ಗುರುಪಾದ ಬೇಲೂರು ಎಂದೇ ಸಾಹಿತ್ಯಲೋಕದಲ್ಲಿ ಹೆಸರಾಗಿರುವ ಗುರುಪಾದ ಸ್ವಾಮಿ ಬಿ.ಜಿ ಅವರು ಕರ್ನಾಟಕ ಸರ್ಕಾರದಲ್ಲಿ ಪ್ರಧಾನ ಇಂಜಿನಿಯರ್ ಆಗಿದ್ದವರು.ಬರ್ಬರಿಕ ಅವರ ನಾಲ್ಕನೆಯ ಕೃತಿಯಾಗಿದ್ದು, ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರ ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಬರ್ಬರಿಕ.
ಲೇಖಕರು: ಗುರುಪಾದ ಬೇಲೂರು.
ಸಿವಿಜಿ ಪಬ್ಲಿಕೇಶನ್ ಬೆಂಗಳೂರು.
ಮುದ್ರಣದ ವರ್ಷ: ೨೦೨೦ .
ಪುಟಗಳು:೧೫೬.
ಬೆಲೆ:೧೫೦.
ಮಹಾಭಾರತದ ಗ್ರಂಥದ ವೈವಿಧ್ಯಮಯ ಪಾತ್ರಗಳಲ್ಲಿ ಹೆಚ್ಚಾಗಿ ಪ್ರಚಲಿತವಿಲ್ಲದ ಬರ್ಬರಿಕನ ಈ ಕಥೆಯನ್ನು ಲೇಖಕರು ಸತ್ಯ ಮತ್ತು ಕಲ್ಪನೆಗಳ ಸಮ್ಮಿಶ್ರಣದಲ್ಲಿ ಸೊಗಸಾಗಿ ರಚಿಸಿದ್ದಾರೆ.ರಾಜಸ್ಥಾನದಲ್ಲಿ ಈ ಹೆಸರಿನ ದೇವಾಲಯವೂ ಇದೆಯಂತೆ. ನಿಜಕ್ಕೂ ಮಹಾಭಾರತದ ಬರ್ಬರಿಕ ಎಂಬ ಪಾತ್ರದ ಹೆಸರನ್ನೇ ನಾನು ತಿಳಿದಿರಲಿಲ್ಲ. ಭೀಮನ ಮೊಮ್ಮಗನಾದ ಈತ ಶ್ರೀಕೃಷ್ಣನನ್ನೂ ತನ್ನ ಪರಾಕ್ರಮದಿಂದ ಸಂದಿಗ್ಧಗೊಳಿಸುವ ಬಗ್ಗೆ ಓದಿ ಮೆಚ್ಚುಗೆಯಾಯಿತು.
ಘಟೋತ್ಕಚ:
ರಾಜ್ಯ ಭೋಗಗಳ ಮೇಲಿನ ಹಕ್ಕು ಕಳೆದುಕೊಂಡು ಅಲೆದಾಡುತ್ತಿರುವ ಪಾಂಡವರು ಕಾಡಲ್ಲಿ ಅಲೆದಾಡುತ್ತಿದ್ದ ಸಮಯವದು.ತನ್ನ ಸೋದರ ಹಿಡಿಂಬನನ್ನು ಹತ್ಯೆಗೈದ ಬಲಶಾಲಿ ಭೀಮನನ್ನೇ ಮೋಹಿಸಿದ ಹಿಡಿಂಬಿಯನ್ನು ಕುಂತಿಯು ವಿದ್ಯುಕ್ತವಾಗಿ ಸೊಸೆಯನ್ನಾಗಿಸಿ ಕೊಂಡಳು. ಆದರೆ ಭೀಮನಿಂದ ಸಂತಾನ ಪಡೆದ ನಂತರ ಅವಳು ತಮ್ಮನ್ನು ಬಿಟ್ಟು ಕೊಡಬೇಕು. ಮತ್ತು ಅಗತ್ಯ ಬಿದ್ದಾಗ ಸಹಾಯಕ್ಕೆ ಬರಬೇಕೆಂಬ ಷರತ್ತು ವಿಧಿಸಿದಳು.ಅವರಿಗೆ ಜನಿಸಿದ ಮಗನೇ ಘಟೋತ್ಕಚ.

ಮೋರ್ವಿ:
ದೇಹದಲ್ಲಿ ಅಪರಿಮಿತ ವಿದ್ಯುತ್ ಪ್ರವಹಿಸುವ ಶಕ್ತಿ ಪಡೆದಿದ್ದ ಮುರ ನನ್ನು ಎದುರಾಳಿಗಳು ಮುಟ್ಟಿದರೆ ಕ್ಷಣದಲ್ಲೇ ಸಾಯುತ್ತಿದ್ದರು. ಜೀವೋ ಜೀವಸ್ಯ ಜೀವಿತಃ ಎಂಬುದು ಪ್ರಕೃತಿ ನಿಯಮ. ಲೋಕ ಕಲ್ಯಾಣಕ್ಕಾಗಿ ಕೃಷ್ಣನು ಆತನನ್ನು ಸಂಹರಿಸಿ ‘ಮುರಾರಿ ‘ ಎಂಬ ಹೆಸರು ಪಡೆದ. ಮುರನ ಪುತ್ರಿ ಮೋರ್ವಿ ಕೂಡಾ ಕಶ್ಯಪ ಮುನಿಯಿಂದ ಯುದ್ಧ ಪರಿಣಿತಿಯನ್ನು ಪಡೆದಿದ್ದಳು.ಆಕೆಗೆ ತಂದೆಯನ್ನು ಕೊಂದ ಕೃಷ್ಣನಲ್ಲಿ ದ್ವೇಷವಿತ್ತು. ಪರಾಕ್ರಮಿಯಾದ ಅವಳನ್ನು ಮುಂದಾಲೋಚನೆಯಿಂದ ಕೃಷ್ಣ ಭೀಮನ ಮಗ ಘಟೋತ್ಕಚನಿಗೆ ಮದುವೆ ಮಾಡಿಸಿ, ಚಿತ್ರಾವತಿ ರಾಜ್ಯದ ರಾಣಿಯನ್ನಾಗಿಸಿದ.
ಬರ್ಬರಿಕ:
ಇವನು ಘಟೋತ್ಕಚ ಮತ್ತು ಮೋರ್ವಿಯ ಮಗ. ಮೋರ್ವಿ ಅಕ್ಕರೆಯಿಂದ ಮಗನನ್ನು ಬೆಳೆಸಿದರೂ , ದುರ್ಬಲರ ರಕ್ಷಣೆ ಮಾಡುವ, ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುವುದನ್ನು ಬೋಧಿಸಿದ್ದಳು.ತಾಯಿಯ ಮಾತೆ ಆತನಿಗೆ ವೇದವಾಕ್ಯವಾಗಿತ್ತು. ಬಿಲ್ವಿದ್ಯೆಯಲ್ಲಿ ಅವನನ್ನು ಮೀರಿಸುವರೇ ಇರಲಿಲ್ಲ.ಅತಿಯಾದ ಪರಾಕ್ರಮವೆ ಆತನಿಗೆ ಮುಳುವಾಯಿತು.
ಬ್ರಹ್ಮಾಂಡದ ಅತೀ ಪ್ರಬಲ ಅಸ್ತ್ರ ತಯಾರಿಸುವ ವಿಜಯ ಮುನಿಗಳಿಗೆ ಗಂಧರ್ವ ವಿಶ್ರಾಂತನ ಪಡೆಯಿಂದ ತೊಂದರೆಯಾಗುವುದನ್ನು ತಡೆದ ಬರ್ಬರಿಕನಿಗೆ ನಾಗಲೋಕದ ಮಣಿಕರ್ಣಿ ಮನಸೋತಿದ್ದಳು. ವಿಜಯ ಮುನಿಯಿಂದ ಪರಮಾಣು ಅಸ್ತ್ರ ವಿದ್ಯೆಯನ್ನು ಕಲಿತ ಬರ್ಬರಿಕನಿಂದ ಮುಂದೆ ಆಗುವ ಪ್ರಪಂಚದ ವಿನಾಶವನ್ನು ತಡೆಯಲು ತಾನು ಆತ ನನ್ನು ಕೊಲ್ಲುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು.

ಎಂದು ಶ್ರೀಕೃಷ್ಣ ಬರ್ಬರಿಕನ ಬಿಲ್ವಿದ್ಯೆಯ ಪ್ರದರ್ಶನದ ಕುರಿತು ಮೆಚ್ಚಿ ಹೇಳುವ ಮಾತು ,ಯುದ್ಧದ ಸಿದ್ಧತೆಯಲ್ಲಿದ್ದ ಪಾಂಡವರ ಮಾರ್ಗದರ್ಶಕನಾದ ತಾನು , ತನ್ನ ಮಾತು ಕೇಳದ ಬರ್ಬರಿಕನ ವಧೆ ಮಾಡಿದ ಸಂದರ್ಭವನ್ನು,ಅವನ ಛಾಯಾ ರೂಪವನ್ನು ತನ್ನ ಮಗ ಪುಂಡನಾದ ಸಾಂಬನ ದೇಹದಲ್ಲಿ ಸ್ಥಾಪಿಸಿದ್ದು, ಸಾಂಬನು ಒನಕೆಯನ್ನು ಮುಸಲಾಯುಧ ಎಂದು ದಿವ್ಯಾಸ್ತ್ರವನ್ನಾಗಿ ಮಾಡಿಕೊಂಡು,ಮುಂದೆ ಇಡೀ ಯಾದವ ಕುಲದ ನಾಶಕ್ಕೆ ಕಾರಣವಾಗಿದ್ದು ಹೇಗೆ?. ಜಗದ್ರಕ್ಷಕ ಶ್ರೀ ಕೃಷ್ಣನ ಅಂತ್ಯ ಕಾಲದ ಸನ್ನಿವೇಶವೂ ಇಲ್ಲಿದೆ.
ಹಿಡಿಂಬೆಯ ಮನದಾಳದ ಬೇಗುದಿ, ಶ್ರೀ ಕೃಷ್ಣನ ಆತ್ಮ ಪರಾಮರ್ಶೆ ಯಲ್ಲಿ ಬರುವ ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಅನೇಕ ವ್ಯಕ್ತಿಗಳು, ಆತನ ಚಿಂತನ ಮಂಥನದ ಅನೇಕ ವಿಚಾರಗಳು,ಇಲ್ಲಿ ಪಾತ್ರಗಳಾಗಿ ನಮ್ಮನ್ನು ರಂಜಿಸುತ್ತವೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
