ನನ್ನ ಜೀವನಾಡಿ ಅಪ್ಪ – ಪ್ರಿಯ ಆರ್. ಪಿ



ಯಾರನ್ನು ಪ್ರೀತ್ಸೋಲ್ಲ ಅಂತ ಅಮ್ಮನಿಗೆ ಮಾತು ಕೊಟ್ಟಿದ್ದೆ. ಆದರೆ ಅವನನ್ನು ಬಿಟ್ಟಿ ಬದುಕಲು ಸಾಧ್ಯವೇ? ಅವನನ್ನು ಪ್ರೀತಿಸಿದ್ದು ಅಪ್ಪನಿಗೆ ಗೊತ್ತಾದರೆ…ಅವರಿಗೇನಾದರೂ ಆದರೆ…ಬೇಡಾ …ನನಗೆ ಅಪ್ಪ ಎಂದರೆ ಪ್ರಾಣ, ಅಪ್ಪನಿಗೆ ನಾನೆಂದರೆ ಪ್ರಪಂಚ. ಮುಂದೇನಾಯಿತು ಈ ಪ್ರೀತಿ ಕತೆ ಓದಿ…

ಸಮಯ ಆಗ್ಲೇ 8:30 ಆಯ್ತಾ ‘ಛೇ… ನಾನ್ ಇಷ್ಟ್ಯಾಕೆ ಲೇಟ್ ಎದ್ದೆ. ಪಾಪ, ಪಪ್ಪಾ ಈಗ ಅವರಿಗೆ ಕೆಲಸ ಜಾಸ್ತಿ. ಮೊದ್ಲು ರೆಡಿ ಆಗಿ ಕೆಳಗೆ ಹೋಗ್ಬೇಕು.

” ಪಪ್ಪಾ… ಪಪ್ಪಾ…ಎಲ್ಲಿದಿರಾ? ” ಅಂತ ಕಿರುಚುತ್ತ ಕೆಳಗೆ ಹೋದೆ. ” ಅಡಿಗೆ ಮನೇಲಿ ಇದ್ದೀನಿ ಮಗಾ, ಬೇಗಾ ಬಾ… ನಿನ್ನ ಇಷ್ಟದ ಪುಳಿಯೋಗರೆ ಮಾಡಿದೀನಿ ” ಅಂದ್ರು ನನ್ನ ಪಪ್ಪಾ. ಯಾಕೋ ಬೇಜಾರ್ ಆಯ್ತು. ನಾನು ಲೇಟ್ ಆಗಿ ಎದ್ದು ಅಪ್ಪಂಗೆ ಕಷ್ಟ ಕೊಟ್ಟೆ ಅನ್ನಿಸ್ತಿದೆ. ಕೆಳಗೆ ಹೋಗಿ ನೋಡಿದೆ ಅಪ್ಪ ಆಫೀಸಿಗೆ ರೆಡಿ ಆಗಿ ನಂಗೆ ತಿಂಡಿ ಮಾಡ್ತಿದ್ರು. ಅವರನ್ನ ತಬ್ಬಿಕೊಂಡು sorry ಕೇಳ್ದೆ, ನನ್ನ ತಲೆ ಸವರಿ, ” ಅಯ್ಯೋ ಮಗಾ… sorry ಯಾಕೆ ಕಂದ, ನೀನು ಏನ್ ಮಾಡಿದ್ರು ಚಂದ ಮಗಾ… ಬಾ ತಿಂಡಿ ತಿಂದು ಕಾಲೇಜ್ ಗೆ ಹೋಗು. ನಾನು ಆಫೀಸಿಗೆ ಹೋಗ್ಬೇಕು ” ಅಂತ ತಿಂಡಿ ಹಾಕೊಟ್ರು. ಅಪ್ಪ ಬೇಗಾ ತಿಂದು ಹೋದ್ರು. ನಾನು ಮನೆ ಬಾಗಿಲು ಹಾಕೊಂಡು ಕಾಲೇಜ್ ಕಡೆ ಹೊರಟೆ.

ಅಪ್ಪ ಅಮ್ಮ ಪ್ರೀತಿಯಿಂದ ನನಗೆ ಕಟ್ಟಿದ ಹೆಸರು ಮೃದುಲಾ. ನನಗೆ ಅಪ್ಪಾ ಅಂದ್ರೆ ಪ್ರಾಣ. ಅಪ್ಪನಿಗೆ ನಾನ್ ಅಂದ್ರೆ ಪ್ರಾಣ. ಅಪ್ಪನ ಹೆಸರು ಶಂಕರ್. ಸರ್ಕಾರಿ ಕಚೇರಿಯಲ್ಲಿ ಗುಮಾಸ್ತರು. ಅಮ್ಮನ ಹೆಸರು ಶಾರದಾ. ಮನೆಯ ವಂಶೋದ್ಧಾರಕ ನನ್ನ ಅಣ್ಣನ ಹೆಸರು ಪಂಕಜ್. ನನ್ನ ಅಣ್ಣನಿಗೂ, ನನಗು ಹತ್ತು ವರ್ಷ ಅಂತರವಿತ್ತು, ನನಗೆ ಹನ್ನೆರಡು ವರ್ಷವಿರುವ ನನ್ನ ಅಣ್ಣ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ. ಅಮ್ಮ ಕೊರಗಿ ಕೊರಗಿ ಪ್ರಾಣ ಬಿಟ್ಲು.ಆದರೆ ಅಮ್ಮ ಸಾಯೋ ಮುಂಚೆ ನನ್ನ ಹತ್ತಿರ ಭಾಷೆ ತಗೊಂದ್ಳು ಯಾವುದೇ ಕಾರಣಕ್ಕೂ ಅಣ್ಣನ ತರ ಮಾಡ್ಬೇಡ ಅಂತ. ಅವತ್ತಿಂದ ನನ್ನ ಪ್ರಪಂಚ ನನ್ನ ಅಪ್ಪಾ. ನನ್ನ ಬೇಕು ಬೇಡ ಎಲ್ಲ ಗೊತ್ತಾಗುತ್ತೆ ಅವರಿಗೆ. ನಾನ್ ಅಂದ್ರೆ ತುಂಬಾ ಪ್ರೀತಿ, ನಾನ್ ಹೇಳೋ ಮುಂಚೆನೇ ನನ್ನ ಆಸೆ ಪೂರ್ತಿ ಮಾಡ್ತಾರೆ. ಎಷ್ಟೇ ಕಷ್ಟ ಇದ್ರೂ ಒಂದು ದಿನನು ನಂಗೆ ಕಷ್ಟ ತೋರ್ಸದೆ ಬೆಳ್ಸಿದ್ದಾರೆ.

ಕಾಲೇಜ್ ಗೆ ತಲುಪಿದೆ. Bsc ಫೈನಲ್ ಇಯರ್ ಓದ್ತಾ ಇದೀನಿ. ನಂಗೆ ಅಷ್ಟು ಫ್ರೆಂಡ್ಸ್ ಇಲ್ಲ. ಇರೋದೇ ಒಬ್ಬಳು ಸ್ವಾತಿ. ಜೀವದ ಗೆಳತಿ ಚಿಕ್ಕ ವಯಸ್ಸಿನಿಂದ ಜೊತೆಗೆ ಇದ್ದಾಳೆ.ಈಗ ನನ್ನ ಲೈಫ್ ಅಲ್ಲಿ ನನ್ ತುಂಬಾ ಇಷ್ಟ ಪಡೋದು ಅಂದ್ರೆ ನನ್ನ ಅಪ್ಪನ್ನ ಬಿಟ್ರೆ ಅವನು. ಅವನು ಅಂದ್ರೆ ಪ್ರಾಣ. ಆದ್ರೆ ಅಮ್ಮಂಗೆ ಮಾತು ಕೊಟ್ಟಿದ್ದೀನಿ. ಯಾವತ್ತೂ ನಾನು ಅಪ್ಪಂಗೆ ಮೋಸ ಮಾಡಲ್ಲ ಅಂತ.

ಆಗಷ್ಟೇ bcs ಜಾಯಿನ್ ಆಗಿದ್ದೆ, ಅದೇ ಕಾಲೇಜಿನಲ್ಲಿಯೇ ಅವನು ಫೈನಲ್ ಇಯರ್ MSC ಓದುತ್ತಿದ್ದ. ಮೊದಲ ದಿನ ಕಾಲೇಜ್ ಅಲ್ಲೇ ಪ್ರೊಪೋಸ್ ಮಾಡಿದ. ಅಮ್ಮನ ನೆನಪಾಯ್ತು. ಏನು ಹೇಳ್ದೆ ಸುಮ್ನೆ ಹೋದೆ. ಬೇರೆ ಹುಡುಗರ ತರ ಹಿಂದೆ ಬಿದ್ದು ಕಾಟ ಕೊಡ್ಲಿಲ್ಲ, ಹಿಂಸೆ ಮಾಡಿಲ್ಲ. ಎಲ್ಲಾದ್ರೂ ಸಿಕ್ಕಿದ್ರೆ ಮಾತ್ರ ಮಾತು. ತುಂಬಾ ಸ್ವಾಭಿಮಾನಿ ಅಂತ ಎಲ್ಲ ಹೇಳ್ತಾರೆ. ತುಂಬಾ ಒಳ್ಳೆ ನಡತೆ ಅವನದ್ದು. ಅದು ಯಾವಾಗ ಪ್ರೀತಿ ಆಯ್ತು ಅಂತ ಗೊತ್ತಿಲ್ಲ ಅವನು ನನ್ನ ಆವಾರಿಸ್ಕೊಂಡಿದ್ದಾನೆ. ಈಗ ಒಂದು ಕಾಲೇಜ್ ಅಲ್ಲಿ ಲೆಕ್ಚರರ್ ಆಗಿ ವರ್ಕ್ ಮಾಡ್ತಿದ್ದಾನೆ. ವಾರಕ್ಕೆ ಒಮ್ಮೆಯಾದರು ಬಂದು ನನ್ನ ಮೀಟ್ ಮಾಡಿ ಹೋಗ್ತಾನೆ. ನಾನು ಮಾತ್ರ ಇದುವರೆಗೂ ಒಂದು ಮಾತಾಡಿಲ್ಲ. ನಂಗೆ ನನ್ನ ಅಪ್ಪನ್ನ ಕಳ್ಕೊಳಕ್ಕೆ ಇಷ್ಟ ಇಲ್ಲ. ನಾನೇ ಅವರ ಜೀವ ಮತ್ತು ಅವರ ಬದುಕಿನ ಸ್ಪೂರ್ತಿಯೂ ಆಗಿದ್ದೀನಿ. ಕಷ್ಟಪಟ್ಟು ಓದುಸ್ತಿದ್ದಾರೆ. ಅವರಿಗೆ ನಾನು ಮೋಸ ಮಾಡಲ್ಲ.



ಸ್ವಾತಿ ಗೆ ನನ್ನ ವಿಷಯ ಎಲ್ಲ ಗೊತ್ತು. ಒಂದ್ಸರಿ ಅಂಕಲ್ ಗೆ ವಿಷ್ಯ ಹೇಳು ಅಂತಾಳೆ. ಆದ್ರೆ ಅಪ್ಪನಿಗೆ ತನ್ನ ಮಗಳು ಪ್ರೀತಿ ಮಾಡ್ತಿದ್ದಾಳೆ ಅಂತ ಗೊತ್ತಾದ್ರೆ ಅವರು ನಿಜವಾಗಿಯೂ ಬೇಜಾರ್ ಆಗ್ತಾರೆ ಎನ್ನುವ ಭಯಕ್ಕೆ ಸುಮ್ನೆ ಇದ್ದೀನಿ. ನನ್ನ ಪ್ರೀತಿಗಿಂತ ನನ್ನ ಅಪ್ಪನ ಪ್ರೀತಿನೇ ದೊಡ್ಡದು. ಇದನ್ನೇ ಅವಳಿಗೂ ಹೇಳಿದೆ. ನನ್ನ ಓದಿನಲ್ಲಿ ಬ್ಯುಸಿ ಆದೆ.

ಇವತ್ತಿಗೆ ನನ್ನ ಎಕ್ಸಾಮ್ ಮುಗಿದು ಒಂದು ವಾರ ಆಯ್ತು. ಅಪ್ಪಾ ಮದ್ವೆಯಾಗು ಅಂತ ತುಂಬಾ ಕೇಳ್ತಿದ್ದಾರೆ. ನಂಗೆ ಅವರನ್ನ ಬಿಟ್ಟಿರೋಕೆ ಇಷ್ಟ ಇಲ್ಲ. ಅದ್ಕೆ ಅಪ್ಪಾ… ನೀವು ನಮ್ ಜೊತೆ ಇರ್ಬೇಕು, ಇದಕ್ಕೆ ಒಪ್ಪೋ ಹುಡ್ಗ ಇದ್ರೆ ಹೇಳಿ ನಿಜ ನಾನು ಮದ್ವೆ ಆಗ್ತೀನಿ ಅಂದೇ. ಅದ್ಹೇಗೋ ಗೊತ್ತಿಲ್ಲ ಆತರ ಹುಡುಗ ಸಿಕ್ಕಿದ್ದಾನೆ. ಅನಾಥ ಅಂದ್ರು ಅಪ್ಪಾ ತುಂಬಾ ಒಳ್ಳೆಯವರು ನಂಗೆ ಇಷ್ಟ ಆದ್ರೂ ಮಗಾ ನೀನು ಒಂದ್ ಸರಿ ಫೋಟೋ ನೋಡಿ ಒಪ್ಪಿಗೆ ಕೊಡಮ್ಮ ಅಂದ್ರು. ಅಪ್ಪನ ಇಷ್ಟನೆ ನನ್ನ ಇಷ್ಟ ಅಂತ ಫೋಟೋ ನೋಡದೆ ಒಪ್ಪಿಗೆ ಕೊಟ್ಟೆ.

ಮನಸ್ಸು ಅವನನ್ನ ದೂರ ಮಾಡ್ಕೋಬೇಡ ಅಂತ ಸಾರಿ ಸಾರಿ ಕೂಗಿ ಹೇಳ್ತಿತ್ತು. ಆದ್ರೆ ನಂಗೆ ಅಪ್ಪನೇ ಮುಖ್ಯ ಅಂತ ಗಟ್ಟಿ ಮನಸ್ಸು ಮಾಡಿ ಸುಮ್ನೆ ಇದ್ದೆ. ಇನ್ನ ಒಂದೇ ವಾರಕ್ಕೆ ನನ್ನ ಮದ್ವೆ, ಮನೇಲಿ ಮದ್ವೆ ತಯಾರಿ ನಡೀತಿತ್ತು. ನೆಂಟರು ಎಲ್ಲ ಬಂದಿದ್ದರು. ನಾನು ಮದ್ವೆ ಗ್ರಾಂಡ್ ಬೇಡ ಅಪ್ಪಂಗೆ ಹೊರೆ ಜಾಸ್ತಿ ಅಂತ ದೇವಸ್ಥಾನದಲ್ಲಿ ಮದ್ವೆ ಆಗೋಣ ಅಂದಿದ್ದೆ. ಅಪ್ಪನಿಗೆ ಹುಡುಗನು ಇದ್ನೇ ಹೇಳಿದ್ದ ಅಂದ್ರು ಅಪ್ಪಾ.

ಫೋಟೋ ಕೃಪೆ : piterest

ಅಂತೂ ಮದುವೆ ದಿನ ಬಂತು. ನಾನು ರೆಡಿ ಆಗಿ ಬಂದೆ. ಇಂದೇಕೋ ಸ್ವಾತಿ ತುಂಬಾ ಖುಷಿಯಾಗಿ ಇದ್ಲು, ಕೇಳ್ದೆ ಏನಿಲ್ಲಾ ಅಂತ ಮರೆಮಾಚಿದ್ಲು. ಅಂತರಪಟ ಅಡ್ಡ ಇತ್ತು. ಜೀರಿಗೆ ಬೆಲ್ಲ ಸುರಿದಾಯ್ತು. ಅಂತರಪಟ ಸರಿಸಿದರು, ಎದುರಿಗೆ ಅವನು. ಕಣ್ಣಲ್ಲಿ ನೀರು ಹರಿತಾನೆ ಇತ್ತು. ಯಾಕೆ ಅಂತ ಮಾತ್ರ ಉತ್ತರ ಗೊತ್ತಿಲ್ಲ. ಅಪ್ಪನ ಕಡೆ ನೋಡಿದೆ. ಕಣ್ಣಲ್ಲೇ ಅಳ್ಬೇಡ, ನಗು ಅಂದ್ರು. ತಾಳಿ ಕಟ್ಟಿ ಆಯ್ತು. ನಾನೀಗ ನನ್ನ ಪ್ರೇಮಿಯ ಧರ್ಮಪತ್ನಿ. ‘ಮೃದುಲಾ ಶಂಕರ್’ ಇಂದ ‘ಮೃದುಲಾ ಸಂಜಯ್’ ಆದೆ. ಯಾಕೋ ನನ್ನ ಅಳು ನಿಲ್ಲಲಿಲ್ಲ. ಎಲ್ಲ ಗಂಡನ ಮನೆಗೆ ಹೋಗ್ಬೇಕು ಅಂತ ಅಳ್ತಿದ್ದಾಳೆ ಅನ್ಕೊಂಡ್ರು. ಆದ್ರೆ ಅದು ಸತ್ಯ ಅಲ್ಲ. ನಂಗೆ ಗೊತ್ತು ಹೇಗೋ ಅಪ್ಪನಿಗೆ ನನ್ನ ವಿಷಯ ತಿಳಿದಿದೆ ಅಂತ. ಎಲ್ಲ ಶಾಸ್ತ್ರ ಆಯ್ತು. ಅಪ್ಪನ ಹತ್ರ ಹೋದೆ. ಅವರ ಎದೆಗೆ ಒರಗಿ ಅತ್ತೆ. ಅವರು ತಲೆ ಸವರುತ್ತ, ” ಯಾಕೆ ಮಗಳೇ ನಿನ್ನ ಅಪ್ಪಾ ಅಷ್ಟು ಹೊರಗಿನವನಾದನ, ನಿನ್ನ ಡೈರಿ ಓದಿ ನಾನು ವಿಷ್ಯ ತಿಳ್ಕೊಬೇಕಾ. ಮಗಾ… ನಿನ್ನ ಅಪ್ಪನ ಖುಷಿ ಇರೋದು, ನಿನ್ನ ಖುಷಿಲಿ ಕಂದ ” ಅಂತ ತಲೆ ನೆವರಿಸಿದರು. ಹೌದು ನಾನು ಡೈರಿಯಲ್ಲಿ ಎಲ್ಲ ಬರಿತಿದ್ದೆ.



ಮದ್ವೆಯಾಗಿ ಮೂರು ವರ್ಷ ಆಗಿದೆ. ಅಪ್ಪಾ ಅವತ್ತು ಸಂಜಯ್ ನ ಭೇಟಿಯಾಗಿ ನನ್ನ ಬಗ್ಗೆ ಮಾತಾಡಿದ್ದಾರೆ, ಸಂಜಯ್ ಬೇಜಾರಿಂದ, ಅಂಕಲ್ ಅವಳು ನನ್ನ ಪ್ರೀತಿ ಮಾಡ್ತಿಲ್ಲ ಅಂತ ಹೇಳಿದ್ದಾರೆ. ಅಪ್ಪಾ ಅವರಿಗೆ ನನ್ನ ಡೈರಿ ತೋರಿಸಿ ಮದ್ವೆಗೆ ಒಪ್ಪಿಗೆ ಕೇಳಿದ್ದಾರೆ, ಆಗ್ಲೇ ಅಪ್ಪನಿಗೆ ತಿಳಿದಿದ್ದು, ಅವರು ಅನಾಥ ಅಂತ, ಅಪ್ಪನೇ ಅವರಿಗೆ ಇನ್ನು ನೀನೇ ನನ್ನ ಮಗ ಅಂತ ಹೇಳಿ ಬಂದಿದ್ದಾರೆ. ಮದ್ವೆ ಆದ್ಮೇಲೆ ಸಂಜಯ್ ಒಂದು ಮನೆ ತಗೊಂಡ್ರು. ಅಪ್ಪನ್ನ ಕೆಲಸದಿಂದ ಬಿಡಿಸಿ ನಮ್ಮ ಜೊತೆ ಇರಿಸ್ಕೊಂಡ್ರು. ಈಗ ನನ್ನ ಅಪ್ಪಾ ನನ್ನ ಜೊತೆನೇ ಇದ್ದಾರೆ. ಅವರಿಗೆ ಈಗ ನನಕ್ಕಿಂತ ನನ್ನ ಮಗಳಂದ್ರೆ ಪ್ರೀತಿನಾ? ಅನ್ನುವಷ್ಟು ಮುಳುಗಿ ಹೋಗಿದ್ದಾರೆ. ಹೌದು… ನನ್ನ ಮಗಳು ಪೂರ್ವಿಕ ಒಂದುವರೆ ವರ್ಷದ ತುಂಟಿ. ನಾನು ಸಂಜಯ್ ಎಷ್ಟೇ ಸಮಾಧಾನ ಮಾಡಿದ್ರು ಆಗಲ್ಲ ತಾತನೆ ಬರ್ಬೇಕು, ಮಲಗೋದು ಎಲ್ಲ ತಾತನ ಜೊತೆನೇ.

ನನ್ನ ಅಪ್ಪಾ ಅಂದ್ರೆ ನಂಗೆ ಹೆಮ್ಮೆ, ಗೌರವ ಎಲ್ಲ. ನನಗಾಗಿ ಎಲ್ಲ ಮಾಡಿದ್ರು, ನನ್ನ ಪ್ರೀತಿ ಸಹ ಅವರಿಂದ ಸಿಕ್ತು. ನಾನು ಈಗ ಖುಷಿಯಾಗಿ ಇದೀನಿ ಅಂದ್ರೆ ಅದ್ಕೆ ಕಾರಣ ನನ್ನ ಅಪ್ಪಾ. I love you pa …


  • ಪ್ರಿಯ ಆರ್. ಪಿ (ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ, ಯುವ ಕತೆಗಾರ್ತಿ) ಹಾಸನ

3.7 6 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW