ಹುಡುಕಲಿ ಇನ್ನೆಲ್ಲಿ….?! ಕವನ – ಹರಿನೇತ್ರ

ಹುಡುಕುತ್ತಿದ್ದೇನೆ ನನ್ನನ್ನು ನಾನು , ಕಣ್ಣಿದ್ದೂ ಕುರುಡನಾದ ಕತೆಯಲ್ಲಿ…ಹರಿನೇತ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಹುಡುಕುತ್ತಿದ್ದೇನೆ ನನ್ನನ್ನು ನಾನು;
ಅಹಂನಲ್ಲಿ, ಕೋಪದಲ್ಲಿ, ದ್ವೇಷದಲ್ಲಿ,ಮೋಸದಲ್ಲಿ…
ನಾನು ಕಳೆದು ಹೋಗಿದ್ದೇನೆ.
ಹುಡುಕಲಿ ಇನ್ನೆಲ್ಲಿ ನನ್ನನ್ನು ನಾ ಪಡೆಯಲು?!

ಹುಡುಕುತ್ತಿದ್ದೇನೆ ನನ್ನನ್ನು ನಾನು;
ಆಡಂಬರದ ಡಂಭಾಚಾರದಲ್ಲಿ
ತೋರಿಕೆಯ ಪೂಜೆ ಪುನಸ್ಕಾರಗಳಲ್ಲಿ
ನಾನು ಕಳೆದು ಹೋಗಿದ್ದೇನೆ.
ಹುಡುಕಲಿ ಇನ್ನೆಲ್ಲಿ ನನ್ನನ್ನು ನಾ ಪಡೆಯಲು?!

ಹುಡುಕುತ್ತಿದ್ದೇನೆ ನನ್ನನ್ನು ನಾನು;
ಕಣ್ಣಿದ್ದೂ ಕುರುಡನಾದ ಕತೆಯಲ್ಲಿ
ಹಣವಿದ್ದೂ ಬಿಖಾರಿಯಾದ ನಾಟಕದಲ್ಲಿ
ನಾನು ಕಳೆದು ಹೋಗಿದ್ದೇನೆ.
ಹುಡುಕಲಿ ಇನ್ನೆಲ್ಲಿ ನನ್ನನ್ನು ನಾ ಪಡೆಯಲು?!

ಹುಡುಕುತ್ತಿದ್ದೇನೆ ನನ್ನನ್ನು ನಾನು;
ಬಡವನನ್ನು ತುಳಿಯುವ ಕಾಲಲ್ಲಿ
ಹೆಣ್ಣನ್ನು ಹಿಂಸಿಸುವ ಕಟುಕನಲ್ಲಿ
ನಾನು ಕಳೆದು ಹೋಗಿದ್ದೇನೆ.
ಹುಡುಕಲಿ ಇನ್ನೆಲ್ಲಿ ನನ್ನನ್ನು ನಾ ಪಡೆಯಲು?!


  • ಹರಿನೇತ್ರ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading