‘ಬನ್ನಿ’ ಕವನ – ರೂಪೇಶ್ ಪುತ್ತೂರು




ಬನ್ನಿ…ಶುಭ ಯಾತ್ರೆ ಹಾರೈಸಿ ನನ್ನ ಜೊತೆ ಸೇರಿ ಎನ್ನುತ್ತಾರೆ ಲೇಖಕರು, ಕವಿ ರೂಪೇಶ್ ಪುತ್ತೂರು ಅವರು. ಮನದಾಳ ಕವಿತೆ ಮುಂದೆ ಓದಿ…

ನನ್ನೊಂದಿಗೆ ಮುಂಜಾವುಗಳೇ
ನನ್ನೊಂದಿಗೆ ಕನಸುಕಂಡು ನಸುನಗುವ ಯಾಮಗಳೇ
ನನ್ನೊಂದಿಗೆ ಸುಪ್ರಭಾತವಂಬಲಿಸುವ ಚರಾಚರಗಳೇ
ಬನ್ನೀ ವಂದಿಸುವೆ…
ಇಂದೂ ಪಯಣ ಮುಂದುವರಿಸುವೆ
ಶುಭಯಾತ್ರೆ ಹಾರೈಸಿ
ನನ್ನ ಜೊತೆಸೇರಿ…

ಒಂದು ಗೊಂಚಲು ಬೆಳದಿಂಗಳನ್ನು ಅಂಗೈಯೊಳಗೆ
ಶೀತಲ ತೀರ್ಥ ಸ್ಪರ್ಷವೆಸಗಿದ ನಿಶೆಗಳೇ,
ನೆರಳಿನೊಂದಿಗೆ ಲಗ್ನವಾಗಿ
ನೃತ್ಯವಾಡಿದ ಸೂರ್ಯಪ್ರಭೆಗಳೇ,
ಬನ್ನೀ ವಂದಿಸುವೆ……
ಇಂದೂ ಪಯಣ ಮುಂದುವರಿಸುವೆ
ಶುಭಯಾತ್ರೆ ಹಾರೈಸಿ
ನನ್ನ ಜೊತೆಸೇರಿ…

#ಎಲೆ_ಅಡಿಕೆ ತಿಂದ ಕೆಂದುಟಿಯಂತಹಾ ಸಂಜೆಗಳೇ,
ಉಳುವ ಯೋಗಿಯ ಕಣಜಕ್ಷೀರ ಹೀರುವ ಹಕ್ಕಿಗಳೇ,
ಅಮೃತವರ್ಷಿಣಿಯಂತೆ ದರೆಗಿಳಿವ ವೃಷ್ಟಿಮೇಘಗಳೇ,
ಪ್ರಕೃತಿ ತೋರುವ ಹೃದಯ ಸಂಪದ್ಭರಿತ ಪವಮಾನಗಳೇ,
ಬನ್ನೀ ವಂದಿಸುವೆ..…
ಇಂದೂ ಪಯಣ ಮುಂದುವರಿಸುವೆ
ಶುಭಯಾತ್ರೆ ಹಾರೈಸಿ
ನನ್ನ ಜೊತೆ ಸೇರಿ…

ನನ್ನ ಜೀವನ್ಪಥದಲ್ಲಿ ಮೂಖ ಸಾಂತ್ವನವಾಗಿ
ಬಿರಿದ ಚೆಂಗುಸುಮಗಳೇ,
ನನ್ನ ನಯನದೊಳುದುಗಿ ಸೆರೆಯಾಗಲಣಿವಾದ ರಮಣೀಯ ದೃಶ್ಯಗಳೇ,,,
ದಣಿವ ಈ ದೇಹಕ್ಕಾಸರೆಯಾದ ಅದೃಶ್ಯ ಪ್ರಭಲಾರ್ಪುತಾಣಗಳೇ,,,
ಎಲ್ಲಾ ರೀತಿಯ ಪ್ರೋತ್ಸಾಹವರ್ಪಿಸುವ
ಸುಮಧುರ ಹೃದಯಗಳೇ,
ಬನ್ನೀ ವಂದಿಸುವೆ…
ಇಂದೂ ಪಯಣ ಮುಂದುವರಿಸುವೆ
ಶುಭಯಾತ್ರೆ #ಹಾರೈಸಿ
ನನ್ನ ಜೊತೆಸೇರಿ…

(ಪವಮಾನ = ಗಾಳಿ)
(ಚೆಂಗುಸುಮ = ಚೆಂದದ ಹೂವು)
(ಆರ್ಪು = ಶಕ್ತಿ)

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading