‘ಸುಯೋಗ ಶಾಂತಿವನ’ ಸೀನಿಯರ್ ಸ್ನೇಹಿ ರೆಸಾರ್ಟ್

ಲತಿಕಾ ಭಟ್ ಅವರು ಈಗಾಗಲೇ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ‘ಸುಯೋಗಾಶ್ರಯ’ ಎಂಬ ಅನಾಥ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ. ಈಗ ‘ಸುಯೋಗ ಶಾಂತಿವನ ‘ ಸೀನಿಯರ್ ಸ್ನೇಹಿ ರೆಸಾರ್ಟ್ ಕೂಡಾ ನಿರ್ಮಾಣ ಮಾಡಿದ್ದಾರೆ, ಹೆಚ್ಚಿನ ಮಾಹಿತಿಗೆ ತಪ್ಪದೆ ಮುಂದೆ ಓದಿ…

ನಾನು ಕಳೆದ ಹದಿನೈದು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ‘ಸುಯೋಗಾಶ್ರಯ’ ಎಂಬ ಅನಾಥ ವೃದ್ಧಾಶ್ರಮವನ್ನು ನಡೆಸುತ್ತಿರುವುದು ಹಿತೈಷಿಗಳಾದ ತಮ್ಮೆಲ್ಲರಿಗೂ ಗೊತ್ತಿದೆ ಎಂದುಕೊಂಡಿದ್ದೇನೆ.

ಈಗಿರುವ ಆಶ್ರಮದಲ್ಲಿ ರೂಮುಗಳು ಮುಗಿಯುತ್ತ ಬಂದ ಹಾಗೇ ಮತ್ತೆ ಕಟ್ಟಿಸುವ ಕೆಲಸಕ್ಕೆ ಕೈಹಾಕುತ್ತಿದ್ದೆ. ಬಹಳ ಸಿಂಪಲ್ ಆಗಿ ಡಿಸೈನ್ ಮಾಡಿದ ರೂಮುಗಳು. ಅಲ್ಲಿ 80 ಜನರಿಗೆ ಈಗ ಅವಕಾಶ ಮಾಡಿದ್ದೇನೆ. ನಾನೇ ಹೋಗಿ ಲಿಫ್ಟ್ ಮಾಡಿದವರ ಸಂಖ್ಯೆ ಒಂದೆರಡು ಅಷ್ಟೇ. ಉಳಿದವರು ಪೊಲೀಸ್ ಮುಖಾಂತರ, ಮೀಡಿಯಾದವರ ಮೂಲಕ ಅಥವಾ ವಿವಿಧ ಸಂಘ ಸಂಸ್ಥೆಗಳ ಮೂಲಕ ಬಂದವರೇ. ನನ್ನಲ್ಲಿಗೆ ಬಂದ ನಂತರ ಅವರಿಗಾಗಿ ನನ್ನ ಶಕ್ತಿ ಮೀರಿ ವ್ಯವಸ್ಥೆ ಮಾಡಿದ್ದೇನೆ. ಕಾರಣ ನಾನ್ಯಾವುದೇ ಸರಕಾರೀ ಸಹಾಯ ತೆಗೆದುಕೊಂಡಿಲ್ಲ. ನನ್ನವರ ಸಂಬಳವೇ ನನ್ನ ಮುಖ್ಯ ಆದಾಯ ಮೂಲ. ಹೊರಗಿನ ಸಹಾಯ ನಂಬಿ ಇಷ್ಟು ಜನರನ್ನು ಸಾಕುವುದು ಕಷ್ಟ. ತೀರಾ ಕಷ್ಟವಿದೆ ಎಂದಾಗ ಫೇಸ್ಬುಕ್  ಲ್ಲಿ ವಸ್ತುರೂಪದ ಸಹಾಯ ಕೇಳಿದ್ದೇ ಹೆಚ್ಚು. ನಿಮ್ಮ ನಂತರ ಆಶ್ರಮ ಹೇಗೆ ನಡೆಯುತ್ತೆ? ಅಂತ ಬಹಳ ಜನ ಕೇಳಿದ್ರಿ. ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ಸತ್ಯದ್ದಾದರೆ ಹೇಗೋ ನಡೆಯುತ್ತೆ ಎಂಬ ಧೈರ್ಯ. ಈಗ ನಮ್ಮವರ ನಿವೃತ್ತಿ ಹತ್ತಿರ ಬಂದ ಹಾಗೇ ಮುಂದೆ ಆಶ್ರಮ ನಡೆಸಲು ಅಸಾಧ್ಯವೆಂದು ಅನಿಸಿ ಚಿಂತೆಗೀಡಾಗಿದ್ದೆ. ಈ ಬಗ್ಗೆ ಫೇಸ್ಬುಕ್ ಲ್ಲಿರುವ ಹಿತೈಷಿಗಳಾದ ಕೆಲವರು ಪೇ ಮಾಡಿ ಇರುವ ಸೀನಿಯರ್ living  ಮಾಡಲು ಸಲಹೆ ಕೊಟ್ಟಿದ್ದರು. ಅದನ್ನು ನಡೆಸಲು ನನಗೆ ಭಯ. ಫ್ರೀ ಆಗಿ ಇರೋರನ್ನೇ ನೋಡ್ಕೊಳ್ಳೋದು ಕಷ್ಟ. ಇನ್ನು ದುಡ್ಡು ಕೊಟ್ಟು ಇರೋರನ್ನು ಮ್ಯಾನೇಜ್ ಮಾಡೋದು ಹೇಗೆ? ಅಂತ. ಆದರೆ ಈಗ ಇದರ ಅನಿವಾರ್ಯತೆಯ ಅರಿವಾಯಿತು ನನಗೆ.

ನನ್ನ ಯಜಮಾನರ ನಿವೃತ್ತಿ ಯ ನಂತರ, ನನ್ನ ನಂತರವೂ ಆಶ್ರಮ ನಡೆಯಲು ವ್ಯವಸ್ಥೆ ಮಾಡುವ ಇಚ್ಛೆಯಿಂದ ಶಾಂತಿವನ retirement home ಅಥವಾ ಸೀನಿಯರ್ ಲಿವಿಂಗ್ ಒಂದು ಈಗ ತಯಾರಾಗಿ ನಿಂತಿದೆ. ಇಲ್ಲಿ ಹನ್ನೆರಡು ಮಂದಿಗಷ್ಟೇ ಅವಕಾಶ. ಅಲ್ಲಿರುವವರು ತಮ್ಮ ಜೀವನವನ್ನು ಶಾಂತಿ, ನೆಮ್ಮದಿಯಿಂದ ಕಳೆಯುವುದರ ಜೊತೆಗೆ ಸುಯೋಗಶ್ರಯದ ಹಿರಿಯರ ಜೀವನಕ್ಕೂ ಆಧಾರವಾಗುತ್ತಾರೆ. ಸ್ವ ಕಾರ್ಯ, ಸಮಾಜದ ಕಾರ್ಯ ಎರಡನ್ನೂ ನಿಭಾಯಿಸುತ್ತಾರೆ. ಮತ್ತೆ ನಿಮ್ಮಗಳ ಸಹಾಯ ಕೇಳುವ ಪರಿಸ್ಥಿತಿ ಬರಲಿಕ್ಕಿಲ್ಲ. ಆಶ್ರಮ Financially independent ಆಗುವ ಕನಸು ಈಗ ಶಾಂತಿವನದ ಮೂಲಕ ಈಡೇರಲಿದೆ.

ಇನ್ನು ಶಾಂತಿವನದ ಬಗ್ಗೆ

ನನ್ನ ಸುಯೋಗಾಶ್ರಯದ ಹಿಂಬದಿಯ ಜಾಗದಲ್ಲಿದ್ದ ಹಸಿರಿನ ನಡುವೆ ಹದಿಮೂರು ಸಿಂಗಲ್- ಡಬ್ಬಲ್ ರೂಮುಗಳನ್ನು ಸೀನಿಯರ್ ಸ್ನೇಹಿ ಅಂಟಿಕೊಂಡಂತೆ ಬಚ್ಚಲ ಮನೆ, ಟಾಯ್ಲೆಟ್ ಗಳೊಂದಿಗೆ ನಿರ್ಮಿಸಿದ್ದೇವೆ. ಸುಂದರ ನೋಟ, cafetaria ದಲ್ಲಿ ಕೆಲವೇ ಜನ ಆರಾಮಾಗಿ ಕುಳಿತು ಶುಚಿ ರುಚಿಯಾದ ಸಸ್ಯಾಹಾರಿ ತಿಂಡಿ- ಊಟ, ಚಂದದ ಗಾರ್ಡನಲ್ಲಿ ಚೆಸ್, ಕೇರಂ, ಉಯ್ಯಾಲೆಯ ಆಟ. ಯೋಗ, ಧ್ಯಾನ, ಅನುಷ್ಠಾನಗಳ ಕೂಟ ಆರೋಗ್ಯಕ್ಕಾಗಿ ನಡೆಯಲು ವಾಕಿಂಗ್ ಪಾತ್, ವ್ಯಾಯಾಮ ಮಾಡುವವರಿಗೆ open air ಜಿಮ್…. ಆರೋಗ್ಯದ ಬಗ್ಗೆ ಸ್ಪೆಷಲ್ ಕಾಳಜಿ. ನಿಮ್ಮದೇ ಒಂದು ಚಿಕ್ಕ ಗ್ರೂಪ್ ಮಾಡಿಕೊಂಡು ಚಟುವಟಿಕೆಯಿಂದ ದಿನಕಳೆಯಲು ಶಾಂತಿವನದಲ್ಲಿ ವ್ಯವಸ್ಥೆಯಿದೆ. ನಿಮ್ಮ ಗಾಡಿಯನ್ನು ಇಟ್ಟುಕೊಳ್ಳಬಹುದು, ಹೊರಗೆ ಓಡಾಡಬಹುದು. ನೀವು ಸ್ವತಂತ್ರರಾಗಿರುತ್ತೀರಿ.

ಇಲ್ಲಿ ಡಬಲ್ ರೂಮಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ವಾಸಿಸಬಹುದು. ತಾಯಿ ಮಗಳು, ಅಥವಾ ನಿಮ್ಮ ಗೆಳೆಯ / ಗೆಳತಿಯರೊಂದಿಗೂ ಇರಬಹುದು. ದೂರದಲ್ಲಿರುವ ಮಕ್ಕಳು ಅನಿವಾರ್ಯ ಪ್ರಸಂಗದಲ್ಲಿ ತಂದೆತಾಯಿಗಳನ್ನು ಇಲ್ಲಿ ಬಿಡಬಹುದು. ಇಲ್ಲಿಗೆ ಬಂದು ಅವರನ್ನು ಭೇಟಿಯಾಗಬಹುದು. ಅವರೊಂದಿಗೆ ಸಮಯ ಕಳೆಯಬಹುದು. ಮರೆವಿನಲ್ಲಿರುವವರನ್ನು ಅಸಿಸ್ಟೆಂಟ್ ಜೊತೆ ಬಿಡಬಹುದು.

ಇದು ವೃದ್ಧಾಶ್ರಮವಲ್ಲ. ಕಾರಣ ಇಲ್ಲಿ ಕಟ್ಟುಪಾಡುಗಳು ಕಮ್ಮಿ. ಇದು ರೆಸಾರ್ಟ್ ಥರ ಕಂಡರೂ ಒಂದೆರಡು ದಿನ ಉಳಿದು ಹೋಗುವ ರೆಸಾರ್ಟ್, homestay ಅಲ್ಲ. ಸಾರ್ವಜನಿಕರಿಗೆ ಇಲ್ಲಿ ಪ್ರವೇಶವಿರುವುದಿಲ್ಲ. ನನ್ನ ಹದಿನೈದು ವರ್ಷಗಳ ಅನುಭವದಿಂದ ನಿಮ್ಮ ವಿಶ್ರಾಂತ ಜೀವನವನ್ನು ಪ್ರಕೃತಿಯ ಮಡಿಲಲ್ಲಿ ಸುಂದರವಾಗಿಸುವ ಒಂದು ಪ್ರಯತ್ನ ಹಾಗೇ ನಿಮ್ಮ ಸಹಾಯದಿಂದ ಇನ್ನೂ ಕೆಲವು ಅನಾಥ ವೃದ್ಧ ಜೀವಗಳನ್ನು ಸಾಕುವ ಪ್ರಯತ್ನ!

ಇದು ಕೈ ಹಿಡಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ತೊಂದರೆಯಿಲ್ಲ. ದೇವರು ತೋರಿಸಿದ ದಾರಿಯಲ್ಲಿ ಇಲ್ಲಿಯವರೆಗೆ ಪ್ರಾಮಾಣಿಕವಾಗಿ ನಡೆದಿದ್ದೇನೆ. ನಮ್ಮ ಜೀವನಕ್ಕೆ ನನ್ನ ಯಜಮಾನರ ಪ್ರಾಮಾಣಿಕ ಸಂಪಾದನೆಯಿದೆ. ಇದು ನಮ್ಮ ಖುಷಿಗೆ ನಾವು ಕಂಡುಕೊಂಡ ಮಾರ್ಗ. ಮಾನವಜನ್ಮವನ್ನುಸಾರ್ಥಕಗೊಳಿಸುವ ಪ್ರಯತ್ನ ಅಷ್ಟೇ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :  7892170940

ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಅಪಾರ್ಟ್ಮೆಂಟ್, ಫ್ಯಾಮಿಲಿ ಮೊದಲಾದ ಗ್ರೂಪ್ ಗಳಲ್ಲಿ ಶೇರ್ ಮಾಡಿ. ಒಳ್ಳೆಯ ಜನ ಬರಲಿ.

ಧನ್ಯವಾದಗಳೊಂದಿಗೆ
ನಿಮ್ಮ ಪ್ರೀತಿಯ


  • ಲತಿಕಾ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW