ಕವಿಯತ್ರಿ ಶೀತಲ್ ಹೆಗಡೆ ಅವರ ‘ಶೀತಲತೆ’ ಪ್ರಥಮ ಕವನ ಸಂಕಲನವಾಗಿದ್ದು, ಈ ಕೃತಿಯ ಕುರಿರು ಲೇಖಕರಾದ ಸರೋಜಾದೇವಿ ನಿನ್ನೆಕರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಶೀತಲತೆ
ಲೇಖಕಿ : ಶೀತಲ್ ಹೆಗಡೆ
ಪ್ರಕಾರ : ಕವನಗಳು
ಕವಿಯತ್ರಿಯಾದ ಶೀತಲ್ ಹೆಗಡೆಯವರು ತಮ್ಮ ಕವನ ಸಂಕಲನದಲ್ಲಿ ಮನದ ಭಾವವನ್ನು ಬಹಳ ಸುಂದರವಾಗಿ ಕವನಗಳಲ್ಲಿ ವ್ಯಕ್ತಪಡಿಸಿ ಓದುಗರ ಮನ ಉಲ್ಲಾಸದಲಿ ತೇಲುವಂತೆ ಮಾಡಿದ್ದಾರೆ. ಭಿನ್ನ ವಿಭಿನ್ನವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಜೀವ ತುಂಬಿದ್ದು ಗಮನಾರ್ಹ. ಒಂದರ ನಂತರ ಒಂದು ಕವನ ಓದುವಂತೆ ಮನ ಸೆಳೆಯುವಂತಿವೆ. ಓದುಗರ ಮನಸ್ಸಿನಲ್ಲಿ ತಂಪಾದ, ಮೃದುವಾದ ಅನುಭವವಾಗುವುದಂತೂ ಖಂಡಿತ.

ಪ್ರತಿಯೊಂದು ಭಾವ, ಬಾಂಧವ್ಯಗಳ ಸಮ್ಮಿಲನದ ಕೃತಿ ಓದುಗರನ್ನು ಆಕರ್ಷಿಸಿ ಮನ ಮಿಡಿಯುವಂತಿದೆ. ಇದು ಇವರ ಪ್ರಥಮ ಕವನ ಸಂಕಲನ ಅನ್ನಿಸುವುದೇ ಇಲ್ಲ, ಅಷ್ಟೊಂದು ಪ್ರಬುದ್ಧವಾದ ಬರಹಗಳನ್ನು ಕಾಣಬಹುದು. ಎಲ್ಲಾ ವಯೋಮಾನದವರು ಓದಿ ಆನಂದಿಸಲು ಯೋಗ್ಯವಾದ ಕವನ ಸಂಕಲನವಿದು. ವಿಭಿನ್ನ ದೃಷ್ಟಿಕೋನದಿಂದ ಬರೆದ ಎಲ್ಲಾ ಕವನಗಳು ಸರಳ ಮತ್ತು ನವಿರಾದ ಭಾಷೆಯಲ್ಲಿದ್ದು , ಸಹಜ ಮತ್ತು ಸೊಗಸಾದ ಪದಗುಚ್ಛಗಳ ಸಮೂಹವು ಕವನಗಳನ್ನು ಇನ್ನಷ್ಟು ಸುಂದರಗೊಳಿಸಿವೆ.
ಭಾವಗರ್ಭಿತವಾದ ಶೀತಲ್ ರವರ ಶೀತಲತೆ ಕವನ ಸಂಕಲನವು ಪ್ರಕೃತಿ, ಪ್ರೇಮ, ಮಾನವ ಸಂಬಂಧಗಳು, ಮಮತೆ, ಕರುಣೆ, ಹರ್ಷ, ದುಃಖ, ಭೂಮಿ,ಆಕಾಶ, ಮೈತ್ರಿ, ಬದುಕು, ಭಾವನೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಕ್ರೋಢಿಕರಿಸಿದ, ಚಂದದ ಶೀರ್ಷಿಕೆಗಳನ್ನು ಹೊತ್ತು ಹೊರಹೊಮ್ಮಿದ ಚೊಚ್ಚಲ ಕೃತಿ ಮನ ಮುಟ್ಟಿತು. ಅಮ್ಮನವರಿಗೆ ಅರ್ಪಿಸಿದ ಈ ಕೃತಿಯು ಅಮ್ಮನ ಆಶೀರ್ವಾದದಿಂದ ಕನ್ನಡ ಕಾವ್ಯ ಲೋಕದಲ್ಲಿ ಹೆಸರು ಮಾಡಲಿ ಎಂದು ಹಾರೈಸುವೆ.

ಭಾವ ವೈವಿಧ್ಯದ ಶೀತಲತೆಯ ಕವನಗಳನ್ನು ಎಲ್ಲರೂ ತಪ್ಪದೇ ಓದಿ, ಆನಂದಿಸಿ. ಇನ್ನು ಹೆಚ್ಚು ಹೆಚ್ಚು ಕೃತಿಗಳು ಅವರ ಕುಂಚದಿಂದ ಅರಳಿ ಘಮಿಸಲಿ, ಆ ಘಮದಲಿ ಓದುಗರ ಮನ ತೇಲಲಿ. ಇಂಥಹ ಸುಂದರ ಕೃತಿಯನ್ನು ಓದುಗರ ಮಡಿಲಿಗೆ ಹಾಕಿದ ಶೀತಲ್ ಹೆಗಡೆಯವರಿಗೆ ಮನದಾಳದ ಧನ್ಯವಾದಗಳು.
ಪುಸ್ತಕದ ಕುರಿತು ಬೇರೆ ಲೇಖಕರ ಅಭಿಪ್ರಾಯಗಳು :
- ಸರೋಜಾದೇವಿ ನಿನ್ನೆಕರ್
