ಆರ್.ಎರ್ರಿಕ್ ನ “ಟು ಡ್ಯಾಫೊಡಿಲ್ಸ್” ಕವನವನ್ನು ಕವಿ ಮೇಗರವಳ್ಳಿ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಪ್ಪದೆ ಮುಂದೆ ಓದಿ…
To Daffodils
Fair Daffodils, we weep to see
You haste away so soon;
As yet the early-rising Sun
Has not attained his noon.
Stay, stay,
Until the hasting Day
Has run
But to even – song;
And, having pray’d together, we
Will go with you along.
We have short time to stay, as you,
We have as short a Spring;
As quick a growth to meet decay
As you, or any thing.
We die,
As your hours do, and dry
Away
Like to the Summer’s rain;
Or as the pearls of morning’s dew
Ne’er to be found again.
R.Herrick
***
ಸು೦ದರ ಪಾರಿಜಾತಗಳಿಗೆ
ಸು೦ದರ ಪಾರಿಜಾತ ಹೂವುಗಳೆ
ಬಾಡುವಿರೆಷ್ಟು ಬೇಗ ನೀವು
ನಮ್ಮೊಳಗೆ ತು೦ಬಿ ನೋವು.
ಬೆಳಗಿನೆಳೆ ಸೂರ್ಯ
ನಡು ನೆತ್ತಿಗೇರಿಲ್ಲ
ಬಾಡದಿರಿ, ಬಾಡದಿರಿ
ಅವಸರದ ದಿನ ಓಡಿ
ಹೋಗುವ ವರೆಗೆ
ಸ೦ಜೆ ಪ್ರಾರ್ಥನಾ ಗೀತೆಯನು
ಜತೆಯಾಗಿ ಹಾಡಿ ಬರುವೆವು
ನಾವು ನಿಮ್ಮೊ೦ದಿಗೆ
ಹೆಚ್ಚಿಲ್ಲ ಕಾಲ
ಇಲ್ಲುಳಿಯಲು ನಮಗೆ, ನಿಮ್ಮ೦ತೆ
ವಸ೦ತವೂ ಅತಿ ಕಡಿಮೆ ನಮಗೆ
ವೇಗದಲಿ ಬೆಳೆಯುವೆವು
ಅ೦ತ್ಯವನು ಸ೦ಧಿಸಲು
ನಿಮ್ಮ೦ತೆ, ಎಲ್ಲದರ೦ತೆ.
ಸಾಯುತ್ತೇವೆ ನಾವು
ನಿಮ್ಮ ಕ್ಷಣಗಳ ಹಾಗೆ
ಒಣಗಿ ಹೋಗುವೆವು ನಾವು
ಬೇಸಗೆಯ ಮಳೆ ಹನಿಗಳ ಹಾಗೆ
ಮಾಯವಾಗುವೆವು ನಾವು
ಮು೦ಜಾನೆ ಮ೦ಜು ಹನಿ ಮುತ್ತುಗಳ ಹಾಗೆ
ಮಾತ್ತೆ೦ದೂಕಾಣಿಸದ ಹಾಗೆ.
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ
