‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೨)

ಗಂಡು ಮಕ್ಕಳ ನಡುವೆ ಮೈಮನಸ್ಸು ಮೂಡಿತು. ಇಬ್ಬರಿಗೂ ತಾಯಿ ಹೊರೆಯಾದಳು. ತಾಯಿಯನ್ನು ಸಾಕಿ ಸಲುಹಲು ಸಿದ್ದರಾಗಲಿಲ್ಲ. ಹಿರಿಯ ಮಗನಿಗೆ ಸ್ವತಂತ್ರ ಜೀವನ ಬೇಕಿತ್ತು. ಮುಂದೇನಾಯಿತು ವಕೀಲರಾದ ಪ್ರಕಾಶ ವಸ್ತ್ರದ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613

ಕೇಸಿನ ತೀರ್ಪುಗಳು, ಅವುಗಳ ಸಂಗತಿಗಳು, ಪಾರ್ಟಿಗಳ ನಡುವಳಿಕೆ, ತಾಂತ್ರಿಕ ಕೌಶಲ್ಯ, ಕೇಸಿನ ಗುಣಮಟ್ಟ, ನ್ಯಾಯಾಧೀಶರ ಪ್ರಾಸಂಗಿಕ ಅಭಿಪ್ರಾಯದ ಮೇಲೆ ಅವಲಂಬಿತ ಆಗಿರುತ್ತದೆ. ಎಲ್ಲ ತೀರ್ಪುಗಳು ಮತ್ತೊಂದು ಪ್ರಕರಣಕ್ಕೆ ಮಾದರಿ ಆಗಿರುವುದಿಲ್ಲ. ಹಲವು ಕೇಸುಗಳಲ್ಲಿ ಅಪಿಲು ದಾಖಲಿಸಿ ಪ್ರ ಶ್ನಿತ ಆಗುವದಿಲ್ಲ. ಸೋಲುವ ಗೆಲ್ಲುವ ಕ್ರಿಯೆ ನಿರಂತರ ಇರುತ್ತದೆ. ಒಂದು ನ್ಯಾಯಾಲಯದಲ್ಲಿ ಪ್ರಕಟಗೊಂಡ ತೀರ್ಪು, ಮೇಲನ್ಮವಿಯಲ್ಲಿ ರದ್ದುಗೊಳ್ಳಬಹುದು, ಇಲ್ಲವೆ ಅದನ್ನು ಎತ್ತಿ ಹಿಡಿಯಲು ಬಹುದು. ಒಟ್ಟಾರೆ ಕಾನೂನನ್ನು ಕೇಸಿನ ಸಂಗತಿಗೆ ಪುರಾವೆಗಳಿಗೆ ಅಳವಡಿಸಿ ತೀರ್ಪು ನೀಡಿ ನ್ಯಾಯ ನೀಡುವ ದು ನ್ಯಾಯಾಲಯ ಪ್ರಕ್ರಿಯೆ. ನ್ಯಾಯಕೋರಿ ಕೋರ್ಟ್ ಮೆಟ್ಟಲು ಎರುವರು, ತಮ್ಮ ಕೇಸನ್ನು ರುಜು ವಾತು ಪಡಿಸಬೇಕು. ಪ್ರತಿವಾದಿ ಕೇಸು ಆಶಕ್ತ ಇದೆ ಅನ್ನುವ ಕಾರಣದಿಂದ ವಾದಿಯ ಕೇಸಿನ ಗುಣ ಮಟ್ಟ ಬಲಗೊಳ್ಳುವದಿಲ್ಲ. ಕೆಲವು ಸಿದ್ದ ಕಾನೂನು ತತ್ವ, ಸಿದ್ದಾಂತಗಳ ಮೇಲೆ ನ್ಯಾಯ ನಿರ್ಣಯ ಆಗುತ್ತದೆ.

ಪ್ರತಿವಾದಿ ಹೆಣ್ಣುಮಕ್ಕಳ ಪರವಾಗಿ ಕೋರ್ಟಲ್ಲಿ ವಕಾಲತ್ ಪತ್ರ ಸಲ್ಲಿಸಿ, ಲಿಖಿತ ಹೇಳಿಕೆ/ ರಿಟನ್ ಸ್ಟೇ ಟಮೆಂಟ್ ಸಲ್ಲಿಸಲು ಸಮಯ ಪಡೆದುಕೊಂಡೆನು. ತಾಯಿ, ಇನ್ನೊಬ್ಬ ಸಹೋದರ ಗೈರು ಉಳಿದರು.

ವಾದಿ ತನ್ನ ತಾಯಿ, ಇಬ್ಬರು ಹೆಣ್ಣುಮಕ್ಕಳು, ಇನ್ನೊಬ್ಬ ಸಹೋದರನ ಮೇಲೆ ದಾವೆ ಜಮೀನು ಮತ್ತು ಮನೆಯಲ್ಲಿ ಸಮಪಾಲು ಪ್ರತ್ಯೇಕ ಸ್ವಾಧೀನ ಪ್ರಾರ್ಥಿಸಿ ಸಿವಿಲ್ ದಾವೆ ದಾಖಲಿಸಿದ್ದನು. ವಾದ ಪತ್ರದಲ್ಲಿಯ ಸಂಗತಿಗಳು ಹೀಗಿವೆ. ವಾದಿಯ ತಂದೆ 2017 ರಂದು ತನ್ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ತನ್ನ ಮೊದಲ ದರ್ಜೆಯ ವಾರಸುದಾರನ್ನು ಬಿಟ್ಟು ಮೃತನಾದನು. ವಾದಿಯ ತಂದೆಗೆ ತನ್ನ ಹಿರಿಯರಿಂದ ಬಂದ ಹತ್ತು ಎಕರೆ ಜಮೀನು ಹೊಂದಿದ್ದನು. ಪಿತ್ರಾರ್ಜಿತ ಆಸ್ತಿಯ ಉತ್ಪನ್ನದಿಂದ ನಿವೇಶನ ಖರೀದಿಸಿ ಸುಸಜ್ಜಿತ ಮನೆ ಕಟ್ಟಿಸಿದ್ದನು. ತಂದೆ ತೀರಿಕೊಂಡ ನಂತರ ಜಮೀನು ಮತ್ತು ಮನೆಗಳ ಸರಕಾರದ ದಾಖಲೆಯಲ್ಲಿ ಉತ್ತರಾಧಿಕಾರಿಗಳಾದ ಹೆಂಡತಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳ ಹೆಸರು ದಾಖಲಾದವು. ಗಂಡು ಮಕ್ಕಳ ನಡುವೆ ಮೈಮನಸ್ಸು ಮೂಡಿತು. ಇಬ್ಬರಿಗೂ ತಾಯಿ ಹೊರೆಯಾದಳು. ತಾಯಿಯನ್ನು ಸಾಕಿ ಸಲುಹಲು ಸಿದ್ದರಾಗಲಿಲ್ಲ. ಹಿರಿಯ ಮಗನಿಗೆ ಸ್ವತಂತ್ರ ಜೀವನ ಬೇಕಿತ್ತು. ಆಸ್ತಿ ಕಡಿಮೆ ಬಂದರಾಯಿತು, ತಾಯಿ ಸಹೋದರಿಯರಿಗೆ ಸಮಪಾಲು ಕೊಟ್ಟರಾಯಿತು, ತಾಯಿ ಜವಾಬ್ದಾರಿ ಬೇಡವಾಗಿತ್ತು. ಹಿರಿಯ ಮಗ ಕೋರ್ಟಲ್ಲಿ ದಾವೆ ದಾಖಲಿಸಿ ಆಸ್ತಿಯಲ್ಲಿ ಪಾಲು ಕೇಳಿದ್ದಾನೆ. ಸಂಪೂರ್ಣ ವಿವರಣೆಯನ್ನು ಪ್ರತಿವಾದಿ ಸಹೋದರಿಯರಿಗೆ ನೀಡಿದೆ. ಹಿರಿಯ ಸಹೋದರಿ, “ಸರ್, ನಮ್ಮ ಹಿರಿಯ ಸಹೋದರ ವಾದಿಯ ಹೆಸರಿಗೆ ನಮ್ಮ ತಂದೆ 5 ಎಕರೆ ಜಮೀನು, ಒಂದು ನಿವೇಶನ ಖರೀದಿಸಿದ್ದಾನೆ. ಅವುಗಳನ್ನು ದಾವೆಯಲ್ಲಿ ಸೇರಿಸಿಲ್ಲ” ಎಂದು ತಿಳಿಸಿದರು. ಸಂಬಂಧ ಪಟ್ಟ ದಾಖಲೆ ತಂದು ಕೊಡಲು ಸೂಚಿಸಿದೆ. ಸಹೋದರಿಯರು ತಂದುಕೊಟ್ಟರು ಪರಿಶೀಲಿಸಿದೆ. ತಂದೆ ಜೀವಿತ ಇರುವಾಗ ವಾದಿ, 1984 ರಲ್ಲಿ ಜಮೀಣನ್ನು, 1986 ರಲ್ಲಿ ನಿವೇಶನ ಖರೀದಿಸಿದ್ದನು. ತಂದೆ ಮಕ್ಕಳು ಕೂಡು ಕುಟುಂಬದಲ್ಲಿ ವಾಸವಾಗಿದ್ದರು. ಈ ಆಸ್ತಿಗಳನ್ನು ವಾದಿ ದಾವೆಯಲ್ಲಿ ಸೇರ್ಪಡೆ ಮಾಡಿರಲಿಲ್ಲ.ಉದ್ದೇಶ ಪೂರ್ವಕವಾಗಿ ಪ್ರತಿವಾದಿಗಳಿಗೆ ಪಾಲು ಕೊಡಬಾರದು ಎಂಬ ದುರುದ್ದೇಶ ಬಯಲಾಯಿತು.

ದಿವಾಣಿ ಪ್ರಕ್ರಿಯೆ ಸಂಹಿತೆ ಕಾನೂನು ಅಡಿಯಲ್ಲಿ ಸಿ ವಿಲ್ ಪ್ರಕರಣಗಳು ವಿಚಾರಣೆ ನಡೆಯುತ್ತವೆ. ದಾವೆಯ ವಾದ ಪತ್ರಕ್ಕೆ ಲಿಖಿತ ಹೇಳಿಕೆ/ ಕೈಫಿಯತ್ ಸಲ್ಲಿಸಿ ಪ್ರತಿ ರೋಧಿಸಲು ಅವಕಾಶ ಇದೆ. ಇದೆ ಸಮಯದಲ್ಲಿ ವಾದಿಯ ಮೇಲೆ ಪ್ರತಿ ಹಕ್ಕು ( ಕೌಂಟರ್ ಕ್ಲೇ ಮ್/ ಎದಿರು ಹಕ್ಕು) ಪ್ರತಿಪಾದಿಸಿ ಕೈಫಿಯತ್ ಸಲ್ಲಿ ಸ ಬಹುದು. ವಾದ ಪತ್ರಕ್ಕೆ ಉತ್ತರವಾಗಿ ಪ್ರತಿಹಕ್ಕು ಪ್ರತಿಪಾದಿಸಿ ಪ್ರತಿವಾದಿ ಸಹೋದರಿಯರ ಪರವಾಗಿ ಕೈಫಿಯತ್ ಸಲ್ಲಿಸಿ,ವಾದಿಯ ಹೆಸರಿನಲ್ಲಿ ಖರಿದಿಸಿದ ಜಮೀನು, ಮನೆಯಲ್ಲಿ ಸಮಪಾಲು ಪ್ರಾರ್ಥಿಸಿದೆ.

ವಾದಿ ತಾನಾಗಿಯೆ ಬಂಡೆಯನ್ನು ಮೇಲಿಳೆದು ಕೊಂಡ ಹಾಗೆ ದಿಗಿಲುಗೊಂಡನು. ಕೇಸು ವಾದಿ ಪರ ಸಾಕ್ಷಿ ಹಂತಕ್ಕೆತಲುಪಿತು. ಕೋರ್ಟ್ ಸಾಕಷ್ಟು ಸಮಯಾವಕಾಶ ನೀಡಿದರು. ವಾದಿಯು ತನ್ನ ಸಾಕ್ಷಿ ಹಾಜರು ಪಡಿಸದ್ದಕ್ಕೆ ನ್ಯಾಯಾಧೀಶರು ದಾವೆಯನ್ನು ವಜಾಗೊಳಿದರು.ಆದರೆ ಪ್ರತಿ ಹಕ್ಕು ಕೈಫಿಯತ್ತುದಾವೆಯಂತೆ ವಾದಿಯ ಅನುಪಸ್ಥಿತಿಯಲ್ಲಿ ಪ್ರಕರಣ ಮುಂದುವರೆದು ವಿಚಾರಣೆಯಗುತ್ತದೆ.

ಪ್ರತಿವಾದಿ ಸಹೋದರಿಯರು, ಹಿರಿಯ ಸಹೋದರನ ಹೆಸರಿನಲ್ಲಿ ಜಮೀನು, ನಿವೇಶನದ ಕ್ರಯ ಪತ್ರ,  ಮನೆತನದ ಆದಾಯದಿಂದ ಎಂದು ಸಾಧಿಸಿ ರುಜು ವಾತು ಪಡೆಸಬೇಕು ಅನ್ನುವ ವಿವಾದಂಶ ರುಜು ವಾತು ಪಡಿಸಬೇಕು. ಅದಕ್ಕೆ ನಂಬುವ ಸಾಕ್ಷಾಧಾರ ಬೇಕು, ಅದು ಸುಲಭ ಸಾಧ್ಯವಾಗಿರಲಿಲ್ಲ. ಸಹೋದರಿ ಪರ ಸಾಕ್ಷಿದಾರರು ಸಾಕ್ಷಿ ನುಡಿದರು. ಪ್ರತಿವಾದಿ ಪರ ಕೇಸನ್ನು ಸುಧೀರ್ಘವಾಗಿ ವಾದಿಸಿದೆ.

ಅಂತಿಮ ತೀರ್ಪು : ನ್ಯಾಯಾಲಯವು, ಈಗಾಗಲೇ ವಾದಿಯ ದಾವೆ ಮುಂದುವರೆಸಲಾರದಕ್ಕೆ ವಜಾ ಗೊಂಡಿರುವುದನ್ನು( ಡಿಸ್ಸಮಿಸ್ ಫಾರ್ ಡಿಫಾಲ್ಟ್ ) ಉಲ್ಲೇಖಿಸಿ, ಸಹೋದರಿಯರು ಪ್ರತಿ ಹಕ್ಕನ್ನು ರುಜು ವಾತು ಪಡಿಸಲು ವಿಫರಾಗಿದ್ದು,ಪ್ರತಿ ಹಕ್ಕು ಕೈಫಿಯ ತ್ತ ಪ್ರಾರ್ಥನೆ ವಜಾ ಗೊಳಿಸಿತು.ಪ್ರತಿಹಕ್ಕಿನಲ್ಲಿ ಪಿತ್ರಾ ರ್ಜಿತ ಆಸ್ತಿಯಲ್ಲಿ ಸಮಪಾಲು ಬೇಡಿಕೆ ಇಲ್ಲದ್ದನ್ನು ಚರ್ಚಿಸಿತು. ಹೀಗೆ ಪ್ರಕರಣ ವಾದಿಗೂ ಪ್ರತಿವಾದಿ ಯರಿಗೂ ಯಾವುದೆ ಪರಿಹಾರವಿಲ್ಲದೆ ಖಾಲಿ ಕೈಯ ಲ್ಲಿ ಹೋಗುವ ಹಾಗೆ ಅಂತ್ಯಗೊಂಡಿತು.

ಆನಂತರ ವಾದಿ ಪ್ರತಿವಾದಿಯರು ಹಿರಿಯರ ಮಧ್ಯಸ್ತಿಕೆಯಿಂದ ವ್ಯಾಜ್ಯ ಕೊನೆಗೊಂಡಿದ್ದು,ಸಹೋದರಿಯರು ತಿಳಿಸಿದಾಗ, ನಿಟ್ಟುಸಿರು ಬಿಟ್ಟೇನು.

‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :


  • ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading