ಭಾವನೆಗಳ ರಸಾಯನಶಾಸ್ತ್ರ (ಕೆಮಿಸ್ಟ್ರಿ)

ಭಾವನೆಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕಾದರೆ ಎಚ್ಚರವಿರಲಿ. ಅವರ ಒಂದು ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…

ಮನವೆಂಬ ಲಾಳಿಕೆಯಿಂದ ಭಾವನೆಗಳೆಂಬ ದ್ರಾವ್ಯ (Solute) ಜಾರುವುದು ಸಹಜ. ಆದರೆ ಹಾಗೆ ಜಾರಿದಾಗ ಅವು ಯಾವ ಭಾವನೆಗಳೆಂಬ ದ್ರಾವಕದ (Solvent ) ಜೊತೆ ಬೆರೆಯಲಿಚ್ಛಿಸುತ್ತವೆ ಎಂಬುವುದು ಮುಖ್ಯವಾಗುತ್ತದೆ.

ಹಾಗೆ ಸೇರಿದ ಆ ಎರಡೂ ಭಾವನೆಗಳು (ದ್ರಾವ್ಯ ಮತ್ತು ದ್ರಾವಕ) ಏಕರೂಪತೆಯದಾಗಿದ್ದರೆ (homogeneous) ಮಾತ್ರ ಒಂದರಲ್ಲೊಂದು ಲೀನವಾಗಿ ಏಕರೂಪತೆ ಮಿಶ್ರಣವಾಗುತ್ತದೆ (homogeneous mixture).

ಆದರೆ ಆ ಎರಡೂ ಭಾವನೆಗಳು (ದ್ರಾವ್ಯ ಮತ್ತು ದ್ರಾವಕ) ಭಿನ್ನಜಾತಿಯದಾಗಿದ್ದರೆ (heterogeneous) ಒಂದರ ಜೊತೆಯಿನ್ನೊಂದು ಲೀನವಾಗುವ ಸಾಧ್ಯತೆಯೇ ಇಲ್ಲ. ಹಾಗಾಗಿ ಅವೆರಡೂ ಭಾವನೆಗಳು ಸೇರಿದಲ್ಲಿ ಅದೊಂದು ಭಿನ್ನಜಾತಿಯ ಮಿಶ್ರಣವಾಗುತ್ತದೆ. (heterogeneous mixture).

ದ್ರಾವ್ಯ (solute ) ಹಾಗೂ ದ್ರಾವಕ (solvent ) ಬೆರೆತರೆ ಮಾತ್ರ ಆ ದ್ರಾವಣಕ್ಕೊಂದು (solution) ಸ್ವಾದವಲ್ಲವೇ? ಇಲ್ಲದಿದ್ದರೆ ಅದಕೆಲ್ಲಿದೆ ಸ್ವಾದ…ಆದ್ದರಿಂದ ಭಾವನೆಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂಬುವ ಎಚ್ಚರವಿರಲಿ.


  • ಸಂಪ್ರೀತಿ (ಪ್ರೀತಿ ಸಂಗಮ್ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading