‘ಅಳ್ಳಿಟ್ಟು’ ಕೃತಿ ಪರಿಚಯ : ಮಾಲತಿ ರಾಮಕೃಷ್ಣ ಭಟ್

ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಸಿ. ಇ.ಒ .ಆಗಿ ಉದ್ಯೋಗದಲ್ಲಿರುವ ಲೇಖಕರಾದ ಪ್ರಶಾಂತ್ ಆಡೂರ್ ಅವರು ವಿಜಯಕರ್ನಾಟಕ ಮತ್ತು ವಿಜಯವಾಣಿ ಪತ್ರಿಕೆಯ ಅಂಕಣಕಾರರೂ ಹೌದು. ಅವರ ಮೂರನೆಯ ಕೃತಿ ‘ಅಳ್ಳಿಟ್ಟು’ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ಅಳ್ಳಿಟ್ಟು.
ಲೇಖಕರು: ಪ್ರಶಾಂತ್ ಆಡೂರ್
ಸಾವಣ್ಣ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨0೧೯.
ಪುಟಗಳು:೧೫೨.
ಬೆಲೆ:೧೫೦.
ಮೊದಲ ಕೃತಿ “ಕುಟ್ಟವಲಕ್ಕಿ “ಹಾಗೂ ಎರಡನೇ” ಗೊಜ್ಜವಲಕ್ಕಿ’ ಯನ್ನು ಛಂದ ಪುಸ್ತಕದ ವಸುಧೇಂದ್ರ ಅವರು ಪ್ರಕಟಿಸಿದ್ದರು. “ಅಳ್ಳಿಟ್ಟು “ಸಾವಣ್ಣ ಪ್ರಕಾಶನದಿಂದ ಬಂದ ಅವರ ಮೂರನೆಯ ಹಾಸ್ಯ ಪ್ರಹಸನಗಳ ಸಂಕಲನ.

ಇವರು ನಿಜ ಜೀವನದ ಸಿಹಿ ಕಹಿ ಸತ್ಯಗಳನ್ನು ಹಾಸ್ಯರೂಪದಲ್ಲಿ, ಶುದ್ಧದೇಸಿ ಹುಬ್ಬಳ್ಳಿ ಜವಾರಿ ಭಾಷೆಯಲ್ಲಿ ಬರೆದಿದ್ದಲ್ಲದೇ, ಇವು ಯಾರನ್ನೂ ತಲ್ಯಾಗ ಇಟಗೊಂಡು ಬರದ್ದಂತೂ ಅಲ್ಲಾ,ಹಿಂಗಾಗಿ ಯಾರೂ ತಪ್ಪ ತಿಳ್ಕೊಂಡ ಜಗಳಕ್ಕೆ ಬರಬ್ಯಾಡ್ರಿ ಎಂದಿದ್ದಾರೆ.

ಹೀಗೆ ಶುದ್ಧಹಾಸ್ಯದಿಂದ ನಗಿಸುವುದು ಪುಣ್ಯಕಾರ್ಯ. ನಮ್ಮ ಮುಖದಲ್ಲಿ ನಗೆಯ ಹೂವರಳಿಸಿ, ತುಸು ಹಗುರವಾಗಿಸುವ ಪ್ರಶಾಂತ್ ಆಡೂರ್ ರವರು ನಿಜವಾದ ಸಮಾಜಸೇವಕರು ಎಂಬುದಾಗಿ ಲೇಖಕರಾದ ವಸುಧೇಂದ್ರರವರು ಹೇಳಿದ್ದಾರೆ.

ಇಲ್ಲಿನ ಒಂದೆರಡು ಪ್ರಬಂಧಗಳ ಮಾದರಿ… ನೋಡಿರಿ….

ಶೀರ್ಷಿಕೆ :

  • ನೈಟಿ ಕಂಡ ಹಿಡಿದವನಿಗೆ ನೊಬೆಲ್ ಬಹುಮಾನ :

ಕೊಡಬೇಕೆಂದು ಅವರಿಗೆ ಇತ್ತೀಚೆಗೆ ಅನಿಸಿದ್ದು ಯಾಕೆಂಬ ಕಾರಣ ಅವರ ಮಾತಲ್ಲೇ ಕೇಳಿ. ಇವತ್ತ ನಮ್ಮೆಲ್ಲಾರ ಮನ್ಯಾಗಿನ ಹೆಣ್ಮಕ್ಕಳು ಅಗದಿ ಕಮಫಾರ್ಟೇಬಲ್ ಅಂತ ನೈಟಿ ಹಾಕ್ತಾರ. ಹಂಗೇ ಇವರ ಹೆಂಡ್ತೀನೂ ಅದಕ್ಕೆ ಹೊರತಲ್ಲ. ಅಂದಾಕೆ ಹೊಸ ನೈಟಿ ತರಲು ಪೇಟೆಗೆ ಹೋಗೋಣವೆಂದಾಗ, ಸುಸ್ತಾಗಿ ಬಂದವರಿಗೆ ಪಿತ್ತ ನೆತ್ತಿಗೇರಿತು. ಲೇ… ನಿನ್ನೌವ್ವನ, ಒಳಗ ಬಂದು ಇದ್ದ ನೈಟಿನೂ ಹರಕೊಂಡ ಒದರ. ರಸ್ತೆದಾಗ ಒದರಿ ಮರ್ಯಾದಿ ಕಳಿಬ್ಯಾಡ. ಎಂದಿದ್ದಲ್ಲದೇ… ಆಕೆಗಿದ್ದ ನೈಟಿ ಹುಚ್ಚು, ಮನ್ಯಾಗ ಹಾಕ್ಕೊಳ್ಳಿಕ್ಕೆ ಒಂದು, ರಾತ್ರೀಗೊಂದು ಹಾಲ ತರೋಕ್ಕೆ ಹೋಗಲೊಂದು , ಪಾತ್ರೆ ತೊಳೆಯುವಾಗೊಂದು ಹೀಗೆ ಆಕೆ ಬದಲಾಯಿಸುವ ನೈಟಿಗಳ ವಿವರ ಸಾಕಷ್ಟಿದೆ.

ಹಂಗಾರ ಈ ನೈಟಿ ಕಂಡು ಹಿಡಿದ ಮಹಾನುಭಾವರು ಯಾರೆಂದು ಎಷ್ಟು ಗೂಗಲ್ ಸರ್ಚ್ ಮಾಡಿದರೂ ಸಿಗದೇ ಕೊನೆಗೆ ಒಂದೊಂದು ಕೆಲಸಕ್ಕೆ ಒಂದೊಂದು ಟೈಪ್ ನೈಟಿ ಧರಿಸುವ ಹೆಂಡತಿಗೇ ಒಂದು ಅವಾರ್ಡ್ ಕೊಡಲು ನಿರ್ಧರಿಸಿ, ಅರಿಸಿನ ಕುಂಕುಮದ ಜೊತೆ ಒಂದು ಜೊತೆ ನೈಟಿ ಕೊಟ್ಟರಂತೆ.

  • ಕಮೋಡ್ ಯಾ ದಿಕ್ಕಿಗೆ ಮಾಡಿ?

ಹೆಂಡ್ತಿ ಕಾಟಕ್ಕೆ ಹುಬ್ಬಳ್ಳಿಯಲ್ಲಿ ಮನೆ ಕಟ್ಟಲಿಕ್ಕೆ ಚಾಲೂ ಮಾಡಿ ಎರಡ ವರ್ಷ ಆಗಲಿಕ್ಕೆ ಬಂತು. ಹಣ ಕಡಿಮೆ ಆತೆಂದು ‘ನಿಮ್ಮಪ್ಪನ ಕಡೆ ಸ್ವಲ್ಪ ಹೆಲ್ಪ್ ಕೇಳ… ಅಂದರ ನಮ್ಮಪ್ಪನ ಕಡೆ ರೊಕ್ಕ ತಗೊಂಡ ಮನಿ ಕಟ್ಟೋದಿದ್ದರ ನೀವೇನು ಕಟ್ಟಿದಂಗ ಆತು ತಲಿ’  ಅಂತಾಳ. ‘ನಾ ಮನಿ ಕಟ್ಟಲಿಕ್ಕೆ ಹತ್ತೇನಿ ಅನ್ನೋದೇ ತಡ… ಹಂಗ ಕಟ್ಟು, ಹಿಂಗ ಕಟ್ಟು ವಾಸ್ತು ನೋಡ, ಉತ್ತರಕ್ಕೆ ಬಾಗ್ಲ ಮಾಡ, ಕಮೋಡ್ ಯಾ ದಿಕ್ಕಿಗೆ ಮಾಡಿ?’… ಎಂದೆಲ್ಲಾ ಮಂದಿ ಪುಗ್ಸಟ್ಟೆ ಸಲಹೆ ಕೊಡಲಿಕತ್ತರು.
ಇದರ ಸಾಧಕ ಬಾಧಕಗಳನ್ನು ವಿವರಿಸಿ, ಅವರು ಸ್ನೇಹಿತನಿಗೆ ಹೇಳುವುದು ಹೀಗೆ.

ಲೇ, ನಾ ಹೊಸಾಮನಿಗಿ ನಾಲ್ಕೂ ದಿಕ್ಕಿಗೆ ಬಾಗಿಲು ಮಾಡಿಸತೆನಿ. ಯಾ ದಿಕ್ಕಲ್ಲಿ ಹೆಂಡ್ತಿ ಇರಾಂಗಿಲ್ಲಾ ಆ ದಿಕ್ಕಿಂದ ಮನಿಗೆ ಎಂಟರ್ ಆಗ್ತೇನಿ. ಅದೇ ಗಂಡಂದಿರಿಗೆ ರೈಟ್ ದಿಕ್ಕು. ವಾಸ್ತು ಗಿಸ್ತು ಬಗ್ಗೆ ಬಾಳ ತಲಿಕೆಡಸಿಗೋ ಬ್ಯಾಡ ನಡಿ. ಭೂಮಿನೇ ರೌಂಡ ಅದ. ಹಂತಾದರಾಗ ಮತ್ತ ಆ ದಿಕ್ಕ ಈ ದಿಕ್ಕ ಅಂತ ದಿಕ್ಕಾ ತಪ್ಪಿಸಿಗೊಂಡ ಕೂಡೋದರಾಗ ಏನದ ಅಂತೇನಿ?.

ಎಷ್ಟು ಖರೇ ಮಾತ ಅದಾ !! ಹೌದಿಲ್ಲೋ… ಮತ್ತ ನೀವೇನಂತೀರಿ? ಹಿಂಗs ಬಾಳ ಛಲೋ ಛಲೋ ಪ್ರಬಂಧಗೋಳು ಇಲ್ಲವಾs… ನೀವೂ ಯುಗಾದಿ ಹಬ್ಬಕ್ಕ “ಅಳ್ಳಿಟ್ಟು ” ತಿಂತಾ ಪುಸ್ತಕಾ ಓದ್ರಿ .. ನಗ್ರೀ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW