ಬೇಸಿಗೆ ರಜೆಯು ಮುಗಿದೆ ಹೋಗಿದೆ, ಶಾಲೆಗೆ ಪ್ರವೇಶವು ಆರಂಭವಾಗಿದೆ, ಬನ್ನಿರಿ ಬನ್ನಿರಿ ಮುದ್ದು ಮಕ್ಕಳೇ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬನ್ನಿರಿ ಬನ್ನಿರಿ ಮುದ್ದು ಮಕ್ಕಳೇ
ಖುಷಿ ಖುಷಿಯಲಿ ಕಲಿಯಲು ಶಾಲೆಗೆ
ಹಸಿರು ತೋರಣ ಕಟ್ಟಿ ಸಿಂಗರಿಸಿದೆ
ಮತ್ತೆ ನಿಮ್ಮನ್ನು ಸ್ವಾಗತಿಸಲು ಶಾಲೆಗೆ
ನವ ನಾಗರೀಕರನ್ನಾಗಿಸಲು ನಾಳೆಗೆ
ಅಜ್ಜನ ಮನೆಯಲಿ ಬೇಸಿಗೆ ರಜೆಯಲಿ
ದಿನ ದಿನವೂ ಮಜವೋ ಮಜವು
ಮಾವು ಹಲಸಿನ ಹಣ್ಣನು ತಿಂದು
ನೆಂಟರ ಮನೆಗಳಿಗೆ ಹೋಗಿ ಬಂದು
ಬೇಸಿಗೆ ರಜೆಯು ಮುಗಿದೆ ಹೋಗಿದೆ
ಶಾಲೆಗೆ ಪ್ರವೇಶವು ಆರಂಭವಾಗಿದೆ
ನಲಿವಿನ ಜೊತೆ ಜೊತೆಗೆ ನಿತ್ಯವೂ
ಕಲಿಕೆಯ ಪ್ರಾರಂಭವು ಆಗಬೇಕಿದೆ
ಮುಂಜಾನೆ ಬೇಗ ಬೇಗನೆ ಎದ್ದು
ಸ್ವಚ್ಛವಾಗಿ ಸ್ನಾನವ ಮಾಡಿಕೊಂಡು
ಭಕ್ತಿಯಿಂದ ದೇವರಿಗೆ ಪೂಜಿಸಿ
ತಂದೆ ತಾಯಿಯ ಕಾಲಿಗೆ ನಮಿಸಿ
ಬನ್ನಿರಿ ಸಮವಸ್ತ್ರವನು ಧರಿಸಿ
ಓದಿ ಬರೆಯಬೇಕು ಪ್ರತಿನಿತ್ಯ
ರೂಪಿಸಿಕೊಳ್ಳ ಬೇಕು ನಾಳಿನ ಭವಿಷ್ಯ
ಗುರುಗಳು ಕಲಿಸಿ ಕೊಡುವರು ವಿಷ್ಯ
ವಿಜ್ಞಾನ ಹೇಳುವುದು ಬಹಳ ಸತ್ಯ
ಗಣಿತ ವಿಷಯ ಕೆಲವರಿಗೆ ಕಷ್ಟ
ತಿಳಿದು ಕೊಳ್ಳದೆ ಹೋದರೆ ನಮಗೆ ನಷ್ಟ
ಅರಿತು ಕೊಂಡರೆ ಎಲ್ಲವೂ ಸ್ಪಷ್ಟ
ವಿಜ್ಞಾನ ವಿಷಯವೇ ಬಲು ವಿಶಿಷ್ಟ
ತೆರೆದಿದೆ ಎಲ್ಲರಿಗೂ ಜ್ಞಾನದ ದೇಗುಲ
ಕಲಿಯೋಣ ಜೀವನ ಪಾಠವ ಸರಿಯಾಗಿ
ಬಿಡಬೇಕಿದೆ ಮನಸಿನೊಳಗಿನ ದಿಗಿಲ
ನಾಳಿನ ಬಾಳಿನಲಿ ಗೆಲ್ಲುವ ಸಲುವಾಗಿ
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.
