ಆಕಾಶದ ಪ್ರತಿರೂಪ ‘ನಮ್ಮಪ್ಪ’ – ಮಮತ (ಕಾವ್ಯಬದ್ಧ)

ನಿಮ್ಮೊಂದಿಗೆ ಇದ್ದದ್ದು ಕೇವಲ ಕೆಲವೇ ವರ್ಷಗಳಾದರೂ ನನ್ನ ಹೃದಯದಲ್ಲಿ ಅಜಮರರಾಗಿದ್ದೀರಿ…ಮಮತ (ಕಾವ್ಯಬದ್ಧ) ಅವರ ನೆನಪಿನಂಗಳದಲ್ಲಿ ಅಪ್ಪಾ…ತಪ್ಪದೆ ಮುಂದೆ ಓದಿ…

ಸಾಕಾರ ಮೂರ್ತಿ , ಅವ್ಯಕ್ತ ಅಕ್ಕರೆಯ , ವಿಶ್ವಾಸ
ಸ್ಫೂರ್ತಿ ಹೊತ್ತ ತ್ಯಾಗಮಯಿ
ಪರಿಪೂರ್ಣತೆಯ ಪ್ರತಿಬಿಂಬ ನೀನಪ್ಪಾ
ನೀವೇ ನನ್ನ ಧೈರ್ಯ

ಒಡಲಿನಲ್ಲಿ ಪ್ರವಾಹವನ್ನು ತಡೆದು ಹೊರಗೆ
ಪ್ರೀತಿ ತೋರಿಸುವ ಸಹನಾಮೂರ್ತಿಯಾಗಿ
ಮಣಭಾರದ ಜವಾಬ್ದಾರಿಗಳ ನೋವನ್ನೊತ್ತು
ಉದಾರತೆಯ ಪ್ರೀತಿ ತೋರಿದವರು ನೀನಪ್ಪಾ
ನೀವೇ ನನ್ನ ಧೈರ್ಯ

ಮಾದರಿ, ಮಾರ್ಗದರ್ಶಿ , ಆತ್ಮವಿಶ್ವಾಸದ ನಾಂದಿಯಾಗಿ
ನನ್ನ ಕೈ ಹಿಡಿದು ಭವಿಷ್ಯ ಕಟ್ಟುವ ಭರವಸೆ ಮೂಡಿಸಿದಿರಿ
ನಿಮ್ಮ ಪರಿಶ್ರಮ , ತ್ಯಾಗ ಹಾಗು ನೋವಿನ ಫಲವೇ ನಾನಿಂದು
ನನಗೆ ದೇವರು ಕೊಟ್ಟ ಅಮೂಲ್ಯ ಕೊಡುಗೆ ನೀನಪ್ಪಾ
ನೀವೇ ನನ್ನ ಧೈರ್ಯ

ನಾ ಬಯಸಿದ್ದೆಲ್ಲವನ್ನು ನೀಡಿರುವಿರಿ
ಯಾರು ನೀಡದ ಅತ್ಯುತ್ತಮ ಕೊಡುಗೆಗಳೊಂದಿಗೆ
ನೀವು ನನಗಾಗಿ ಹರಿಸಿರುವ ಒಂದೊಂದು ಬೆವರಿನ ಹನಿಯ
ಋಣ ತೀರಿಸಲು ಸಾಧ್ಯವೇ?
ನೀವೇ ನನ್ನ ಧೈರ್ಯ

ನಾ ಸಾಗುವ ದಾರಿಯಲಿ ನೀವಿದ್ದಿದ್ದರೆಷ್ಟು ಚೆನ್ನಾ
ನೀವು ಕೈ ಹಿಡಿದು ನನ್ನೊಂದಿಗಿದ್ದಿದ್ದರೆ
ನನ್ನ ಬಲಹೀನತೆ ಬಲವಾಗುತ್ತಿತ್ತು
ನನ್ನ ಕಲ್ಪನಾ ಲೋಕದ ಕಿನ್ನರ ನೀನಪ್ಪಾ
ನೀವೇ ನನ್ನ ಧೈರ್ಯ

ನಾ ಸಾಗುವ ಬಾಳ ದಾರಿಯಲಿ
ಪ್ರತಿಕ್ಷಣವೂ ಜೊತೆಯಾಗಿರಬೇಕಾಗಿತ್ತು
ನೊಂದ ಮನಕೆ ನವ ಚೇತನ ಮೂಡಿಸುವ ಸಮಯದಿ
ಆ ದೇವರು ಕೊಡಬೇಕಾಗಿತ್ತು ಒಂದು ಅವಕಾಶ
ನಿಮ್ಮನ್ನು ಅವನ ಬಳಿ ಕರೆದೊಯ್ಯದೆ
ನೀವೇ ನನ್ನ ಧೈರ್ಯ

ನಿಮ್ಮೊಂದಿಗೆ ಇದ್ದದ್ದು ಕೇವಲ ಕೆಲವೇ ವರ್ಷಗಳಾದರೂ
ನನ್ನ ಹೃದಯದಲ್ಲಿ ಅಜಮರರಾಗಿದ್ದೀರಿ
ನೀವು ಒಬ್ಬಂಟಿಯಾಗಿ ಹೋಗಿಲ್ಲ
ನನ್ನ ಭಾಗವು ನಿಮ್ಮೊಂದಿಗಿದೆ
ನೀವೇ ನನ್ನ ಧೈರ್ಯ


  • ಮಮತ (ಕಾವ್ಯಬದ್ಧ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading