ತಪ್ಪದೆ ಈ ಚಿತ್ರವನ್ನು ನೋಡಿ…

‘ವಧೆ’ ಮತ್ತು ‘ಹತ್ಯೆ’ ಎಂಬ ಎರಡು ಪದಗಳ ಮಧ್ಯ ಇರುವ ಅಂತರವೇನು ಎನ್ನುವುದನ್ನು ಬಹಳ ಚಾಣಕ್ಷತನದಿಂದ ‘ವಧ್ 2’ ಎಂಬ Netflix ಸಿನಿಮಾ ತೋರಿಸಿಕೊಟ್ಟಿದೆ. ನೀವೂ Vadh2 ಮತ್ತು vadh1 ನೋಡಿ ಕೊಲೆಗಾರ ಯಾರು ಎಂದು ಊಹಿಸಿ…. 

ಹೆಸರೇ ಹೇಳುತ್ತಿರುವ ಹಾಗೆ ಇದು ಕೊಲೆಯ ಸುತ್ತಮುತ್ತ ಕಟ್ಟಿದ ಮರ್ಡರ್ ಮಿಸ್ಟ್ರಿ ಕಥೆ, ಆದರೆ ಇಲ್ಲಿ ಅಪರಾಧಿ ಯಾರು, ಅಪರಾಧ ಅಂದರೆ ಏನು ಎನ್ನುವ ಮೂಲಭೂತ ಅಂಶಗಳನ್ನೆ ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯವಾಗಿ ಮರ್ಡರ್ ಮಿಸ್ಟ್ರಿ ಸಿನಿಮಾ ಅಂದರೆ ನಾವಿರುವ ಸಮಾಜದಲ್ಲಿ ನಡೆದಿರುತ್ತೆ, ಆದರೆ ಈ ಸಿನಿಮಾದಲ್ಲಿ ಅಪರಾಧವನ್ನು ಮಾಡಿ ನ್ಯಾಯಾಂಗ ವ್ಯವಸ್ಥೆಯಿಂದ ಅಪರಾಧಿ ಎಂದು ಘೋಷಣೆಯಾದ ಬಳಿಕ ಅವರನ್ನು ಕೂಡಿ ಹಾಕಿ, ಶಿಕ್ಷೆ ಅನುಭವಿಸುತ್ತಿರುವ ಜೈಲಿನಲ್ಲಿ ಕಥೆ ಸಾಗುತ್ತದೆ.

ಒಂದು ಸಿನಿಮಾ ಕಥೆ ಒಂದೇ ವಿಷಯವನ್ನು ಪ್ರಸ್ಥಾಪಿಸದೆ, ಮೂರು ನಾಲ್ಕು ಸಾಮಾಜಿಕ ಪಿಡುಗುಳ ಮೇಲೆ ಬೆಳಕು ಚೆಲ್ಲಿದಾಗ ಕಥೆಯ ಗುಣಮಟ್ಟದ್ದಾಗಿರುತ್ತದೆ ಎಂದು ನನ್ನ ಅನಿಸಿಕೆ. ತಾರಗಣ ಇರದೇ, ಸಿದ್ಧ ಫಾರ್ಮುಲಾಗಳನ್ನು ತಗೆದುಕೊಳ್ಳದೆ, ಸಹಾಯಕ ಕಲಾಕಾರರನ್ನೇ ಲೀಡ್ ಆಗಿ ತಗೆದುಕೊಂಡು ಮಾಡುವ ಇಂತಹ ಚಿತ್ರಗಳು ott ವೇದಿಕೆಗಳಿಗೆ ಸೂಕ್ತವಾಗಿದ್ದು,ಇಲ್ಲಿನ ಪ್ರಬುದ್ಧ ನೋಡುಗಗರನ್ನು ಸೆಳೆಯುವಲ್ಲಿ ಗೆಲ್ಲುತ್ತವೆ.

ಇಲ್ಲಿ ಮಧ್ಯ ಪ್ರದೇಶದ ಶಿವಪುರಿಯ ಕೇಂದ್ರ ಕಾರಾಗೃಹದಲ್ಲಿ ಗಾರ್ಡ್ ಆಗಿ ಕೆಲಸ ಮಾಡುವ ನಿವೃತ್ತಿಯ ಅಂಚಿನಲ್ಲಿರುವ ಕೃಶನಾದ, ಪಾಪ…ಅಮಾಯಕ ಎನಿಸುವ ನಿಷ್ಠಾವಂತ, ಬದುಕಿನಲ್ಲಿ ಏಕಾಂಗಿಯಾದ ಶಂಭುನಾಥ್ ಮಿಶ್ರ ಎನ್ನುವ ಪಾತ್ರವನ್ನು ಸಂಜಯ್ ಮಿಶ್ರ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ, ಇದೇ ಜೈಲಿನಲ್ಲಿ ಕೊಲೆ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ‘ಮಂಜು’ ಪಾತ್ರವನ್ನು ಅತ್ಯಂತ ನೈಜತೆಯಿಂದ ನೀನಾ ಗುಪ್ತಾ ನಿಟಿಸಿದ್ದಾರೆ, ಗಾರ್ಡ್ ಹಾಗೂ ಕೈದಿಯ ನಡುವೆ ಆತ್ಮೀಯತೆ ಬೆಳೆಯುತ್ತದೆ ಹಾಗೂ ಈ ಅಂಶ ಕಥೆ ಊಹಿಸಲಾರದ ತಿರುವು ತರುತ್ತದೆ ಎನ್ನುವುದೇ ಈ ಸಿನಿಮಾದ ವಿಶೇಷತೆ.

ಪಂಜಾಬಿ ಸಿನಿಮಾ ನಿರ್ದೇಶಕ ಜಸ್ಪಾಲ್ ಸಂಧು ಅದ್ಭುತವಾಗಿ ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ, ಲವ್ ಫಿಲಂಸ್ ಅಡಿಯಲ್ಲಿ ತೆರೆ ಕಂಡ ವಧ 1 ನಂತರ ವಧ 2 ಇದರ ಸಿಕ್ವೀಲ್.

“ಯೇ ಹತ್ಯಾ ನಹಿ ಯೇ ವಧ್ ಹೈ…”ಅನ್ನುವ ಡೈಲಾಗ್ ಈ ಸಿನಿಮಾದ ಆತ್ಮ, ಆದರೆ ಒಬ್ಬ ಮನುಷ್ಯ ಎಷ್ಟೇ ಕ್ರೂರಿಯಾಗಿದ್ದರು ಅವನನ್ನು ಕೊಲ್ಲುವ ಹಕ್ಕು ಕಾನೂನಿನ ಅಡಿಯಲ್ಲಿ ಯಾರಿಗೂ ಇಲ್ಲ, ಕಾನೂನಿನ ಕಣ್ಣಿನಲ್ಲಿ ವಧೆ ಕೂಡ ಹತ್ಯೆಯೇ ಎಂದು ಪರಿಗಣಿಸಲಾಗುತ್ತದೆ, ಅವನು ಸಾಮಾನ್ಯ ಗಾರ್ಡ್ ಇರಬಹುದು, ಕೈದಿ ಇರಬಹುದು, ಪ್ರತಿಷ್ಠಿತ ವ್ಯಕ್ತಿ ಇರಬಹುದು ಅಥವಾ ಕೈದಿಯನ್ನು ಕಾಯಲು ನೇಮಿಸಿದ ಜೈಲರ್ ಕೂಡ ಆಗಿರಬಹುದು ಎಂದು ಕಥೆ ನಮ್ಮ ಮುಂದೆ ಒಂದೊಂದೇ ಟ್ವಿಸ್ಟ್ಗಳನ್ನು ತೆರೆಯುತ್ತಾ ಹೋಗುತ್ತದೆ, ಈ ಸಿನಿಮಾದ ಕ್ಲೈಮಾಕ್ಸ್ ಗೆ ಇನ್ನೊಂದು ಕ್ಲೈಮಾಕ್ಸ್ ಇದೆ. ಜಾತಿಯ ಮೇಲು- ಕೀಳು, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವವರ ಸ್ಥಿತಿಗತಿ , ಅವರು ಅನುಮತಿ ಇರದ ಫೋನ್ ಬಳಕೆ, ಅವರ ದುಶ್ಚಟಗಳು, ಅವರು ಸರಕಾರಕ್ಕೆ, ಪೊಲೀಸರಿಗೆ ವಂಚಿಸುತ್ತಿರುವ ಪರಿ, ಅಲ್ಲಿ ನಡೆಯುತ್ತಿರುವ ಆವ್ಯವಹಾರಗಳನ್ನೆಲ್ಲ ಈ ಮರ್ಡರ್ ಮಿಸ್ಟ್ರಿ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ಮಾಡಿದ ಅಪರಾಧಕ್ಕೆ ಶಿಕ್ಷೆ, ಸತ್ತ ಮೇಲೆ ಅಲ್ಲ… ಇಲ್ಲೇ ಇದೇ ಜನ್ಮದಲ್ಲಿ ಅನುಭವಿಸುವಿರಿ ಎನ್ನುವ ಕರ್ಮಾ ಥಿಯೇರಿ ಸಿನಿಮಾದ ಅಂತ್ಯಕ್ಕೆ ಪುಷ್ಟಿ ಕೊಡುತ್ತದೆ.

ಹಾ… ಕೆಲವು ಉತ್ತರಿಸದ ಪ್ರಶ್ನೆಗಳು ಉಳಿದಿವೆ ಆದ್ರೆ too negligible, ಮನಸ್ಸನ್ನು ತೀವ್ರವಾಗಿ ಕೆರಳಿಸದೇ, ನಿಶಬ್ದವಾಗಿ ನಡೆಯುವ ಕೊಲೆಯನ್ನು ನೋಡುವುದರಲ್ಲಿ ಕೊನೆಯವರೆಗೂ ಕುತೂಹಲ ಕಾಪಾಡುತ್ತದೆ, ಕಥೆ ತನ್ನ ಹಿಡಿತ ಬಿಡುವುದಿಲ್ಲ.

ನನಗಂತೂ #Vadh2 #vadh1 ಎರಡೂ ಚಿತ್ರ ಇಷ್ಟವಾದವು, ನೀವೂ ನೋಡಿ ಕೊಲೆಗಾರ ಯಾರು ಎಂದು ಊಹಿಸಿ….


  • ಮೃಣಾಲಿನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW