ಕನ್ನಡ ನಮ್ಮ ಅಂತರಂಗದ ಭಾಷೆಯಾದರೆ, ಹಿಂದಿ ಕೂಡ ನಮ್ಮ ಜೀವ ಭಾವಗಳನ್ನು ಅರಳಿಸುವ ಭಾಷೆ. ಎಷ್ಟೋ ಬಾರಿ ಸರಳವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಭಾವನೆಗಳನ್ನು ನಾವು ಹಿಂದಿ ಭಾಷೆಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದು ಅದರ ಸಾಮರ್ಥ್ಯವನ್ನು ತೋರುತ್ತದೆ. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ ತಪ್ಪದೆ ಮುಂದೆ ಓದಿ…
ನಮ್ಮ ಕರ್ನಾಟಕದ ಗಡಿ ಭಾಗಗಳಾದ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಾಷೆಗಳನ್ನು ಕಲಿಯಬೇಕು, ಅಲ್ಲಿಯ ಸಾಹಿತ್ಯವನ್ನು ಓದಬೇಕು ಚಲನಚಿತ್ರಗಳನ್ನು ನೋಡಬೇಕು, ಸಾಂಸ್ಕೃತಿಕ ವೈವಿಧ್ಯವನ್ನು ಅರಿಯಬೇಕು ಎಂಬುದು ನನ್ನ ಹಲವಾರು ವರ್ಷಗಳ ಕನಸು ಆದರೆ ಇಂದಿಗೂ ಕೂಡ ಅದು ನನಸಾಗಿಲ್ಲ. ಮರಾಠಿ ಭಾಷೆಯ ಚಲನ ಚಿತ್ರಗಳು, ಕಥೆಗಳು, ಪುಸ್ತಕಗಳು ಅಲ್ಲಿಯ ಸಂತರ ಕೀರ್ತನೆಗಳು, ಅವರ ಬದುಕಿನ ಕಥೆಗಳು ನಮಗೆ ಅತ್ಯಂತ ಅಪ್ಯಾಯಮಾನವಾದದ್ದು. ಬಹುಷ್ಯ ಒಂದೊಮ್ಮೆ ಕರ್ನಾಟಕದ ಭಾಗವೇ ಆಗಿದ್ದ ಅಲ್ಲಿ ನಮ್ಮದೇ ಜನರ ಮೂಲ ಬೇರುಗಳು ಇರುವುದು ಇದಕ್ಕೆ ಕಾರಣವಿರಬಹುದು ಅಥವಾ ಮರಾಠಿ ಭಾಷೆಯ ಜನರು ಇಂದಿಗೂ ಕೂಡ ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಕುರಿತಾದ ಅಭಿಮಾನ ನಮ್ಮಲ್ಲಿ ಆ ಭಾವನೆಯನ್ನು ಮೂಡಿಸಬಹುದು. ಇನ್ನು ಕೆಲವು ತಮಿಳು ಚಲನಚಿತ್ರಗಳು ಅಲ್ಲಿಯ ಲೇಖಕರ ಅನುವಾದಿತ ಕೃತಿಗಳು ಕಾದಂಬರಿಗಳು ನಮ್ಮಲ್ಲಿ ಆ ಭಾಷೆಯ ಕುರಿತು ಕಲಿಯಬೇಕು ಎಂಬ ಆಶಯವನ್ನು ಹುಟ್ಟಿಸಿರಬಹುದು.
ಈ ಮಾತನ್ನು ಇಲ್ಲಿ ಹೇಳಲು ಕಾರಣ ಯಾವುದೇ ಒಂದು ಭಾಷೆಯನ್ನು ನಾವು ಶಾಲೆಗಳಲ್ಲಿ ಕಲಿತ ರೀತಿಯಲ್ಲಿ ಬಾಹ್ಯವಾಗಿ ಕಲಿಯಲು ಸಾಧ್ಯವೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಮಗೆ ಐದನೇ ತರಗತಿಯಲ್ಲಿ ಇಂಗ್ಲಿಷ್ ವಿಷಯ ಹಾಗೂ ಆರನೇ ತರಗತಿಯಲ್ಲಿ ಹಿಂದಿ ವಿಷಯಗಳು ವರ್ಣಮಾಲೆಯಿಂದ ಹಿಡಿದು ಆ ಭಾಷೆಯ ಸೊಗಡು, ಸಾಹಿತ್ಯ, ಕವನ, ಕಾವ್ಯ, ನಾಟಕಗಳವರೆಗೆ ಅಲ್ಲಿಯ ವೈವಿಧ್ಯಮಯ ಸಂಸ್ಕೃತಿಯ ಕುರಿತು ಪರಿಚಯವನ್ನು ಪ್ರತಿ ತರಗತಿಯಲ್ಲಿಯೂ ಹಂತ ಹಂತವಾಗಿ ಮಾಡಿಕೊಟ್ಟಿದೆ. ಇಂದು ನಾವು ನಮ್ಮ ರಾಜ್ಯವನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಗೆ ಹೋದಾಗ ನಮ್ಮ ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡುವ ಮೂಲಕ ಅಲ್ಲಿಯ ಜನರೊಂದಿಗೆ ಸಂವಹನ ಮಾಡುತ್ತೇವೆ ಇಂಗ್ಲಿಷ್ ಕೂಡ ನಮಗೆ ಸರಾಗವಾಗಿ ಮಾತನಾಡಲು ಬರದಿದ್ದರೂ ಕೂಡ ಮ್ಯಾನೇಜ್ ಮಾಡಬಲ್ಲೆವು ಎಂಬಷ್ಟು ಸಾಧ್ಯತೆಗಳನ್ನು ತಂದುಕೊಟ್ಟಿದೆ. ಇಡೀ ರಾಷ್ಟ್ರವನ್ನು ಒಂದುಗೂಡಿಸಿರುವ ಹಿಂದಿ ಭಾಷೆ ನಮ್ಮ ಪಠ್ಯದ ಭಾಗವಾಗಿರುವ ಕಾರಣ ಔಪಚಾರಿಕವಾಗಿ ನಮಗೆ ಕಲಿಯಲು ಸಿಕ್ಕ ಕಾರಣವೇ ಹಿಂದಿಯನ್ನು ಕಲಿಯಲು ಸಾಧ್ಯವಾಯಿತು ಎಂಬುದು ಸತ್ಯವಾದದ್ದು ಅಲ್ಲವೇ.
ವಿದೇಶಗಳಲ್ಲಾದರೂ ಅಷ್ಟೇ ತಮ್ಮ ದೇಶದ ಭಾಷೆಯ ಜೊತೆಗೆ ಯಾವುದಾದರೂ ಒಂದು ವಿದೇಶಿ ಭಾಷೆಯನ್ನು ಕಲಿಯಲು ಮಕ್ಕಳಿಗೆ ಅವಕಾಶ ನೀಡಿದ್ದು ಚಿಕ್ಕಂದಿನಲ್ಲಿಯೇ ಮಕ್ಕಳು ವಿವಿಧ ಭಾಷೆಗಳ ಸಂಸ್ಕೃತಿಗಳ ಅರಿವನ್ನು ಹೊಂದಿರಲಿ ಎಂಬ ಕಾರಣಕ್ಕೆ.

ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕೆಲವು ಶಾಲೆಗಳಲ್ಲಿ ಕಲಿಯುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ ಅಷ್ಟೇ ಏಕೆ, ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿಯೂ ಕೂಡ ಒಂದು ವಿದೇಶಿ ಭಾಷೆಯಾಗಿ ಯಾವುದಾದರೂ ಒಂದು ಅಂಗೀಕೃತ ಭಾಷೆಯನ್ನು ಕಲಿಯುವ ಅವಕಾಶವನ್ನು ನೀಡಿದ್ದಾರೆ.
ಇನ್ನು ನಾವು ಹೈಸ್ಕೂಲಿನಲ್ಲಿದ್ದಾಗ ನಮ್ಮ ಸಂಗೀತದ ಗುರುಗಳು ನಮಗೆ ತೆಲುಗು, ತಮಿಳು ಭಾಷೆಯ ಪದ್ಯಗಳು ರಾಗವಾಗಿ ಹಾಡಲು ಕಲಿಸಿದ್ದರಲ್ಲದೆ ಉತ್ತರ ಭಾರತದ ಅಸ್ಸಾಮಿ ಭಾಷೆಯ ಏ ಮಾತಿರೆ ಮೋರೋ ಮೋತೆ ಮಾತಿಕೆ ಸೋಮೇಲೊ ಎಂಬ ಗೀತೆಯನ್ನು ಕೂಡ ಕಲಿಸಿದ್ದರು.
ಹೀಗೆಲ್ಲಾ ಹಾಡುಗಳನ್ನು ಕಲಿಸಲು ಅಂದು ಅವರು ಕಾರಣಗಳನ್ನು ನೀಡಿಲ್ಲವಾದರೂ ಬಹುಶಹ ಬೇರೆ ಬೇರೆ ಭಾಷೆಗಳ ಪರಿಚಯ ನಮಗಿರಲಿ ಎಂಬುದು ಇದರ ಹಿಂದಿನ ಉದ್ದೇಶ ಆಗಿರಬಹುದು ಎಂಬುದು ನನ್ನ ಊಹೆ. ಹಮ್ ಹೊಂಗೆ ಕಾಮಿಯಾಬ್, ಹಿಂದ್ ದೇಶ ಕೆ ಸಿಪಾಯಿ ಸಬಿ ಜನ ಏಕ ಹೈ ರಂಗ ರೂಪ ವೇಷ ಭಾಷಾ ಚಾಹೇ ಅನೇಕ ಹೈ, ಏ ಮೇರೆ ವತನ್ ಕೆ ಲೋಗೋ ಎಂಬ ಗೀತೆಗಳಲ್ಲಿ ನಾವು ಭಾರತ ಮಾತೆಯನ್ನು ಕಂಡುಕೊಂಡಿದ್ದೇವೆ ವಂದೇ ಮಾತರಂನ ಝೇಂಕಾರದಲ್ಲಿ ನಾವು ನಮ್ಮ ಭಾರತೀಯ ಅಸ್ಮಿತೆಯನ್ನು ಗುರುತಿಸಿಕೊಂಡಿದ್ದೇವೆ.
ವಿದೇಶಿ ಭಾಷೆಯಾದ ಅಂತರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದೆ, ನಮ್ಮ ಭವಿಷ್ಯದಲ್ಲಿ ಆ ಭಾಷೆಯ ಮೂಲಕ ಸಂವಹನ ಹಾಗೂ ಔದ್ಯೋಗಿಕ ಅವಕಾಶಗಳನ್ನು ಪಡೆದುಕೊಳ್ಳುತ್ತೇವೆ, ಜಂಟಲ್ ಮನ್ ಲ್ಯಾಂಗ್ವೇಜ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಅನಿವಾರ್ಯವಾಗಿಯಾದರೂ ನಾವು ಅದನ್ನು ಕಲಿಯಲೇಬೇಕು ಎಂಬ ಒಂದೇ ಕಾರಣಕ್ಕೆ ಇಂಗ್ಲಿಷ್ ಭಾಷೆಯನ್ನು ನಾವು ಅಪ್ಪಿಕೊಳ್ಳುವುದಾದರೆ ನಮ್ಮ ರಾಷ್ಟ್ರೀಯ ಭಾಷೆ ಎಂದು ಗುರುತಿಸಲ್ಪಟ್ಟ ರಾಜ್ಯ ರಾಜ್ಯಗಳ ನಡುವಿನ ಸಂವಹನವನ್ನು ಹೆಚ್ಚಿಸುವ ನಮ್ಮೆಲ್ಲರನ್ನು ಒಗ್ಗೂಡಿಸುವ ಹಿಂದಿ ಭಾಷೆ ನಮ್ಮ ಮಕ್ಕಳಿಗೆ ಏಕೆ ಬೇಡ ?
ಕನ್ನಡ ನಮ್ಮ ಅಂತರಂಗದ ಭಾಷೆಯಾದರೆ ಹಿಂದಿ ಕೂಡ ನಮ್ಮ ಜೀವ ಭಾವಗಳನ್ನು ಅರಳಿಸುವ ಭಾಷೆ. ಎಷ್ಟೋ ಬಾರಿ ಸರಳವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಭಾವನೆಗಳನ್ನು ನಾವು ಹಿಂದಿ ಭಾಷೆಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದು ಅದರ ಸಾಮರ್ಥ್ಯವನ್ನು ತೋರುತ್ತದೆ.
ಒಂದು ಭಾಷೆಯನ್ನು ಕಲಿಯುವ ಮೂಲಕ ಆ ಭಾಷೆಯ ಸಾಹಿತ್ಯಕ,ಸಾಂಸ್ಕೃತಿಕ,ವ್ಯವಹಾರಿಕ, ರಾಜಕೀಯ, ಐತಿಹಾಸಿಕ, ಪ್ರಾದೇಶಿಕ ಹೀಗೆ ಎಲ್ಲಾ ಕೋನಗಳಲ್ಲಿ ಔಪಚಾರಿಕವಾಗಿ ಅಧ್ಯಯನವನ್ನು ಕೈಗೊಳ್ಳಬಹುದು. ಇಂಗ್ಲಿಷ್ ತುಟ್ಟಿ, ಹಿಂದಿ ಬರುವುದಿಲ್ಲ ಎಂದರೆ ನಾವು ನಮ್ಮ ಮಾತೃಭಾಷೆಯೊಂದನ್ನೇ ಬಳಸಿಕೊಂಡು ಇತರ ಭಾಷಿಕರೊಂದಿಗೆ ಸಂವಹನ ಮಾಡಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯಾದರೂ ನಮಗೆ ಬೇರೆ ಭಾಷೆಗಳು ಬೇಕು. ನಿಜ ಎಲ್ಲ ಭಾಷೆಗಳನ್ನು ಎಲ್ಲ ಸಮಯದಲ್ಲಿಯೂ ಕಲಿಯಲು ಸಾಧ್ಯವಿಲ್ಲ ಆದರೆ ಔಪಚಾರಿಕವಾಗಿ ಕಲಿಯಲು ಸಾಧ್ಯವಿರುವಾಗಲೇ ಹಿಂದಿ ಭಾಷೆಯನ್ನು ಕಡೆಗಣಿಸುತ್ತಿದ್ದ ನಮ್ಮ ಜನರು ಇದೀಗ ಭಾಷೆಯ ಪರೀಕ್ಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡಿದಾಗ ಅಷ್ಟೇ ಮಾನ್ಯತೆಯನ್ನು ನೀಡಿ ಕಲಿಯಲು ಸಾಧ್ಯವಾಗುತ್ತದೆಯೇ ? ಹೇಗಾದರೂ ಆಗಲಿ ತ್ರಿಭಾಷಾ ಸೂತ್ರವು ರಾಜ್ಯ ರಾಜ್ಯಗಳನ್ನು ಸಂವಹನದ ಮೂಲಕ ಒಗ್ಗೂಡಿಸಲು ಅತ್ಯವಶ್ಯಕವಾಗಿದ್ದು ಅದರ ಕುರಿತು ನಮ್ಮ ಒಲವು ಇರದಿದ್ದರೆ ಬೇಡ ಆದರೆ ಕನಿಷ್ಠ ಭಾಷೆಯಾಗಿಯಾದರೂ ಅದನ್ನು ಕಲಿಯುವ ಮೂಲಕ ನಮ್ಮದಾಗಿಸಿಕೊಳ್ಳೋಣ.
ಏನಂತೀರಾ ?
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
