ಸಹವಾಸ ಬಿಟ್ಟು ಸಂನ್ಯಾಸಿ ಕೆಟ್ಟ

ಈ ಕವನ ಚಹಾ ಪ್ರಿಯರಿಗಾಗಿ ಕವಿಯತ್ರಿ ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನಿನ್ನ ಬಿಡಲಾಗದುದಕ್ಕೆ
ಇಂದು ಹಪಹಪಿಸುತ್ತಿದ್ದೇನೆ

ಎಷ್ಟೊಂದು ಆವರಿಸಿಕೊಂಡಿರುವೆ
ತನು ಮನದೊಳಗೆಲ್ಲ
ನಿನ್ನದೇ ಧ್ಯಾನ
ಕೂತಲ್ಲಿ ನಿಂತಲ್ಲಿ
ನಿನ್ನದೇ ಉಸಿರು ತಾಕೀ ತಾಕಿ
ದೇಹವೆಲ್ಲ ಬಿಸಿಬಿಸಿಯಾಗಿ
ಸಖತ್ ಕಿಕ್ಕು ಕೊಡುವ
ಆ ನಿನ್ನ ಪರಿ, ಉತ್ತೇಜನ
ಇನ್ನಾರಿಂದಲೂ ಕೊಡಲು
ಸಾಧ್ಯವೇ ಇಲ್ಲ.

ಒಂದು ವಾರವಾಯಿತು
ನಿನ್ನ ಸಹವಾಸ ಬಿಟ್ಟು
ಅಷ್ಟರಲ್ಲಿ ನಿನ್ನ ನವರಂಗಿ ಆಟ
ತೋರಿಸಿಬಿಟ್ಟೆ
ನಿಜಕ್ಕೂ ನಾನು ಸುಸ್ತಾಗಿದ್ದಂತೂ ದಿಟ
ಸರಿಯಾಗಿ ನಿದ್ದೆ ಇಲ್ಲದೇ
ತಲೆ ಎಲ್ಲಾ ಗಿವ್ ಗಿವ್
ದೇಹವೆಲ್ಲ ಸಣ್ಣಗೆ ನಡುಕ
ಕೈಕಾಲು ಆಡದಂತಹ ಪರಿಸ್ಥಿತಿ
ಇಡೀ ದಿನ ಸಮಾಧಾನ ಇಲ್ಲ.

ಶುಗರ್ ಜಾಸ್ತಿ ಆಯ್ತಾ
ಬಿಪಿ ಏನಾದರೂ ಬಂತಾ
ದೇವರೇ ಇನ್ನೇನಾಯಿತೋ
ಅನ್ನುವ ಗಾಬರಿ ಒಳಗೊಳಗೇ
ನೆತ್ತಿಗೆ ಎಣ್ಣೆ ತಿಕ್ಕಿ
ಬಿಸಿನೀರ ಮಜ್ಜನ ಮಾಡಿದರೂ
ತಹಬಂದಿಗೆ ಬಾರದ ಕಾರಣ
ಈಗಷ್ಟೇ ಗಮನಕ್ಕೆ ಬಂದಿದ್ದು
ನಿನ್ನ ಬಿಟ್ಟ ನೆಪ.

ಅಬ್ಭಾ ಚಹವೇ
ಸಾಕು ಮಾಡೇ ನಿನ್ನ ಕಾಟ!


  • ಗೀತಾ ಜಿ ಹೆಗಡೆ ಕಲ್ಮನೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading