‘ಕಥಾ ಸಮಯ’ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ

ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ 2022 ರ ‘ಕಥಾ ಸಮಯ’ ಕಥಾಸ್ಪರ್ಧೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.

ಬಂದಿದ್ದ 108 ಕಥೆಗಳು ಬಂದಿದ್ದವು. ಅಂತಿಮ ಹಂತದ ತೀರ್ಪುಗಾರರಾಗಿ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಹಾಗೂ ವಿಮರ್ಶಕರಾದ ಡಾ. ಪ್ರಕಾಶ್ ಮಂಟೇದ ರವರು ಈ ಕೆಳಕಂಡ ನಾಲ್ಕು ಅತ್ಯುತ್ತಮ ಕಥೆಗಳನ್ನು ಕ್ರಮವಾಗಿ ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.

1. ಖಂಡಾಯದೊಡಯ ಉಘೇ ಉಘೇ – ಪ್ರಕಾಶ್ ಪೊನ್ನಚ್ಚಿ

2. ದೇವರಹೊಲ – ಹುಲಿಕುಂಟೆ ಮೂರ್ತಿ

3. ಹುಲಿಹೆಜ್ಜೆ – ಜಬೀವುಲ್ಲಾ

4. ಕ್ಯಾನ್ಸರ್ – ಅರ್ಪಣ ಎಚ್.ಎಸ್.

ಆಯ್ಕೆಯಾದ ಕಥೆಗಾರರನ್ನು ಜನವರಿ ತಿಂಗಳಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಬಹುಮಾನವು ಹತ್ತು ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಹಾಗೂ ಬಹುಮಾನಕ್ಕೆ ಆಯ್ಕೆಗೊಂಡ ನಾಲ್ಕು ಕಥೆಗಳೊಂದಿಗೆ ಮೊದಲ 20 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ನೀವು ಈ ವಿಷಯವನ್ನು ನಿಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೊಳ್ಳುತ್ತೇವೆ.

ಕಥಾಸಮಯ ಕಥಾಸ್ಪರ್ಧೆಯ ಅಯೋಜನಾ ಸಮಿತಿ


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading