೀನು ಕಂಗೊಳಿಸಿತು. ಜಮೀನಿನ ಉತ್ತರ ದಿಕ್ಕಿನಲ್ಲಿ ಸರಕಾರಿ ರಸ್ತೆ ಇತ್ತು. ಪಕ್ಕದ ಪೂರ್ವ, ಪಶ್ಚಿಮ ದಿಕ್ಕಿನ ಜಮೀನುಗಳ
ಮಾಲೀಕರನ್ನು ಮನವೊಲಿಸಿ, ಬೆಳೆ ಬೆಳೆದು ಇಂತಿಷ್ಟು ಪ್ರತಿ ವರ್ಷ ಪ್ರತಿಫಲ ಕೊಡುವ ಕರಾರಿನಂತೆ ಸಾಗುವಳಿ ಮಾಡಲಾರಂಭಿಸಿದೆನು. ದಕ್ಷಿಣ ದಿಕ್ಕಿನ ಜಮೀನಿನ ಮಾಲೀಕನನ್ನು ವಿಚಾರಿಸಿದೆನು. ಅವನು ನಿರಾಕರಿಸಿ, ಬೋರವೆಲ ನೀರನ್ನು ಹಣ ಪಡೆದು ತನ್ನ ಜಮೀಣಕ್ಕೆ ಕೊಡುವಂತೆ ಕೇಳಿಕೊಂಡನು. ನಾನು ನಿರಾಕರಿಸಿದೆನು. ಹೀಗೆ ಇಬ್ಬರ ನಡುವೆ ಮನಸ್ತಾಪ, ವೈಮನಸು ಹುಟ್ಟಿತು. ಆತ ನಿನ್ನ ಜಮೀನಿನಲ್ಲಿ ನನಗೆ ದಾರಿ ಹಕ್ಕು ಇದೆ ಎಂದು ಕ್ಯಾತೆ ತೆಗೆದನು. ನಿನ್ನ ಜಮೀನಿಗೆ ಹೋಗಲು ಜಮೀನಿನ ದಕ್ಷಿಣಕ್ಕೆ ದಾರಿ ಇದೆ, ನಿನಗೇಕೆ ದಾರಿ ಕೊಡಲಿ?. ನನ್ನ ಜಮೀನಿನಲ್ಲಿ ನಿನಗೆ ದಾರಿ ಇಲ್ಲ, ದಾರಿ ಹಕ್ಕು ಇಲ್ಲ ಎಂದು ವಾದಿಸಿದೆ. ದಾರಿ ಹೇಗೆ ಪಡೆಯಬೇಕು ಎಂದು ಗೊತ್ತಿದೆ ಎಂದು ಆತ ವಾದಿಸಿದ ಹೀಗೆ ಪ್ರಾರಂಭವಾದ ಮನಸ್ತಾಪ ವ್ಯಾಜ್ಯವಾಯಿತು.”

ಇಷ್ಟೆಲ್ಲ ಹೇಳುವುದೆಲ್ಲ ಕೇಳಿದೆ. ಮಾತು ಮುಂದುವರೆಸಿ ದನು.” ವಕೀಲರೊಬ್ಬರನ್ನು ಭೇಟಿಯಾದೆ. ಅವನು ಕೋರ್ಟಿಗೆ ಹೋಗಬಹುದು, ಕೆವಿಯೇಟ್ ಅರ್ಜಿ ದಾಖಲಿಸಿದರೆ ಸುರಕ್ಷಿತ ಅಂತ ಸಲಹೆ ನೀಡಿದರು. ಸಲಹೆಯಂತೆ ನಡೆ ದುಕೊಳ್ಳಲಿಲ್ಲ.”. ಸುಮ್ಮನೆ ನಕ್ಕು ಹೇಳಿದೆ,” ನೀವು ವಕೀಲರ ಸಲಹೆಯಂತೆ ನಡೆದು ಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮ ಮೇಲೆ ಯಾರಾದರು ದಾವೆ ದಾಖಲಿಸಿ, ಆದಾವೆಯಲ್ಲಿ ನಿಮಗೆ ಸಮನ್ಸ್, ನೋಟಿಸ್ ತಲುಪುವ ಮುಂಚೆ, ನಿಮ್ಮ ಗೈರು ಹಾಜರಿಯಲ್ಲಿ ಏಕ ತರ್ಫೆ ಮಧ್ಯಂತರ ಆದೇಶವನ್ನು ಕೇಳಬಹುದು. ಮೇಲ್ನೋಟಕ್ಕೆ ಕೇಸು ನಿಮ್ಮ ಪರ ಇದೆ. ಪ್ರತಿವಾದಿಯಿಂದ ಹಾನಿ ಆಗುವುದೆಂದು ನ್ಯಾ ಯಾಲಯಕ್ಕೆ ಕಂಡು ಬಂದರೆ ಏಕತರ್ಫೆ ತಡೆಯಾಜ್ಞೆ ಆದೇಶ ಮಾಡುತ್ತಾರೆ. ವಾದಿ ನಿಮ್ಮ ಜಮೀನಿನಲ್ಲಿ ತನಗೆ ಇಜಮೆಂಟ್/ವಹಿವಾಟಿ ದಾರಿ ಹಕ್ಕು ಇದೆ ಎಂದು ಸಾಧಿಸಿ ಕೇಸು ಮಾಡಿ ದ್ದು, ನ್ಯಾಯಾಲಯ ನಿಮ್ಮ ಜಮೀನಿನಲ್ಲಿ ವಾದಿಗೆ ದಾರಿ ಹಕ್ಕು ಇದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ವಾದಿಯ ದಾರಿ ಹಕ್ಕಿಗೆ ತೊಂದರೆ, ಅಡತಡೆ ಮಾಡಬಾರದು ಎಂದು ಎಕ್ಷ ಪಾರ್ಟಿ /ಏಕತರ್ಫೆ ಮಧ್ಯoತರ ತಡೆಯಾಜ್ಞೆ ಆದೇಶ ಮಾಡಿದೆ. ನೀವು ವಕೀಲರ ಸಲಹೆಯಂತೆ ಕೆವಿಯೇಟ್ ಅರ್ಜಿ ದಾಖಲಿಸಿದ್ದರೆ ಕೋರ್ಟ್ ಎಕ್ಷಪಾರ್ಟಿ ಆದೇಶ ಮಾಡುತ್ತಿರಲಿಲ್ಲ.”

ಮಾತು ಶೃದ್ದೆಯಿಂದ ಕೇಳುತ್ತಿದ್ದನು “ಕೆವಿಯೇಟ್ ಅರ್ಜಿ ದಾಖಲಿಸಿದ 90 ದಿನಗಳು ಅವಧಿಗೆ ಅರ್ಜಿ ಅಸ್ತಿತ್ವದಲ್ಲಿ ಇರುತ್ತದೆ. ಆ ಅವಧಿಯಲ್ಲಿ ವಾದಿ ದಾವೆ ದಾಖಲಿಸಿ, ಏಕ ತರ್ಫೆ ಮಧ್ಯoತರ ಆದೇಶ ಕೋರಿದರೆ ಕೋರ್ಟ್ ಯಾವುದೆ ಆದೇಶವನ್ನು ನೀಡದೆ, ನಿಮಗೆ ಮುಂಚಿತ ನೋಟಿಸ್ ನೀಡಿ, ತಕರಾರು ದಾಖಲಿಸಲು ಅವಕಾಶ ಕೊಟ್ಟು ನಿಮ್ಮ ವಾದ ಕೇಳಿ ಗುಣಾತ್ಮಕ ಮಧ್ಯoತರ ಆದೇಶ ಮಾಡುತ್ತದೆ. ಕೆವಿ ಯೇಟ್ ಇಲ್ಲದಿದ್ದರೆ, ಏಕತರ್ಫೆ ಆದೇಶ ಆಗುವಾಗ ನ್ಯಾಯಾಲಯ ವಾದಿ ಹಾಜರು ಪಡಿಸಿದ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಆದೇಶ ಮಾಡುತ್ತದೆ. ಪ್ರತಿವಾದಿ ಕೋರ್ಟಿಗೆ ಹಾಜರಾಗಿ ಏಕತರ್ಫೆ ಆದೇಶವನ್ನು ರದ್ದು ಪಡಿಸಲು ಕೋರ್ಟಿಗೆ ಮನವರಿಕೆ ಮಾಡಬಹುದು “. ಕೆವಿಯೆಟ್ ಬ ಗ್ಗೆ ಸಮಗ್ರ ಮಾಹಿತಿ ಪಡೆದು ನಿರಾಳನಾದನು.

ಪ್ರತಿವಾದಿ ಪರವಾಗಿ ಕೋರ್ಟಿಗೆ ಹಾಜರಾಗಿ, ಮಧ್ಯoತರ ಅರ್ಜಿಗೆ ತಕರಾರು ಸಲ್ಲಿಸಿ, ಲಿಖಿತ ದಾಖಲಾತಿ, ಫೋಟೋ, ಗೂಗಲ್ ಫೋಟೋ, ಹಾಜರುಪಡಿಸಿ, ನಿಜ ಸಂಗತಿ ಅರು ಹಿದೆ. ಮಧ್ಯoತರ ಅರ್ಜಿಯ ಮೇಲೆ ವಾದಿ ಪ್ರತಿವಾದಿಗಳ ವಾದವನ್ನು ಕೇಳಿ ನ್ಯಾಯಾಲಯ, ವಾದಿಯು ಅಸ್ತಿತ್ವದಲ್ಲಿ ಇಲ್ಲದ ದಾರಿಯಲ್ಲಿ ಇಜಮೆಂಟ್ ಹಕ್ಕನ್ನು ಸಾಧಿಸಿ, ಹೊಸದಾಗಿ ದಾರಿ ನಿರ್ಮಿಸುವ ಸಂಭವ ಇದೆ, ಪರ್ಯಾಯ ದಾರಿ ಎಂದು ಅಭಿಪ್ರಾಯಪಟ್ಟು ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿ, ಏಕತರ್ಫೆ ಆದೇಶ ವನ್ನು ತೆರವುಗೊಳಿಸಿತು.

ಮಧ್ಯಂತರ ಆದೇಶದ ಮೇಲೆ ವಾದಿ ಮೆಲ್ಮನವಿ ಕೋರ್ಟಲ್ಲಿ ಆಪಿಲ್ ಸಲ್ಲಿಸಿ ಸ್ಟೇ ಆರ್ಡರ್ ತರುವ ಸಂಭವ ಇರುತ್ತದೆ ಅಭಿಪ್ರಾಯಕ್ಕೆ, ತಕ್ಷಣ ಹೇಳಿದ್ದು, ” ಸರ್, ಮೊದಲು ಕೆವಿ ಯಟ್ ಅರ್ಜಿ ದಾಖಲಿಸಿ”.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading