ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ

ಚಾಮರಾಜನಗರದಲ್ಲಿ ಉದ್ಘಾಟನೆಗೊಳ್ಳಲಿರುವ ಜಿಲ್ಲಾ ಪ್ರಥಮ ಕವಿಗೋಷ್ಠಿಯ ಆರಂಭ ಬೆಂಗಳೂರಿನಿಂದ ಆರಂಭಗೊಳ್ಳಲಿದ್ದು, ನಾಡೋಜ ಬರಗೂರು ರಾಮಚಂದ್ರಪ್ಪ  ಅವರು ‘ ಕಾವ್ಯ ದೀವಟಿಗೆ’ಯನ್ನು ಬೆಳಗುವುದರ ಮೂಲಕ ಯಾನ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಮುಂದೆ ಓದಿ…

21 /07/2024 ರ ಭಾನವಾರ ಚಾಮರಾಜನಗರದಲ್ಲಿ ಉದ್ಘಾಟನೆಗೊಳ್ಳಲಿರುವ ಜಿಲ್ಲಾ ಪ್ರಥಮ ಕವಿಗೋಷ್ಠಿಯ ಆರಂಭ ಬೆಂಗಳೂರಿನಿಂದ ಆಗಲಿದ್ದು, ನಾಡೋಜ ಬರಗೂರು ರಾಮಚಂದ್ರಪ್ಪ  ಅವರು ‘ ಕಾವ್ಯ ದೀವಟಿಗೆಯನ್ನು ಬೆಳಗುವುದರ ಮೂಲಕ ಯಾನ ಆರಂಭವಾಗಲಿದೆ. ಡಾ.ಧರಣಿದೇವಿ ಮಾಲಗತ್ತಿ ಮೇಡಂ ಅವರು ಆ ದೀವಟಿಗೆಯನ್ನು ಕವಿಗೋಷ್ಠಿಯ ಸರ್ವಾಧ್ಯಕ್ಷರಾದ ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಉದ್ಘಾಟಕರಾದ ಎಲ್.ಎನ್.ಮುಕುಂದರಾಜ್ ಅವರಿಗೆ ಹಸ್ತಾಂತರಿಸಲಿದ್ದಾರೆ. ನಂತರ ಯಾನ ಪ್ರಾರಂಭವಾಗಲಿದೆ.

ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ಗಾಯಕರು ನಾಡಗೀತೆಯನ್ನು ಹಾಡುವರು ಹಾಗೂ ನಾಡಿನ ಖ್ಯಾತ ಕವಿಗಳು ಕವಿತೆಗಳನ್ನು ವಾಚನ ಮಾಡಿ ಯಾನಕ್ಕೆ ಶುಭ ಕೋರಲಿದ್ದಾರೆ.

ಸ್ಥಳ : ಪಡಸಾಲೆ ,ರವೀಂದ್ರ ಕಲಾಕ್ಷೇತ್ರದ ಆವರಣ, ಬೆಂಗಳೂರು
ದಿನಾಂಕ : 20/07/2024
ಶನಿವಾರ
ವೇಳೆ : ಮಧ್ಯಾನ್ಹ 2 ಗಂಟೆ

*************

ಚಾಮರಾಜನಗರ ಜಿಲ್ಲೆಯ ರಾಜಕುಮಾರ ರಂಗಮಂದಿರದಲ್ಲಿ ದಿನಾಂಕ 21/07/2024 ರ ಭಾನುವಾರ ಬೆಳಗ್ಗೆ 9.30 ರಿಂದ ಸಂಜೆ 6.30 ರ ವರೆಗೆ ನಡೆಯಲಿರುವ ಯಾನದ ಜಿಲ್ಲಾ ಪ್ರಥಮ ಕವಿಗೋಷ್ಟಿಯ ‘ ಸರ್ವಾಧ್ಯಕ್ಷರಾದ ಮೂಡ್ನಾಕೊಡು ಚಿನ್ನಸ್ವಾಮಿ ಅವರೊಂದಿಗೆ ಸಂವಾದ ‘ ದ ಸಮನ್ವಯಕಾರರಾಗಿ ಸಂವಾದ ನಡೆಸಿಕೊಡಲಿರವರು. ನಾಡಿನ ಖ್ಯಾತ ರಂಗಸಂಘಟಕರು ಹಾಗೂ ಟಿ.ಎನ್.ಸೀತಾರಾಂ ಅವರ ಬಹುತೇಕ ಕಾರ್ಯಕ್ರಮಗಳ ಸಮನ್ವಯಕಾರರಾಗಿ ಪ್ರಸಿದ್ಧಿ ಗಳಿಸಿರುವವರಾದ ಸನ್ಮಾನ್ಯ ಶ್ರೀನಿವಾಸ ಜಿ.ಕಪ್ಪಣ್ಣ  ಅವರು ಭಾಗವಹಿಸಲಿದ್ದಾರೆ.

ಚಾಮರಾಜನಗರ ಜಿಲ್ಲಾ ಕವಿಗೋಷ್ಟಿಯ ಎಲ್ಲಾ ಕವಿಗಳು ಹಾಗೂ ಸಂಘಟಕರು ತಮಗೆ ಶುಭಕೋರುತ್ತೇವೆ.

*************

21/07/2024 ರ ಭಾನುವಾರ ಚಾಮರಾಜನಗರದ ಡಾ.ರಾಜಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿರುವ ಯಾನದ ಜಿಲ್ಲಾ ಪ್ರಥಮ ಕವಿ ಗೋಷ್ಠಿಯ ಸಮಾರೋಪ ನುಡಿಗಳನ್ನಾಡಲು ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ಸನ್ಮಾನ್ಯ ರವೀಂದ್ರ ಭಟ್  ಅವರು ಆಗಮಿಸುತ್ತಿದ್ದಾರೆ.

ಬಹಳ ಅರ್ಥಪೂರ್ಣವೂ…ಸಾಂದರ್ಭಿಕವೂ..ಅದ್ಭುತ ಪರಿಕಲ್ಪನೆ ‘ ಹೀಗೆಲ್ಲ ಕರ್ನಾಟಕದ ಮೂಲೆ ಮೂಲೆಯ ಕವಿ ಮಿತ್ರರು, ಸಾಹಿತ್ಯಾಸಕ್ತರು ಆಡುತ್ತಿರುವ ಮಾತುಗಳು.. ನಿಮ್ಮೆಲ್ಲರ ಮೆಚ್ಚುಗೆಯ ನುಡಿಗಳು ನಮ್ಮನ್ನು ಮೂಕನನ್ನಾಗಿಸಿದೆ. ನಮಗೆ ಮತ್ತಷ್ಟು ಚೈತನ್ಯ ತುಂಬಿದೆ.

ಇಂತಹ ಬೃಹತ್ ಕನಸು ಕಾಣಲು ನೀವೇ ಕಾರಣರು..ನಿಮ್ಮ ಸಹಕಾರ ..ಪ್ರೀತಿಯೇ ಕಾರಣ.

ನಿಮ್ಮ ಜಿಲ್ಲೆಗಳಿಗೆ ಬರಲು ಸಂಘಟಕ ಮಿತ್ರರು ಕಾಯುತ್ತಿದ್ದೇವೆ..


  • ಸಂಚಾಲಕರು

ಮಹಾಮನೆ
ಸಿ.ಎಂ.ನರಸಿಂಹಮೂರ್ತಿ
ಸ್ವಾಮಿ ಪೊನ್ನಾಚಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading