ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಪ್ರಾರಂಭದ 15 ರಿಂದ 20 ವರ್ಷಗಳು ಪಾಲಕರ ಕೈಯಲ್ಲಿ ಇರುತ್ತದೆ. ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಂಡರೆ ಮುಂದೆ ಅವರ ಬದುಕು ಒಳ್ಳೆಯ ದಾರಿಯಲ್ಲಿರುತ್ತದೆ. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ನಿಮ್ಮ ಮನವ ಸಂತೈಸಿಕೊಳ್ಳಿ’ ತಪ್ಪದೆ ಮುಂದೆ ಓದಿ…
ಆ ವ್ಯಕ್ತಿ ಯಾವ ವಸ್ತುವನ್ನು ಮುಟ್ಟಿದರೂ ನೋವಿನಿಂದ ಒದ್ದಾಡುತ್ತಿದ್ದ. ಕೈಯಲ್ಲಿ ಪೆನ್ನು ಹಿಡಿಯಲು ಕೂಡ ಸಾಧ್ಯವಾಗದ, ತನ್ನ ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗದೆ ಹೋಯಿತು. ಅಂತಿಮವಾಗಿ ವೈದ್ಯರ ಬಳಿ ಆತ ತೆರಳಿದ. ನಾನು ಯಾವುದೇ ವಸ್ತುಗಳನ್ನು ಮುಟ್ಟಿದರೂ ಎತ್ತಿಕೊಳ್ಳಲು ಪ್ರಯತ್ನಿಸಿದರೂ ನನ್ನಿಂದ ಸಾಧ್ಯವಾಗುತ್ತಿಲ್ಲ ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ವೈದ್ಯರಲ್ಲಿ ದೂರು ಹೇಳಿದ.
ಕೂಲಂಕುಶವಾಗಿ ಪರಿಶೀಲಿಸಿದ ವೈದ್ಯರು ಅಂತಿಮವಾಗಿ ಎಕ್ಸ್ ರೆ ತೆಗೆದು ನೋಡಿದಾಗ ಆ ವರದಿಯನ್ನು ನೋಡಿ ನಗಬೇಕೋ ಅಳಬೇಕೋ ಎಂದು ಅವರಿಗೆ ತಿಳಿಯದಾಯಿತು . ಕಾರಣ ಇಷ್ಟೇ.. ನೋವಿನಿಂದ ನರಳುತ್ತಿದ್ದ ವ್ಯಕ್ತಿಗೆ ಖುದ್ದು ತನ್ನ ಕೈಬೆರಳು ತಿರುಚಿದಂತೆ ಆಗಿ ಮುರಿದು ಹೋಗಿದ್ದು ಶಕ್ತಿ ಕಳೆದುಕೊಂಡಿದೆ ಎಂದು ಅರಿವಾಗಿರಲಿಲ್ಲ. ದೋಷವನ್ನು ತನ್ನಲ್ಲಿ ಇಟ್ಟುಕೊಂಡು ಯಾವ ವಸ್ತುವನ್ನು ಮುಟ್ಟಿದರೂ ಕೈ ಬೆರಳಿಗೆ ನೋವಾಗುತ್ತದೆ ಎಂದು ಹೇಳುವ ಇಂತಹ ಮೂರ್ಖ ಜನರು ನಮ್ಮ ಸಮಾಜದಲ್ಲಿ ಸಾಕಷ್ಟು ಇದ್ದಾರೆ.

ಫೋಟೋ ಕೃಪೆ : ಅಂತರ್ಜಾಲ
ಬದುಕಿನಲ್ಲಿ ಬಹಳಷ್ಟು ವಿಷಯಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ನಾವೆಲ್ಲರೂ ಬದುಕಿರುವ ಸಮಾಜದ ಇತಿಮಿತಿಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡರೆ ನಾವು ಬದುಕಿನಲ್ಲಿ ಹೆಚ್ಚಿನದನ್ನು ಸಾಧಿಸದಿದ್ದರೂ ಪರವಾಗಿಲ್ಲ . ಆದರೆ ನೋಡುವವರ ಕಣ್ಣಿಗೆ ವಿಚಿತ್ರವಾಗಿ ತೋರುವುದಿಲ್ಲ.
ತನ್ನ ಬದುಕಿನ ಎಲ್ಲಾ ತೊಂದರೆಗಳಿಗೆ ಬೇರೊಬ್ಬರನ್ನು ಹೊಣೆ ಮಾಡುವ, ಅನುಮಾನಿಸುವ, ಅವರ ಮೇಲೆ ಗೂಬೆ ಕೂರಿಸುವ ಮನಸ್ಥಿತಿಯನ್ನು ಹೊಂದಿರುವ ಬಹುತೇಕ ಜನರು ಅವರಿವರಿಂದ ತಮ್ಮ ಬದುಕು ಹಾಳಾಗುತ್ತದೆ ಎಂದು ಭಾವಿಸಿ ಅವರನ್ನು ದೂಷಿಸುತ್ತಾರೆ ಆದರೆ ಅವರಿಗೂ ಗೊತ್ತು ತಮ್ಮ ಬದುಕಿನ ಇಂದಿನ ಪರಿಸ್ಥಿತಿಗೆ ತಮ್ಮ ಬದುಕಿನ ರೀತಿ, ತಾವು ತೆಗೆದುಕೊಂಡ ನಿರ್ಧಾರಗಳು, ಅಪಕ್ವ ನಿಲುವುಗಳು ಕಾರಣ ಎಂದು. ಇದನ್ನು ಗೊತ್ತಿದ್ದು ಕೂಡ ಅವರು ಬಾಹ್ಯವಾಗಿ ಒಪ್ಪಿಕೊಳ್ಳುವುದಿಲ್ಲ.
ನಿಜ, ಎಲ್ಲರ ಬದುಕು ಒಂದೇ ರೀತಿಯ ವೇಗದಲ್ಲಿ, ಅಷ್ಟೇ ಸರಳವಾಗಿ ಇರುವುದಿಲ್ಲ. ಕೆಲ ಮಟ್ಟಿಗಿನ ಅನಿಶ್ಚಿತತೆ ಎಲ್ಲರಲ್ಲೂ ತಾಂಡವವಾಡುತ್ತಿರುತ್ತದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಪ್ರಾರಂಭದ 15 ರಿಂದ 20 ವರ್ಷಗಳು ಪಾಲಕರ ಕೈಯಲ್ಲಿ ಇರುತ್ತದೆ. ನಿಜ ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಂಡರೆ ಮುಂದೆ ಅವರ ಬದುಕಿನ ಹಾದಿ ಚಿತ್ರ ವಿಚಿತ್ರ ತಿರುವುಗಳಲ್ಲಿ ಸಾಗದೆ ಸಮಾಜ ಒಪ್ಪಿತ ಮಾರ್ಗಗಳಲ್ಲಿ ಸಾಗುತ್ತದೆ. ನಾವು ಬದುಕಿರುವುದು ಈ ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ಎಂಬ ಕಾರಣಕ್ಕೆ ಬಹುತೇಕ ಜನರು ಈ ಮಾರ್ಗವನ್ನೇ ಆಯ್ದುಕೊಳ್ಳಲು . ಇದು ಸಾಧುವೂ ಹೌದು.
ಇದರಲ್ಲಿ ಸಾಧಕ ಹೆಚ್ಚಾಗಿ ಆಗದಿದ್ದರೂ ಪರವಾಗಿಲ್ಲ ಬಾಧಕಗಳು ಕಡಿಮೆ. ನಮ್ಮನ್ನು ನೋಡುವ ಎಲ್ಲರೂ ನಮ್ಮನ್ನು ಮೆಚ್ಚದೆ ಹೋದರೂ ಪರವಾಗಿಲ್ಲ ನನಗೆ ತಿಳಿದಂತೆ ನಾನು ಬದುಕುತ್ತೇನೆ ಎಂಬ ದಾಷ್ಟಿಕತೆಯಿಂದ ಬದುಕುವವರು ತಮ್ಮ ನಿಲುವುಗಳಿಗೆ ಬದ್ಧರಾಗಿ ಒಳ್ಳೆಯ ಮಾರ್ಗವನ್ನು ಅನುಸರಿಸಿದರೆ ಅದರಲ್ಲಿ ತಪ್ಪಿಲ್ಲ.. ಇಂದಲ್ಲ ನಾಳೆಯಾದರೂ ಸಮಾಜ ಅವರ ವರ್ತನೆಗಳನ್ನು ಒಪ್ಪಿಕೊಳ್ಳುತ್ತದೆ.
ಮತ್ತೆ ಕೆಲವರು ತಮ್ಮ ಬದುಕಿನಲ್ಲಿ ತಾವು ತೆಗೆದುಕೊಳ್ಳುವ ಆತುರದ ಹಾಗೂ ದುಡುಕಿನ ನಿರ್ಧಾರಗಳಿಂದ ಒದ್ದಾಡುತ್ತಾರೆ. ಸಾಮಾಜಿಕ,ಆರ್ಥಿಕ, ಕೌಟುಂಬಿಕ ಪರಿಸ್ಥಿತಿಗಳು ಎಷ್ಟೋ ಬಾರಿ ಅವರ ನಿಲುಕಿನಿಂದ ದೂರವಾಗಿದ್ದು ವಿಭಿನ್ನವಾದ ತೊಂದರೆಗಳಿಗೆ ಅವರು ಸಿಲುಕಿಕೊಳ್ಳುತ್ತಾರೆ. ಆದರೆ ಇದೆಲ್ಲಕ್ಕೂ ತಮ್ಮದೇ ತಪ್ಪುಗಳು ಒಂದು ಮಟ್ಟಿಗೆ ಕಾರಣ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ.

ಫೋಟೋ ಕೃಪೆ : ಅಂತರ್ಜಾಲ
ಕುಣಿಯಲು ಬಾರದಿದ್ದರೆ ನೆಲ ಡೊಂಕು ಎಂಬ ಮಾತಿನಂತೆ ತಮ್ಮ ಬದುಕಿನ ಎಲ್ಲಾ ಅವಘಡಗಳಿಗೆ ಪರರ ಮೇಲೆ ತಪ್ಪು ಹೊರಿಸುವ ಅವರು ತಮ್ಮ ಬದುಕಿನಲ್ಲಿ ಆಗುವ ಒಳ್ಳೆಯ ವಿಷಯಗಳಿಗೆ ಬೇರೆಯವರು ಕಾರಣ ಎಂದು ಎಂದಾದರೂ ಹೇಳುತ್ತಾರೆಯೇ…ಖಂಡಿತವಾಗಿಯೂ ಇಲ್ಲ.
ಒಬ್ಬರು ನಮ್ಮ ಒಳಿತಿಗಾಗಿ ಏನನ್ನೂ ಮಾಡುವುದಿಲ್ಲ ಎಂದು ಹೇಳುವುದಾದರೆ ನಮ್ಮ ಕೆಡುಕಿಗೆ ಅವರ ಪಾತ್ರ ಯಾವ ರೀತಿ ಕಾರಣವಾಗುತ್ತದೆ ಎಂಬ ಅರಿವು ಕೂಡ ಇರಬೇಕಲ್ಲವೇ?
ಅಪವಾದ ಹೊರಿಸುವುದು ಸುಲಭ ಆದರೆ ಆ ಅಪವಾದವನ್ನು ಸಾಬೀತುಪಡಿಸಲು ಅವಶ್ಯಕವಾದ ಸಾಕ್ಷಿಗಳು ಕೂಡ ಬೇಕಲ್ಲವೇ? ಎಲ್ಲವನ್ನೂ ಎಲ್ಲರನ್ನೂ ಒಪ್ಪಿಸಬಹುದು ಆದರೆ ಖುದ್ದು
ತಮ್ಮ ಮನಸ್ಸಾಕ್ಷಿಯನ್ನು ಒಪ್ಪಿಸಲು ಸಾಧ್ಯವೇ ? ಉಹೂಂ ಖಂಡಿತವಾಗಿಯೂ ಅದು ಸಾಧ್ಯವಾಗುವುದಿಲ್ಲ.
ಮತ್ತೆ ಕೆಲವೊಮ್ಮೆ ತಮ್ಮದೇ ಹುಚ್ಚು ಮನಸ್ಸಿನ ಕಲ್ಪನೆಗಳನ್ನು ನಿಜವೆಂದು ಭ್ರಮಿಸಿ ಅದನ್ನೇ ನಂಬುತ್ತಾ ಆಗುತ್ತಾರೆ. ಆರಂಭಿಕ ಹಂತದಲ್ಲಿ ಕೇವಲ ಅನುಮಾನ ವಾಗಿರುವ ಈ ರೀತಿಯ ಭ್ರಮೆಗಳು ನಂತರದ ದಿನಗಳಲ್ಲಿ ನಿಜವೇ ಇರಬಹುದು ಎಂದು ಅವರು ಭಾವಿಸುವ ಮಟ್ಟಿಗೆ ಅವರ ಮಾನಸಿಕ ಸ್ಥಿತಿಯನ್ನು ಆಳತೊಡಗುತ್ತವೆ… ಸೂಕ್ತ ಸಮಯದಲ್ಲಿ ಎಚ್ಚರಗೊಳ್ಳದೆ ಹೋದರೆ ಈ ಮಾನಸಿಕ ಸ್ಥಿತಿಯೇ ಮುಂದೆ ಅವರಲ್ಲಿ ದೈಹಿಕ ತೊಂದರೆಯಾಗಿ ಮಾರ್ಪಡುತ್ತದೆ.
ಅವರ ಮನಸ್ಸಿನ ಎಲ್ಲಾ ಒತ್ತಡ, ಭಯ, ಆತಂಕಗಳ ಪರಿಣಾಮವಾಗಿ ಅವರಲ್ಲಿ ಉಂಟಾಗುವ ಮನೋದೈಹಿಕ ತೊಂದರೆಗಳು ಅವರನ್ನು ಇನ್ನಿಲ್ಲದಂತೆ ಕಾಡಿದಾಗ ಅದಕ್ಕೂ ಕೂಡ ಬೇರೆಯವರನ್ನು ಹೊಣೆಯಾಗಿಸುತ್ತ ಅವರು ಸಾಗುತ್ತಾರೆ. ಅವರ ಪಾಲಿಗೆ ಬೇರೆಯವರು ಇರುವುದೇ ತಮ್ಮ ಬದುಕನ್ನು ಹಾಳು ಮಾಡಲು ಎಂಬ ಮಾನಸಿಕತೆ ಉಂಟಾಗುತ್ತದೆ.
ಆದರೆ ಒಂದೊಮ್ಮೆ ಆರಂಭದಲ್ಲಿ ಅಥವಾ ಮಧ್ಯದಲ್ಲಿಯೇ ಆಗಲಿ ಹೀಗೆ ಎಲ್ಲರನ್ನು ಅನುಮಾನಿಸುತ್ತಾ ತಮ್ಮ ಮಾತುಗಳಿಗೆ ಸಹಮತ ತೋರುವವರನ್ನು ಸರಿಯಾದವರೆಂದೂ, ಒಪ್ಪದೇ ಇರುವವರ ಕುರಿತು ತಪ್ಪು ಅಭಿಪ್ರಾಯ ಹೊಂದುವುದು ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ಮಾತನಾಡುತ್ತಾರೆ.
ಅಂತಹವರಿಗೆ ಸೂಕ್ತ ಸಮಾಲೋಚನೆಯ ಅಗತ್ಯವಿದೆ. ನುರಿತ ಮಾನಸಿಕ ಸಮಾಲೋಚನಾ ತಜ್ಞರ ಜೊತೆಗಿನ ಸಮಾಲೋಚನೆಯಲ್ಲಿ ಅವರ ಮಾನಸಿಕ ಸ್ಥಿತಿಗತಿಗಳಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆಯನ್ನು ನಾವು ಕಾಣಬಹುದು.ಇದಕ್ಕೆ ಅವರು ಮನಸ್ಸು ಮಾಡಬೇಕಷ್ಟೇ.
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸಿದಾದೆನು ನಮ್ಮೊಳಗೆ ಎಂದು ನಮ್ಮ ಕನ್ನಡದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಹೇಳಿದ್ದಾರೆ. ಅವರ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಮನದಲ್ಲಿರುವ ಪ್ರೀತಿ ಸ್ನೇಹಗಳೇ ನಿಜವಾದ ದೈವತ್ವಕ್ಕೆ ಹಾದಿ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಕವಿ ಈ ಕವನದಲ್ಲಿ ನಮ್ಮ ಬದುಕನ್ನು ಸ್ವರ್ಗವಾಗಿಸಿಕೊಳ್ಳುವುದು ನರಕವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ನಮ್ಮ ಒಳಗಿನ ತಿಳಿಯನ್ನು ಕಲಕದೇ ಇದ್ದರೆ ನಾಲಿಗೆಗೆ ಅಮೃತದ ಸವಿಯಿದೆ ಎಂದು ಹೇಳುವ ಕವಿಗಳು ತನ್ನ ಅಹಂಕಾರದ ಕೋಟೆಯಲ್ಲಿ ಬಂಧಿಯಾಗಿರುವ ಮನುಷ್ಯ ಸತ್ಯವನ್ನು ಅರಿಯದೆ ಹೋಗುತ್ತಾನೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆ ಅತ್ಯ ಗತ್ಯ ಎಂಬ ನಿಲುವನ್ನು ಕವಿ ದೃಢಪಡಿಸುತ್ತಾರೆ. ನಮ್ಮ ಸುತ್ತಲಿನ ಜನರ ಪ್ರೀತಿ ವಿಶ್ವಾಸವನ್ನು ಹೊಂದಲು ನಾವು ಕೂಡ ಅಂತಹದ್ದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೋಣ….ಅಂತಹ ಹೊಂದಾಣಿಕೆ ನಮ್ಮೆಲ್ಲರಲ್ಲೂ ಹಾಸು ಹೊಕ್ಕಾಗಿರಲಿ ಎಂಬ ಆಶಯದೊಂದಿಗೆ
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.
