ಬಾಯಿ ರುಚಿಗೆ ಹುಳಿ ಹುಳಿ ಪದಾರ್ಥ ಇದ್ರೆ ಸಖತ್ ಅಲ್ವಾ. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಬೆಟ್ಟದ ನೆಲ್ಲಿಕಾಯಿ ಚಿತ್ರಾನ್ನವನ್ನು ತಪ್ಪದೆ ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು :
- ಬೇಯಿಸಿದ ಅನ್ನ – ಒಂದು ಪಾವು
- ಬೆಟ್ಟದ ನೆಲ್ಲಿಕಾಯಿ – ಹತ್ತು
- ಹಸಿಮೆಣಸಿನಕಾಯಿ – ಹದಿನೆಂಟು
- ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಕರಿಬೇವಿನ ಸೊಪ್ಪು- ಸ್ವಲ್ಪ

ಅನ್ನ ಮೊದಲೇ ಮಾಡಿಟ್ಟು ಕೊಳ್ಳಿ. ಹದಿನೆಂಟು ಹಸಿಮೆಣಸಿನಕಾಯಿಗಳನ್ನು ಹೆಚ್ಚಿಟ್ಟು ಕೊಳ್ಳಿ. ನಂತರ ಒಂದು ಬಾಣಲಿಗೆ ಐದು ಸ್ಪೂನ್ ಎಣ್ಣೆ ಹಾಕಿ. ಅದು ಚನ್ನಾಗಿ ಕಾಯ್ದ ನಂತರ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ನಂತರ ತುರಿದ ನೆಲ್ಲಿಕಾಯಿ, ಅರಶಿನ, ಉಪ್ಪು, ಇಂಗು ಹಾಕಿ ಚೆನ್ನಾಗಿ ಬಾಡಿಸಿ. ತೆಂಗಿನ ತುರಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಾಡಿಟ್ಟ ಅನ್ನಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಯಾದ ನೆಲ್ಲಿಕಾಯಿ ಚಿತ್ರಾನ್ನ ರೆಡಿ. ಬೇಕಿದ್ದಲ್ಲಿ ಕಡಲೆಬೀಜ ಕೂಡ ಒಗ್ಗರಣೆ ಹಾಕಬಹುದು.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.
