ನಾವು ಊಟದ ನಂತರ ಉಪಯೋಗಿಸುವ ಬಡೆಸೋಂಪು ಅಥವಾ ಸೋಂಪು ಎಷ್ಟೆಲ್ಲ ಔಷಧಿ ಗುಣಗಳನ್ನು ಹೊಂದಿದೆ. ಗಿಡದಿಂದ ಅನೇಕ ಔಷಧಿ ತಯಾರಿಕೆ ಇದ್ದರೂ ಈಗ ಇದರ ಬೀಜದ ಉಪಯೋಗ ಅಷ್ಟೇ ತಿಳಿಯೋಣ…
1.ಸೋಂಪು ಕಾಳಿನ ನೀರನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯು ದೂರವಾಗಿ, ಸೊಂಪಾಗಿ ಬೆಳೆಯುತ್ತದೆ.
2.ಆಹಾರದಲ್ಲಿ ಸೋಂಪನ್ನು ಬಳಸುವುದರಿಂದ ವಾಕರಿಕೆ, ಅಜೀರ್ಣ, ಮಲಬದ್ಧತೆ ಸಮಸ್ಯೆಯು ದೂರವಾಗುತ್ತದೆ.
3.ಸೋಂಪು ಕಾಳಿನ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಮುಟ್ಟಿನ ಸಮಸ್ಯೆಯಿಂದ ಪಾರಾಗಬಹುದು.
4. ಸೋಂಪು ಕಾಳನ್ನು ತಿನ್ನುವುದರಿಂದ ಪುರುಷರ ಕಾಮಾಸಕ್ತಿ ಹೆಚ್ಚುವುದು.
5.ಸೋಂಪು ಕಾಳಿನ ಕಷಾಯಕ್ಕೆ ಹಾಲು ಬೆರೆಸಿ ಮಕ್ಕಳಿಗೆ ಕುಡಿಸಿದರೆ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
6.ಸೋಂಪು ಕಾಳನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅಗಿಯುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆಯು ನಿಲ್ಲುತ್ತದೆ.
7. ಮುಟ್ಟಿನ ಸಮಯದಲ್ಲಿ ಸೋಂಪು ಕಾಳನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಮುಟ್ಟಿನ ಸಮಸ್ಯೆಗಳು ದೂರವಾಗುತ್ತದೆ.
8.ಸೋಂಪು ಕಾಳಿನಲ್ಲಿ ಮಾಡಿದ ಟೀ ಕುಡಿಯುವುದರಿಂದ ಕೆಮ್ಮು ಇದ್ದರೆ ಗುಣಮುಖವಾಗುತ್ತದೆ.

ಫೋಟೋ ಕೃಪೆ : google
9.ಸೋಂಪು ಕಾಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಹೊಟ್ಟೆಯ ಮೇಲೆ ಪಟ್ಟು ಹಾಕಿದರೆ ಹೊಟ್ಟೆ ಉಬ್ಬರ ಸಮಸ್ಯೆಯು ದೂರವಾಗುತ್ತದೆ.
10. ಊಟದ ನಂತರ ಸ್ವಲ್ಪ ಸೋಂಪು ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.
11.ಸೋಂಪು ಕಾಳಿನ ನೀರನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯು ದೂರವಾಗಿ, ಸೊಂಪಾಗಿ ಬೆಳೆಯುತ್ತದೆ.
12.ಆಹಾರದಲ್ಲಿ ಸೋಂಪನ್ನು ಬಳಸುವುದರಿಂದ ವಾಕರಿಕೆ, ಅಜೀರ್ಣ, ಮಲಬದ್ಧತೆ ಸಮಸ್ಯೆಯು ದೂರವಾಗುತ್ತದೆ.
13.ಪ್ರತಿದಿನ ಸೋಂಪು ಕಾಳನ್ನು ಸೇವನೆ ಮಾಡುವುದರಿಂದ ಎದೆ ಉರಿಯಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
14.ನಿದ್ರೆಯ ಸಮಸ್ಯೆಯು ಕಾಡುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೋಂಪು ಕಾಳು ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
15. ಬಾಣಂತಿಯರು ಸೋಂಪು ಕಾಳಿನ ಚಹಾ ಕುಡಿಯುವುದರಿಂದ ಎದೆ ಹಾಲು ಉತ್ಪತ್ನಿಯಾಗುತ್ತದೆ.
16.ಬಿಸಿ ನೀರಿನಲ್ಲಿ ಸೋಂಪು ಕಾಳು ಕುದಿಸಿ, ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದರಿಂದ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.
17.ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ, ಸ್ವಲ್ಪ ಸೋಂಪು ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿದು ಅದರ ರಸವನ್ನು ನುಂಗುತ್ತಾ ಬಂದರೆ, ಇಂತಹ ಸಮಸ್ಯೆಗಳಿಂದ ತಕ್ಷಣವೇ ರಿಲೀಫ್ ಸಿಗುತ್ತದೆ.
18.ಒಂದು ಕಪ್ ನೀರು ಮತ್ತು 1ಟೀ ಚಮಚ ಸೋಂಪು ಕಾಳುಗಳನ್ನು ಹಾಕಿ ಮೀಡಿಯಂ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೇ ಬಿಡಬೇಕು. ಆದರೆ ಕುದಿಸಬಾರದು. ಏಕೆಂದರೆ ಇದರಿಂದ ಎಲ್ಲಾ ಪೌಷ್ಟಿಕ ಸತ್ವಗಳು ಮಾಯವಾಗುತ್ತವೆ. ಅದರಿಂದ ನೀರಿನ ಬಣ್ಣ ಹಳದಿ ಬಣ್ಣಕ್ಕೆ ಬದಲಾಗುವವರೆಗೆ ಬೇಯಿಸಿ ಇದನ್ನು ದಿನದಲ್ಲಿ ಎರಡು ಬಾರಿ ಕುಡಿಯಬಹುದು.
19.ಸೋಂಪಿನ ಕಾಳನ್ನು ನುಣ್ಣನೆಯ ಪುಡಿ ಮಾಡಿ ಬೆಣ್ಣೆಯೊಂದಿಗೆ ಮಿಶ್ರ ಮಾಡಿ ಗುದದ್ವಾರಕ್ಕೆ ಹಚ್ಚುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ
20.ಸೋಂಪನ್ನು ಚೆನ್ನಾಗಿ ಅರೆದು ಬೆಣ್ಣೆಯೊಂದಿಗೆ ಸೇರಿಸಿ ಕುರುವಿನ ಮೇಲೆ ಹಚ್ಚಿದರೆ ಕುರು ಬೇಗನೆ ಒಡೆಯುತ್ತದೆ
21.ಕಾಳನ್ನು ನುಣ್ಣಗೆ ಅರೆದು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಹಚ್ಚುವುದರಿಂದ ಜೇನು ಕಡಿತದ ಬಾವು ಬೇಗನೆ ಇಳಿಯುತ್ತದೆ
ವಿಶೇಷ ಸೂಚನೆ ಸೋಂಪು ಅತಿಯಾದರೆ ಆಮಶಂಕೆ ಅಜೀರ್ಣ ಕ್ರಿಯೆ ಹೆಚ್ಚಾಗಿ ಸಮಸ್ಯೆ ಯಾಗಬಹುದು. ತಂಪು ಇರುವುದರಿಂದ ಶೀತ ಸಂಬಂಧಿ ಕಾಯಿಲೆಗಳು ಹೆಚ್ಚಾಗಬಹುದು
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು
