ಮಾನಸ….ಇದು ಮನಸಿನ ಮಾತು (ಭಾಗ-೫)

ಪ್ರೀತಿಸುವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ ಸಂತೋಷ, ದುಃಖ, ಹಣವನ್ನು ಹಂಚಿಕೊಳ್ಳುತ್ತಾನೆ. ಎಲ್ಲಿ ಅಧಿಕಾರ, ಧೋರಣೆ ದೋಷಾರೋಪಣೆ ಕರೆದೊಯ್ಯುತ್ತದೆಯೋ ಅಲ್ಲಿ ಸಂಬಂಧಗಳಿಗೆ ಬಿರುಕು ಮೂಡಿರುತ್ತದೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ನಮ್ಮ ಬಂಧನ ನಮ್ಮ ಸಂಬಂಧಗಳು’.. ತಪ್ಪದೆ ಓದಿ….

ನಾವು ಸಂಬಂಧವಿಲ್ಲದೆ ಒಬ್ಬಂಟಿಯಾಗಿರಲು ಸಾಧ್ಯವಿಲ್ಲದ ಮಾತು. ಒಬ್ಬರಿಗೊಬ್ಬರು ಅವಲಂಬಿತರಾಗಿದ್ದೇವೆ. ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ. ಸಮಾಜ ನಮ್ಮನ್ನು ಬಿಟ್ಟು ಬೇರೆಯಾಗಿಲ್ಲ. ಇಬ್ಬರು ವ್ಯಕ್ತಿಗಳು ಪರಸ್ಪರ ಅರಿತರೆ ಅದೇ ಸಂಬಂಧ, ಅದು ಸ್ನೇಹ ಸಂಬಂಧವಿರಬಹುದು , ಅಣ್ಣ ತಂಗಿ, ಅಕ್ಕ ತಮ್ಮರ ಸಂಬಂಧವಿರಬಹುದು, ಗಂಡ ಹೆಂಡತಿ ಇರಬಹುದು ಆ ಸಂಬಂಧಗಳು ಸಾಧಾರಣವಾಗಿ ಪರಸ್ಪರ ಸಹಾಯ, ಪರಸ್ಪರ ಬೆಂಬಲ ಇತ್ಯಾದಿ ಎಂದು ಕರೆಯುವುದರ ಮೇಲೆ ಆಧಾರವಾಗಿದೆ.

ಕುಟುಂಬದಲ್ಲೂ ನಿಕಟ ಸಾಮೀಪ್ಯದ ಭಾವಕ್ಯತೆಯ ಸಂಬಂಧವೆಂಬುದು ಸ್ಪಷ್ಟವಾದ ಸಂಗತಿ. ಒಬ್ಬರಿಗೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದರ ಮೇಲೆ ಸಂಬಂಧಗಳು ಇರುತ್ತದೆ. ಆದರೆ ಕೆಲವು ವಿಷಯಗಳು ಅರ್ಥ ಆಗುವುದೇ ಇಲ್ಲ ಹೊಂದಿಕೊಂಡು ಹೋಗುತ್ತಿರುತ್ತಾರೆ, ರಾಜಿ ಮಾಡಿಕೊಳ್ಳುತ್ತಿರುತ್ತಾರೆ.

ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಕೆಲವೊಮ್ಮೆ ಇಬ್ಬರ ಮಧ್ಯೆ ಗೋಡೆ ಕಟ್ಟಿಕೊಂಡಿರುತ್ತಾರೆ. ಹೆಂಡತಿಯದು ಒಂದು ಅಭಿರುಚಿಯಾದರೆ ಗಂಡನದು ಮತ್ತೊಂದು , ಒಂದೇ ತಾಯಿಯ ಮಕ್ಕಳಾದರೂ ಅವರಲ್ಲೂ ಭಿನ್ನಾಭಿಪ್ರಾಯಗಳು, ವಿಭಿನ್ನ ಆಸಕ್ತಿ ಹೀಗೆ ಹಲವಾರು ಕಾರಣಗಳಿಂದ ಅಣ್ಣ ತಂಗಿ, ಅಕ್ಕ ತಮ್ಮ ಇವರಲ್ಲಿ ಒಬ್ಬರಿಗೊಬ್ಬರಿಗೆ ವೈಮನಸ್ಸು ಉಂಟಾಗಿರಬಹುದು ಆದರೆ ಸಂಬಂದದಿಂದ ದೂರವಿರಲು ಅಸಾಧ್ಯ. ಸಂಬಂಧ ಹೇಗೆ ಇರುತ್ತದೋ ಅವರನ್ನು ಹೇಗೆ ಒಪ್ಪಿಕೊಂಡಿರುತ್ತೇವೆಯೋ ಹಾಗೆ ಹೊಂದಿಕೊಂಡು ಹೋಗಬೇಕಾಗುತ್ತದೆ.

ಇಬ್ಬರ ವ್ಯಕ್ತಿಗಳ ನಡುವೆ ನಿಜವಾದ ಸಂಬಂಧವಿದ್ದರೆ ಆಗ ಪ್ರತ್ಯೇಕತೆ ಇರುವುದಿಲ್ಲ, ಪ್ರೀತಿ ಇರುತ್ತದೆ . ಪ್ರೀತಿಸುವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ ಸಂತೋಷ, ದುಃಖ, ಹಣವನ್ನು ಹಂಚಿಕೊಳ್ಳುತ್ತಾನೆ. ಎಲ್ಲಿ ಅಧಿಕಾರ, ಧೋರಣೆ ದೋಷಾರೋಪಣೆ ಕರೆದೊಯ್ಯುತ್ತದೆಯೋ ಅಲ್ಲಿ ಸಂಬಂಧಗಳಿಗೆ ಬಿರುಕು ಮೂಡಿರುತ್ತದೆ. ಪ್ರೀತಿ ಇದ್ದಾಗ ಮಾತ್ರ ಸಂಬಂಧಗಳು ಇರಲು ಸಾಧ್ಯ. ಏನನ್ನೂ ನಿರೀಕ್ಷಿಸದೆ, ಅಪೇಕ್ಷೆ ಪಡದೆ ಇದ್ದರೆ ಮಾತ್ರ ಸಂಬಂಧಗಳು ಬಹಳ ಕಾಲ ಉಳಿುಯುತ್ತದೆ.

ಸಂಬಂಧಗಳು “ಎರಡು ರೈಲು ಹಳಿಯ ಹಾಗೆ ಜೊತೆಯಲ್ಲೇ ಹೋಗುತ್ತಿರುತ್ತದೆ ಆದರೆ ಒಂದಕ್ಕೊಂದು ಭೇಟಿಯಾಗುವುದಿಲ್ಲ” ಎಂದು ಎಲ್ಲೋ ಓದಿದ್ದ ನೆನಪು. ಇಲ್ಲಿ ಭೇಟಿಯಾಗುವುದು ಎಂದರೆ ಜೊತೆಯಲ್ಲೇ ಇರುತ್ತಾರೆ ಆದರೆ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿರುತ್ತಾರೆ ಅವರ ನಡುವೆ ಸಂಬಂಧ ಹೇಗಿರುತ್ತದೆ ಎಂದು ಅರಿತುಕೊಂಡಾಗ ಮಾತ್ರ ಸಂಬಂಧಗಳು ಗಟ್ಟಿಯಾಗಿ ನಿಲ್ಲಲು ಸಾಧ್ಯ. ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುವುದೋ ಕರ್ತವ್ಯ ನಿರ್ವಹಿಸಿಕೊಂಡು ಹೋಗುವುದೋ ಇದ್ದಂತೆ ಇದ್ದಹಾಗೆ ಒಪ್ಪಿಕೊಳ್ಳುವುದೋ ಇದು ಅವರವರಿಗೆ ಬಿಟ್ಟಿದ್ದು.

ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading