ಬ್ರಾಹ್ಮೀ ಮುಹೂರ್ತದಲ್ಲಿ ಜಗತ್ತು ಸ್ಥಿರತೆ ಹಾಗೂ ಶಾಂತತೆಯನ್ನು ಹೊಂದಿರುತ್ತದೆ. ಯಾವುದೇ ರೀತಿಯ ಚಿತ್ತ ಚಂಚಲತೆಗೆ ಅವಕಾಶ ಇರುವುದಿಲ್ಲ. ಆಧ್ಯಾತ್ಮಿಕ ಬೆಳವಣಿಗೆಯು ಒಳ್ಳೆಯ ಆರೋಗ್ಯ, ಉತ್ತಮ ಉತ್ಪಾದಕತೆ ಹಾಗೂ ಮಾನಸಿಕ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಬ್ರಾಹ್ಮಿ ಮುಹೂರ್ತ ಎಂಬ ಶುಭ ಸಮಯ’ ತಪ್ಪದೆ ಮುಂದೆ ಓದಿ…
ಸಾವಿರಾರು ವರ್ಷಗಳಿಂದ ನಮ್ಮ ಭರತ ಭೂಮಿಯಲ್ಲಿ ಋಷಿ ಮುನಿಗಳು,ಸಂತರು ಹಾಗೂ,ಸಾಧಕರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಮ್ಮ ದಿನವನ್ನು ಆರಂಭಿಸುತ್ತಿದ್ದರು. ಹಾಗೆ ಎದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವ ಮೂಲಕ ಮಾನಸಿಕ,ದೈಹಿಕ ಸ್ವಾಸ್ಥ್ಯವನ್ನು ಹಾಗೂ ನೆಮ್ಮದಿಯನ್ನು ಕಾಯ್ದುಕೊಳ್ಳುತ್ತಿದ್ದರು.
ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಎಂಬ ನಮ್ಮ ಸನಾತನ ಪರಂಪರೆಯ ಹಿಂದಿನ ಮಹತ್ವದ ಕುರಿತು ಅಷ್ಟಾಗಿ ನಮಗೆ ಗೊತ್ತಿಲ್ಲ. ಅತ್ಯಂತ ವಿಶೇಷವಾದ ಈ ಬ್ರಾಹ್ಮಿಮುಹೂರ್ತವನ್ನು ನಮ್ಮ ಸನಾತನ ಧರ್ಮವು ಪವಿತ್ರ ಹಾಗೂ ಶಕ್ತಿಶಾಲಿ ಸಮಯ ಎಂದು ಗೌರವಿಸುತ್ತದೆ. ಬ್ರಾಹ್ಮಿ ಮುಹೂರ್ತ, ಬ್ರಹ್ಮ ಮುಹೂರ್ತ ಎಂದೆಲ್ಲ ಕರೆಯಲ್ಪಡುವ ಈ ಸೃಷ್ಟಿ ಸಮಯವು ಮುಂಜಾನೆಯ ಸೂರ್ಯೋದಯಕ್ಕೆ 1 ಘಂಟೆ 36 ನಿಮಿಷಗಳ ಸಮಯದ ಮುನ್ನ ಆರಂಭವಾಗುತ್ತದೆ.
ಉದಾಹರಣೆಗೆ ಸೂರ್ಯೋದಯ ಆರು ಮೂವತ್ತಕ್ಕೆ ಆಗುತ್ತದೆ ಎಂದಾದರೆ ಬ್ರಾಹ್ಮಿ ಮುಹೂರ್ತವು ನಾಲ್ಕು ಗಂಟೆ 54 ನಿಮಿಷಕ್ಕೆ ಆರಂಭವಾಗುತ್ತದೆ. 48 ನಿಮಿಷಗಳ ಕಾಲ ಈ ಮುಹೂರ್ತ ಇರುತ್ತದೆ. ಋತುಗಳು ಹಾಗೂ ಕಾಲಮಾನಕ್ಕೆ ಅನುಸಾರವಾಗಿ ಈ ಸಮಯದಲ್ಲಿ ಬದಲಾವಣೆ ಆಗುತ್ತದೆ ಆದರೆ ಸಾಮಾನ್ಯವಾಗಿ ಮೂರು ಮೂವತ್ತರಿಂದ ಐದು ಮೂವತ್ತರವರೆಗಿನ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಹೇಳಲಾಗುತ್ತದೆ.
ಬ್ರಾಹ್ಮಿ ಮುಹೂರ್ತವು ಸಾಧು, ಸಂತ ಹಾಗೂ ಸಾಧಕರಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಕೂಡ ಅತ್ಯಂತ ಪ್ರಶಸ್ತ ಸಮಯವಾಗಿದ್ದು ಈ ಸಮಯದಲ್ಲಿ ಧ್ಯಾನ, ಜಪ-ತಪ, ಕಲಿಕೆ, ಓದು ಅಧ್ಯಯನ ಯೋಗ, ಪ್ರಾರ್ಥನೆ ಹಾಗೂ ಆತ್ಮ ಪರಿಶೋಧನೆಯ ಸಮಯ ಎಂದು ನಂಬಲಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ಬ್ರಾಹ್ಮೀ ಮುಹೂರ್ತವೇ ಏಕೆ ?
ಈ ಸಮಯದಲ್ಲಿ ಜಗತ್ತು ಸ್ಥಿರತೆ ಹಾಗೂ ಶಾಂತತೆಯನ್ನು ಹೊಂದಿರುತ್ತದೆ. ಯಾವುದೇ ರೀತಿಯ ಚಿತ್ತ ಚಂಚಲತೆಗೆ ಅವಕಾಶ ಇರುವುದಿಲ್ಲ ಪ್ರಕೃತಿ ಕೂಡ ನಿಧಾನವಾಗಿ ಕತ್ತಲೆಯಿಂದ ಬೆಳಕಿನತ್ತ ಸಾಗುತ್ತಿರುತ್ತದೆ.
ಸನಾತನ ಜ್ಞಾನಿಗಳು ಹಾಗೂ ಆಯುರ್ವೇದ ತಜ್ಞರು ಹೇಳುವ ಪ್ರಕಾರ ಈ ಸಮಯದಲ್ಲಿ ವ್ಯಕ್ತಿಯಲ್ಲಿ ಸ್ಪಷ್ಟತೆ, ನೆನಪಿನ ಶಕ್ತಿ, ಆಧ್ಯಾತ್ಮಿಕ ಅರಿವು ಹಾಗೂ ನಿಖರತೆಗಳು ಸಹಜವಾಗಿಯೇ ಹೆಚ್ಚಾಗಿರುತ್ತದೆ. ವಿಶೇಷವೆಂದರೆ ಆಧುನಿಕ ವಿಜ್ಞಾನಿಗಳು ಕೂಡ ಈ ಮಾತಿಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸುತ್ತಾರೆ.
ಮುಂಜಾನೆಯ ನಸು ಬೆಳಕಿನ ಅವಧಿಯು ನಮ್ಮ ದೈಹಿಕ ಅವಸ್ಥೆಯನ್ನು ಪ್ರಾಕೃತಿಕ ಜೈವಿಕ ಗಡಿಯಾರದ (ಸರ್ಕಾಡಿಯನ್ ಅವಸ್ಥೆಯ) ಜೊತೆಗೆ ಏಕತ್ರಗೊಳಿಸುತ್ತದೆ. ಇದು ನಮ್ಮ ದೇಹದ ಹಾರ್ಮೋನುಗಳ ಸಮತೋಲನಕ್ಕೆ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅನುವು ಮಾಡಿಕೊಡುತ್ತದೆ.
ಈ ಸಮಯದಲ್ಲಿ ಯಾವುದೇ ರೀತಿಯ ಚಿತ್ತ ಕದಡುವ ಚಟುವಟಿಕೆಗಳು ಇರುವುದಿಲ್ಲ. ಆದ್ದರಿಂದ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯು ಒಳ್ಳೆಯ ಆರೋಗ್ಯ, ಉತ್ತಮ ಉತ್ಪಾದಕತೆ ಹಾಗೂ ಮಾನಸಿಕ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಈಗಲೂ ಕೂಡ ನಮ್ಮ ಹಿಂದಿನ ಋಷಿ ಮುನಿಗಳ ಜಾಣ್ಮೆ, ಹಾಗೂ ಜ್ಞಾನ ಸಿದ್ದಿಗಳು ನಮ್ಮನ್ನು ಚಕಿತಗೊಳಿಸಲು ಕಾರಣ ಅವರ ದೈನಂದಿನ ರೂಢಿಗಳು.
ಇಡೀ ಜಗತ್ತು ಕಣ್ತೆರೆಯುವ ಮುನ್ನ, ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಏಳುವ ವ್ಯಕ್ತಿ ತನ್ನ ದೇಹ ಮತ್ತು ಮನಸ್ಸುಗಳನ್ನು ಏಕತ್ರಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾನೆ, ಆದ್ದರಿಂದಲೇ ಬ್ರಾಹ್ಮೀ ಮುಹೂರ್ತವನ್ನು ಕೇವಲ ಒಂದು ವಿಶೇಷ ಸಮಯ ಎಂದು ಮಾತ್ರ ಗುರುತಿಸದೇ ನಮ್ಮ ಬದುಕಿನಲ್ಲಿ ಅತ್ಯುನ್ನತ ಬದಲಾವಣೆಗಳನ್ನು ತರುವ ವಿಶಿಷ್ಟ ಫಳಿಗೆ ಎಂದು ಹೇಳಲಾಗುತ್ತದೆ. ಸ್ನೇಹಿತರೆ, ಪ್ರತಿ ದಿನ ಮುಂಜಾನೆ ಸೂರ್ಯೋದಯಕ್ಕಿಂತ ಮುನ್ನವೇ ಬ್ರಾಹ್ಮಿ ಮುಹೂರ್ತದಲ್ಲಿ ಏಳಲು ಪ್ರಯತ್ನಿಸಿ. ನಿಮ್ಮ ಮನಸ್ಸನ್ನು ಎಚ್ಚರಗೊಳಿಸಿ ನಿಮ್ಮ ಆತ್ಮವನ್ನು ಸುಷುಪ್ತ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ತನ್ನಿ.
ಬ್ರಾಹ್ಮಿ ಮುಹೂರ್ತ ಎಂಬ ಈ ಸುವರ್ಣಗಳಿಗೆಯನ್ನು ನಿಮ್ಮದಾಗಿಸಿಕೊಂಡು ಆಧ್ಯಾತ್ಮಿಕ ಬೆಳವಣಿಗೆ, ಸಾಮರ್ಥ್ಯದ ಹೆಚ್ಚಳ ಹಾಗೂ ಆತ್ಮೋನ್ನತಿಯ ದಾರಿಯನ್ನು ನಿಮ್ಮದಾಗಿಸಿಕೊಳ್ಳಿ.
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ಬದುಕಿಗೊಂದು ಸೆಲೆ ‘ನಿಮ್ಮ ಮನವ ಸಂತೈಸಿಕೊಳ್ಳಿ’ (ಭಾಗ- ೬೮)
- ಬದುಕಿಗೊಂದು ಸೆಲೆ ‘ಸುಡುವ ಸೂರ್ಯನಿಗೊಂದು ಪತ್ರ’ (ಭಾಗ- ೬೯)
- ಬದುಕಿಗೊಂದು ಸೆಲೆ ‘ವೈದ್ಯೆ ಮತ್ತು ಯೋಧ ಮಹಿಳೆ’ (ಭಾಗ- ೭೦)
- ಬದುಕಿಗೊಂದು ಸೆಲೆ ‘ನಿಜವಾದ ಸೌಂದರ್ಯ’ (ಭಾಗ- ೭೧)
- ಬದುಕಿಗೊಂದು ಸೆಲೆ ‘ಒಂದು ಸಹಾನುಭೂತಿಯ ಕಥೆ’ (ಭಾಗ- ೭೨)
- ಬದುಕಿಗೊಂದು ಸೆಲೆ ‘ಜೀವನೋತ್ಸಾಹಕ್ಕೆ ಮಾದರಿ ಉಷಾ ರೈ’ (ಭಾಗ- ೭೩)
- ಬದುಕಿಗೊಂದು ಸೆಲೆ ‘ಡಾ.ಬಿಂದು ಮೆನನ್’ (ಭಾಗ- ೭೪)
- ಬದುಕಿಗೊಂದು ಸೆಲೆ ‘ಹಿರಿಯ ಮಗುವಿಗೆ ಹೊರೆಯಾಗದಿರಲಿ ಭ್ರಾತೃತ್ವ’ (ಭಾಗ- ೭೫)
- ಬದುಕಿಗೊಂದು ಸೆಲೆ ‘ಗೌರಿಶಂಕರ ಪರ್ವತ ಹಾಗೂ ರಾಧಾನಾಥ ಸಿಕದರ್ ಎಂಬ ಅಪ್ರತಿಮ ಗಣಿತಜ್ಞ’ (ಭಾಗ- ೭೬)
- ಬದುಕಿಗೊಂದು ಸೆಲೆ ‘ಜೀವನದ ಏಳು ಹಂತಗಳು… ಶೇಕ್ಸ ಪಿಯರ್’ (ಭಾಗ- ೭೭)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.
